ಮುಖ ಪುಟ > Haage Summane.. > ಕಾಲದ ಜೊತೆಗೊಮ್ಮೆ…..

ಕಾಲದ ಜೊತೆಗೊಮ್ಮೆ…..

ಸುರಿವ ಮಳೆಯೇ ಬೇಕಿಲ್ಲ
ಪ್ರವಾಹ ಉಕ್ಕಿ ಹರಿಯಲು
ಕಾಲನ ತೆಕ್ಕೆಯಲ್ಲಿನ್ನು
ಪ್ರವಾಹಗಳ ಪ್ರವಾಹ
ಆಸರೆಗಾಗಿ ಅಲೆದಾಟ

ಕಾಲ ಮುಂದಕ್ಕೆನೂ ಓಡಿಲ್ಲ
ಓಡಿದ್ದು ನಿಯಮ ಮೀರಿದ
ಹುಚ್ಚುಕೋಡಿ ಮನಸ್ಸು
ಮನುಷ್ಯನೊಳಗೊಂದು ಅರಿವಿಲ್ಲದ
ಮರ್ಕಟ ಬೆಳವಣಿಗೆ

ಕಾಲ ಕಾಯಿಸುತ್ತಿಲ್ಲ
ಕಾದು ಪಡೆವ ಬಯಕೆಯೇ ಇಲ್ಲ
ಕೈಚಾಚಿ ಎಲ್ಲ ಪಡೆದವನು
ತನ್ನ ಆತ್ಮವನ್ನೇ ತ್ರಪ್ತಿಪಡಿಸಿಲ್ಲ
ಅತ್ರಪ್ತಿಯ ಹೊಗೆ ಎಲ್ಲೆಡೆ

ಒಂದರ ಹಿಂದೊಂದು ಚಕ್ರ
ಸುತ್ತಿ ಹೊರಟಲ್ಲಿಗೇ ಮರಳುತ್ತಿವೆ
ಕಾರುಬಾರುಗಳ ಸಾಮ್ರಾಜ್ಯದಲ್ಲಿ
ಕಳೆದುಹೋದವರ ನಡುವೆ 
ಹುಲ್ಲುಕಡ್ಡಿಗೇನು  ಕೆಲಸ???

Advertisements
Categories: Haage Summane.. ಟ್ಯಾಗ್ ಗಳು:, ,
  1. 25/10/2008 ರಲ್ಲಿ 8:05 ಅಪರಾಹ್ನ

    ಇದು ಸಾಮಾನ್ಯ ಮನುಷ್ಯನ ಮನದಾಳದ ಯೋಚನೆಯೇ? ಜನಸಾಮಾನ್ಯನ ಪರಿಸ್ಥಿತಿಯೇ.. ? ಹಾಗೆಂದು ಅನಿಸುತ್ತಿದೆ.. ತಪ್ಪಾದಲ್ಲಿ ಕವಿಗಳು ತಿಳಿಸಬೇಕು..

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: