ಮುಖ ಪುಟ > ಕಲ್ಲರೆ ಮನೆ, ಹಾಗೆ ಸುಮ್ಮನೆ, Haage Summane.., kallaremane > ಅವನ ಚಿತ್ರಗಳ ನೆನಪಲ್ಲಿ…..

ಅವನ ಚಿತ್ರಗಳ ನೆನಪಲ್ಲಿ…..

ಮೊದಮೊದಲು ಕಣ್ಣಳತೆಯ

ದೂರದಲ್ಲೇ ಕುಳಿತು ನೋಡುತ್ತಿದ್ದವ

ಪಕ್ಕಾಪೋಲಿಯೆನಿಸಿದರೂ

ಸಮಯ ಪಾಲಕನೆನಿಸಿದ್ದ.

 

ಬರುಬರುತ್ತಾ ಹತ್ತಿರಾದವನ

ಜೊತೆ ಹೆಜ್ಜೆ ಹಾಕಿದರೆ

ತುಂಬುಗಾಂಭೀರ್ಯ ತೋರಿದರೂ

ಮೋಡಿಗಾರ ಅನ್ನಿಸಿಬಿಟ್ಟ.

 

ನೋಡುತ್ತಲೇ ಚುಂಬಕದಂತೆ

ಸೆಳೆದವನ ಉಸಿರಿಗೆ ಉಸಿರು

ತಾಕುವಂತೆ ಕುಳಿತು ಮೈಮರೆತರೆ

ಶ್ರೇಷ್ಠಕಲಾವಿದನೆನಿಸಿಬಿಟ್ಟ

 

ಮನಸು ಗೆದ್ದವನ ಮನೆಹೊಕ್ಕರೆ

ಸುತ್ತೆಲ್ಲ ಚಿತ್ರಗಳ ರಾಶಿ

ನಡುವೆ ನನ್ನನ್ನೇ ಚಿತ್ರಿಸಿಟ್ಟು

ಬೆರಗುಹುಟ್ಟಿಸಿ ನಗುತ್ತಿದ್ದ

 

ಕೊನೆಗೊಮ್ಮೆ ಸಂಪೂರ್ಣ ಸೋತು

ಅಪ್ಪುಗೆಯ ಅಪ್ಪಣೆ ಕೇಳಿದರೆ

ಮೌನಕ್ಕೆ ಮೊರೆಹೋದವ

ದಿವ್ಯನಿರ್ಲಕ್ಷ್ಯದಲ್ಲೇ ಉತ್ತರಿಸಿದ್ದ.

 

ಚಿಕ್ಕದೊಂದು ಸುಳಿವೂ ಇಲ್ಲದೆ

ಉದ್ಭವಿಸಿದ ಅವನ ಚಿತ್ರ

‘ನನ್ನೊಳಗೆ’ ಮನೆಮಾಡಿ ಕಾಯುತ್ತಿದೆ

ಅವನ ಚಿತ್ರರಾಶಿ ಸೇರಲು.

Advertisements
 1. Brunda
  22/10/2008 ರಲ್ಲಿ 8:58 ಫೂರ್ವಾಹ್ನ

  kavana…….thumba chenagide,

 2. ವೈಶಾಲಿ
  23/10/2008 ರಲ್ಲಿ 9:05 ಫೂರ್ವಾಹ್ನ

  ಚಂದದ ಕವಿತೆ. ಇಷ್ಟವಾಯ್ತು.

 3. 23/10/2008 ರಲ್ಲಿ 10:14 ಫೂರ್ವಾಹ್ನ

  ಆಪ್ತವಾದ ಸ್ವಗತ. ಚಂದವಿದೆ

 4. ವಿಜಯರಾಜ್ ಕನ್ನಂತ
  23/10/2008 ರಲ್ಲಿ 5:54 ಅಪರಾಹ್ನ

  chenda iitu

 5. Suvarna Hegde
  24/10/2008 ರಲ್ಲಿ 4:49 ಅಪರಾಹ್ನ

  simply very nice……..ಸುರಿವ ಮಳೆಯ ನೋಡುತ್ತಾ ನೆನಪಿನ ಲೋಕಕ್ಕೆ ತೆರೆದುಕೊಳ್ಳಲು ಚೆನ್ನಾಗಿದೆ

 6. NagarajBhat Upponi
  29/10/2008 ರಲ್ಲಿ 4:56 ಅಪರಾಹ್ನ

  Its realy superb. in this generation reading of kannada poem itself is occation. but this webpage creation is simply superb.i congatulates mr.mahesh for such good work

 7. sneha
  30/10/2008 ರಲ್ಲಿ 4:43 ಅಪರಾಹ್ನ

  ಚಿಕ್ಕದೊಂದು ಸುಳಿವೂ ಇಲ್ಲದೆ

  ಉದ್ಭವಿಸಿದ ಅವನ ಚಿತ್ರ

  ‘ನನ್ನೊಳಗೆ’ ಮನೆಮಾಡಿ ಕಾಯುತ್ತಿದೆ

  ಅವನ ಚಿತ್ರರಾಶಿ ಸೇರಲು.

  e saalu gallanna alisibittiddira neevu. Idu iddiddare innu chennagirodu.

 8. Kallare
  30/10/2008 ರಲ್ಲಿ 5:41 ಅಪರಾಹ್ನ

  ಸ್ನೇಹಾ/ಮೇಘನಾ.. ಆ ಸಾಲುಗಳು ಮತ್ತೆ ಸೇರಿವೆ. ಜೊತೆಗಿಷ್ಟು ???? ನನ್ನ ತಲೆ ಒಳಗೆ… ಇರ್ಲಿ.
  ಜಿತೇಂದ್ರ, ವೈಶಾಲಿ,ವಿಜಯರಾಜ್,ಸುವರ್ಣ…ಧನ್ಯವಾದಗಳು. ಆಗಾಗ ಬರ್ತಾ ಇರಿ ಮನೆಗೆ.
  ನಿಮ್ಮವ,
  ಕಲ್ಲರೆ

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: