ಮುಖ ಪುಟ > ಹಾಗೆ ಸುಮ್ಮನೆ > ಹುಡುಕಬೇಡ ಗೆಳೆಯಾ….

ಹುಡುಕಬೇಡ ಗೆಳೆಯಾ….

ನಿನ್ನ ಹುಡುಕುತ್ತಾಅನ್ನೋ ಹೆಸರಲ್ಲಿ ಒಂದು ಪೋಸ್ಟ್ ಮಾಡಿದ್ದೆ. ಅಕ್ಟೋಬರ್ ೧೬ಕ್ಕೆನೀವು ನೋಡಿದ್ರೋ ಇಲ್ವೋ.. ಕೆಂಡಸಂಪಿಗೆ ಹರಸಿದ್ದು ಆವತ್ತೇವಿಷಯ ಅದಲ್ಲ. ಅಲ್ಲೊಂದು ಪ್ರತಿಕ್ರಿಯೆ ಇದೆ, ಸ್ನೇಹಾ ಅನ್ನೋ ಹೆಸರಲ್ಲಿ. ಯಾರೋ ಗೊತ್ತಿಲ್ಲ. ಆದ್ರೆ ಇವತ್ತಿನ ವಿಷ್ಯ ಅದೇ/ಅವಳೇ….
ಮತ್ತೆ ಮತ್ತೆ ಮನೆಗೆ ಬಂದವರಲ್ಲಿ ಸ್ನೇಹಾ ಅನ್ನೋರೂ ಒಬ್ರುಆದ್ರೆ ಬೇರೆ ಬೇರೆ ಹೆಸರಲ್ಲಿ ಬಂದ್ರು. ಒಮ್ಮೆ ಸ್ನೇಹಾ ಮತ್ತೊಮ್ಮೆ ಮೇಘನಾ ಇನ್ನೊಮ್ಮೆ ಜೀವ ಅಂತೆಲ್ಲಾ ಬಂದವರು ಚಂದದ ಸಾಲುಗಳನ್ನ  ನೀಡಿದ್ದಾರೆ.

 
ಸಾಲುಗಳು ಇಲ್ಲಿವೆ ನಿಮಗಾಗಿಅವರೂ ಓದ್ಕೊತಾರೆ.  Mysterious Meghanaa ಅವ್ರು.
ನೀವು ಬರ್ತಾ ಇರಿ ಮನೆಗೆ..
ನಿಮ್ಮವ
ಕಲ್ಲರೆ.

ಹುಡುಕಬೇಡ ಗೆಳೆಯಾ..
ಉರಿಬಿಸಿಲ ಬಯಲಲ್ಲಿ ನಾನಿಲ್ಲ
ನಿನ್ನ ನೆರಳಲ್ಲೂ ನಾನಿಲ್ಲ.
ತಣ್ಣಗಿನ ಪಂಜರದಲ್ಲಿ ಬಂಧಿಯಾಗಿದ್ದೇನೆ
      ******
ಕೂಡಿ ಮಾಡಿಟ್ಟ ಗಾಳಿಪಟದ ನೆನಪಿದೆ
ನೀ ಅದಕ್ಕೆ ಹೆಸರಿಟ್ಟ ಘಳಿಗೆಯೂ.
ಆದರೀಗ ಸೂತ್ರವಿಲ್ಲದ ಪಟ ಅದು
ಆಕಾಶದಲ್ಲಿಲ್ಲ ಕೆಳಗೆಲ್ಲೋ ಮಣ್ಣಾಗಿದೆ..
      ******
ಮುನಿಸೆಲ್ಲ ಮರೆತು ನಿನ್ನಲ್ಲಿಗೆ ಹೊರಟು
ಜಗವೆಲ್ಲ ಮರೆತು ನಿನ್ನಲ್ಲಿಗೆ ಬರಲಿದ್ದೆ
ವಿಧಿ ವಿಧಿ ತಪ್ಪಿಸಿ ಕತ್ತಲಿಗೆ ತಳ್ಳಿದೆ
ನಕ್ಷತ್ರಗಳ ನಡುವೆಲ್ಲಿ ಕಂಡೇನು??
      ******
ಹುಡುಕಬೇಡ ಗೆಳೆಯಾ..
ಹೋಗಿರುವೆ ನಾನು ತಿರುಗಿ ಬಾರದ ಲೋಕಕ್ಕೆ..
Advertisements
 1. sneha
  06/11/2008 ರಲ್ಲಿ 11:36 ಫೂರ್ವಾಹ್ನ

  hmm nanu od’dhe. Kavanagalanna baredu abhyasa illa nanage. Neevu baredaddana nodi baribeku anstu..Idu nanna modalne baraha.adanna tiddiddakke dhanyavada.
  Thanks for putting it here.
  Nimma baravanigeya shaili ista aytu nanage. Heege barita iri.

  Mysterious Meghana

 2. sneha
  06/11/2008 ರಲ್ಲಿ 11:48 ಫೂರ್ವಾಹ್ನ

  Adre ondu maathu Jeeva anno hesaralli bandaddu nanalla.

 3. Kallare
  06/11/2008 ರಲ್ಲಿ 12:01 ಅಪರಾಹ್ನ

  ಬರೆವ ವಿಷಯ, ಶೈಲಿ, ತಿದ್ದೋದು… ಅದೆಲ್ಲ ಅತ್ಲಾಗಿರ್ಲಿ. ಸ್ವಂತಿಕೆ ಅನ್ನೋದೇ ಇಲ್ದಿರೋ ನಿಮ್ಮಂತೋರು ಮಾತ್ರ ಹಾಗೆ ನಾಲ್ಕಾರು ಹೆಸರಲ್ಲಿ ಬೇಡದ್ದು ಮಾಡ್ತಾ ಕೂತ್ಕೊಳೋದು. ಅಷ್ಟರ ಮೇಲಿಂದ ಸುಳ್ಳು ಬೇರೆ… ನೀವು ಸುಳ್ಳು ಹೇಳಿದ್ರೂ ನಿಮ್ಮ ಕಂಪ್ಯೂಟರ್ ಸುಳ್ಳು ಹೇಳಲ್ಲ, ನಿಮಗೆ ಗೊತ್ತಿರಲಿ.
  ನೀವೊಂಥರಾ ಮಾನಸಿಕ ರೋಗಿ ಅನ್ಸುತ್ತೆ…
  ಇರ್ಲಿ. ಹಾಗೆ ನಿಮ್ಮ ಬರಹ ನಿಮ್ಮ ಹೆಸರಲ್ಲಿ ಹೇಗಿದ್ಯೋ ಹಾಗೆ ಹಾಕ್ಬೇಕು ಅನ್ಸ್ತು… ಹಾಕಿದೇನೆ.
  ಮಾನಸಿಕ ಅಸ್ವಸ್ಥರು ಹೇಗಿರ್ತಾರೆ ಅಂತ ಮನೆಗೆ ಬಂದವರೆಲ್ಲ ನೋಡ್ಕೋತಾರೆ ಬಿಡಿ..

 4. sneha
  06/11/2008 ರಲ್ಲಿ 1:12 ಅಪರಾಹ್ನ

  thanks for your comments.
  ondu nirdarakke baro munche swalpa yochne madi.
  All the best.
  Good Bye.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: