ಮುಖ ಪುಟ > ಹಾಗೆ ಸುಮ್ಮನೆ > ಶುಕ್ರವಾರ ರಾತ್ರಿಯ ಆರು ಎರಡರ ಇಕ್ಕಟ್ಟು ಜಾಗದಲ್ಲೊಮೆ…

ಶುಕ್ರವಾರ ರಾತ್ರಿಯ ಆರು ಎರಡರ ಇಕ್ಕಟ್ಟು ಜಾಗದಲ್ಲೊಮೆ…

ಚಾದರದಂತಾ ಒಂದು ಹೊದಿಕೆ, ಲೀಟರಿನಷ್ಟು ನೀರು, ಒಂದು ರೂಮ್ ಫ್ರೆಶ್ನೆರ್ ಇವಿಷ್ಟರ ಜೊತೆ ಹೊಟ್ಟೆ ತುಂಬಿಕೊಳ್ಳಲಿಷ್ಟು ಕಟ್ಟಿಸಿಕೊಂಡೆನೆಂದರೆ ಅದು ಶುಕ್ರವಾರ ಸಂಜೆ ಎಂದರ್ಥ. ನನ್ನ ಮಟ್ಟಿಗೆ ವಾರಾಂತ್ಯದ ಎರಡು ರಾತ್ರಿಗಳೆಂದರೆ ಬಸ್ಸಿಗೆ ಮೀಸಲಿಟ್ಟ ರಾತ್ರಿಗಳು. ಭರ್ತಿ ಒಂಬತ್ತರಿಂದ ಹತ್ತು ತಾಸಿನ ಪ್ರಯಾಣಕ್ಕೆ ಆರು ಎರಡರ ಸ್ಲೀಪರಿನಲ್ಲಿ  ಒಂದಿಷ್ಟು ಜಾಗ ಕಡಿಮೆಯೇ ಆದರೂ ಇಷ್ಟಪಟ್ಟು ಹೊರಡುತ್ತೇನೆ..

ತಂದಿದ್ದನ್ನೆಲ್ಲ ತಿಂದು, ಅರ್ಧ ಬಾಟಲಿಯಷ್ಟು ನೀರು ಕುಡಿದು ಒಮ್ಮೆ ಕೈಚಾಚಿದೆನೆಂದರೆ ಸೀದಾ ಬಸ್ಸಿನ ಟಾಪ್ ಎಸೆಯಬೇಕಾದುದನ್ನೆಲ್ಲ  ಬಸ್ಸಿನ ತಲೆಯಮೆಲಿಂದಲೇ ಎಸೆದುಸೀಟಿನ ಸುತ್ತೆಲ್ಲ ಒಮ್ಮೆ ಸ್ಪ್ರೇ ಮಾಡಿ ಉದ್ದುದ್ದ ಮಲಗಿದೆನೆಂದರೆ  ಎರಡಿಂಚು ಜಾಗ ಕಡಿಮೆಯಾಗಿ ಕಾಲು ಸೊಟ್ಟಗಾದರೂ ಸರಿ.. ಆಹಾ ಎಂಥಾ ನಿದ್ದೆ. ಎಲ್ಲೆಲ್ಲೂ ಎಬ್ಬಿಸುವುದಿಲ್ಲ ಪಾಪದ ಬಸ್ಸು. ಒಮ್ಮೊಮ್ಮೆ ತುಂಬಾ ಅರ್ಜೆಂಟ್ ಆಗಿ ನಾನೇ ಎದ್ದೇಳಬೇಕು. ಅಷ್ಟು ಬಿಟ್ರೆ ಕ್ಲೀನರ್ ಹುಡುಗ ಬಂದು ಏಳಣೋ ಅಂದ್ರಷ್ಟೇ ಎದ್ದೇಳು ಮಂಜುನಾಥ ಆಗೋದು..  

ಮಲಗುವ ಮುನ್ನ ಪಕ್ಕದ ಸಾಬರ ಕುಟುಂಬದ ಗಲಾಟೆ ಕೇಳುತ್ತಾ ಎರಡಡಿ ಜಾಗದಲ್ಲಿ ನನ್ನನ್ನು ನಾನು ಫಿಟ್ ಮಾಡಿಕೊಳ್ಳುತ್ತಿದ್ದರೆ ಶೆಟ್ಟಿ ಡ್ರೈವರ್ ಟ್ರಾಫಿಕ್ಕಿಗೆ ಶಾಪ ಹಾಕುತ್ತಾ ಇಂಚಿಂಚೆ ಮುಂದೆ ಹೋಗುತ್ತಾನೆ. ಇತ್ತ ನಾನು ಇನ್ನೊಬ್ಬರ್ಯಾರೂ ಕೇಳಿಕೊಳ್ಳದಂತೆ ಕಿಶೋರ್ ಕುಮಾರನನ್ನು ಕಿವಿ ತುಂಬಿಕೊಳ್ಳುತ್ತೇನೆ …

ಹಮ್  ಸೇ ಮತ್ ಪೂಚೋ ಕೈಸೆ

ಮಂದಿರ್ ಟೂಟಾ! ಸಪನೋ0ಕಾ….

ಸಂಜೆ ಹಾಗೂ ಸಂಜೆ ನಂತರದ ಸಮಯದಲ್ಲಿ ಅವರ ದರ್ಧಭರಿ ಹಾಡು ಕೇಳುತ್ತಿದ್ದರೆ ನಡುವಲ್ಲೊಮ್ಮೆ ಲತಾಜಿ ಕೂಡಾ ಧ್ವನಿ ಕೂಡಿಸಿ ಹುಚ್ಚೆಬ್ಬಿಸುತ್ತಾರೆ. ಅಂತಾದ್ದೊಂದು ಮಿಕ್ಸ್ ಕೇಳುತ್ತಾ ಹೊರಟರೆ ಸಾಬರ ಹುಡುಗರ ಗಲಾಟೆಯ ನಡುವೆಯೂ ಕಳೆದುಹೋಗುತ್ತೇನೆ..

ಮೇರಿ ಅವಾಜ್ ಹಿ ಪೆಹೆಚಾನ್  ಹೈ….

ಘರ್ ಯಾದ ರಹೇ

ಲತಾ ಹಾಡುತ್ತಿದ್ದರೆ ಯಾವ ಹೊತ್ತಿನಲ್ಲಿ ನಿದ್ದೆ ಆವರಿಸುತ್ತದೋ??? ಮಲಗಿದ್ದು ಸಾಕು ಇಳಿ ಅಂತ ಶೆಟ್ಟಿ ಕೂಗಿದರೆ ಕೈಲೊಂದು ಹಡಪ ಹಿಡ್ಕೊಂಡು ಜಾರಿ ಹೋದ ಪ್ಯಾಂಟು ಎಳೆದುಕೊಳ್ಳುತ್ತಾ ಮನೆಯತ್ತ ಹೊರಡುತ್ತೇನೆಇತ್ತ ಸಾಬರ ಹುಡುಗರು ಮಾತಾಡುತ್ತಲೇ ಇರುತ್ತಾರೆ.. ಹಾಡಿ ಬದಿ ಮನೆಯ ಬಾಕಡರ ಹಾದಿಯಪ್ಪನ ಮಗ ಬೆಳಬೆಳಿಗ್ಗೆ ಹಾಡು ಕೇಳುತ್ತಿರುತ್ತಾನೆ..

ಯಾವ ಚಿಪ್ಪಿನಲ್ಲಿ ಯಾವ ಹನಿಯು…..

Advertisements
 1. Tina
  20/11/2008 ರಲ್ಲಿ 8:41 ಅಪರಾಹ್ನ

  ಪ್ರತೀ ಶುಕ್ರವಾರ ಹತ್ತು ತಾಸು ಪ್ರಯಾಣ ಮಾಡುತ್ತೀರ ಮತ್ತೆ ಭಾನುವಾರ ವಾಪಾಸು ಹತ್ತು ತಾಸು!! ಮೆಚ್ಚಬೇಕು. ಆಮೇಲೆ ರೂಮ್ ಫ್ರೆಶ್ನರ್ ಸೀಟಿನ ಸುತ್ತ ಯಾಕೆ? ಆ ಬಸ್ನಲ್ಲಿ ಅಷ್ಟೊಂದು ಕೆಟ್ವಾಸ್ನೆ ಇರತ್ತಾ?

 2. 21/11/2008 ರಲ್ಲಿ 11:22 ಫೂರ್ವಾಹ್ನ

  ಐದು ದಿನ ಬೆಂಗಳೂರು ಎರಡು ದಿನ ಊರು… ಅಭ್ಯಾಸ ಆಗ್ಬಿಟ್ಟಿದೆ ಟೀನಾ ಮೇಡಂ… ಆಮೇಲೆ ನಾನು ಹೊಗೊವಾಗ್ಲೆಲ್ಲ ಜೊತೆಗಿಷ್ಟು ಸೆಂಟಿನ ಜನ ಇದ್ದೇ ಇರ್ತಾರೆ… ಆ ವಾಸನೆ ಸಹಿಸೋದು ತುಂಬಾನೆ ಕಷ್ಟ.. ಅದ್ಕೇ ರೂಮ್ ಫ್ರೆಶ್ನರ್ ಇಟ್ಕೋತೀನಿ. ಸೆಂಟು ಫ್ರೆಶ್ನೆರ್ ಹೊಡೆದಾಟನೇ ಹೊಡೆದಾಟ….

 3. ವೈಶಾಲಿ
  21/11/2008 ರಲ್ಲಿ 6:44 ಅಪರಾಹ್ನ

  ಹ್ಹ ಹ್ಹ ಹ್ಹಾ…. ಚೆನ್ನಾಗಿದೆ 🙂
  ಪದ್ಯ ಚಂದ. ಅದಕ್ಕಿಂತ ಗದ್ಯದ ಶೈಲಿ ಚಂದ! ಇಷ್ಟ ಆಯ್ತು…. keep going…
  ಪ್ರೀತಿಯಿಂದ.
  -ವೈಶಾಲಿ

 4. Tina
  21/11/2008 ರಲ್ಲಿ 9:28 ಅಪರಾಹ್ನ

  🙂 ಹಂಗಾ ವಿಷ್ಯ?

 5. 22/11/2008 ರಲ್ಲಿ 11:01 ಫೂರ್ವಾಹ್ನ

  ನಾನೂ ಅಷ್ಟೆ, ಕಲ್ಲರೆಯವರೆ…ಪರರಾಜ್ಯದಲ್ಲಿದ್ದು ಕುಟುಂಬವನ್ನು ಕರುನಾಡಿನಲ್ಲಿ ಬಿಟ್ಟು ಒಂದೂವರೆ ವರ್ಶ ಪ್ರತಿ ವಾರಾಂತ್ಯದಲ್ಲೂ ಮನೆಗೆ ಹೋಗಿ ಬರುತ್ತಿದ್ದೆ…ಸಧ್ಯ, ಈಗ ಎಲ್ಲಾ ಒಂದೆ ಕಡೆ ಇದ್ದೇವೆ…ನನಗೆ ಅರ್ಥವಾಗುತ್ತೆ, ನಿಮ್ಮ ಕಷ್ಟ ಸುಖ…

  ಈ ವೀಕೆಂಡ್ ಪ್ರಯಾಣಗಳು ನನ್ನಂತೂ ’ವೀಕನ್ ’ (weaken) ಮಾಡಿ ಬಿಟ್ಟಿದ್ದವು..
  ಅಂದ ಹಾಗೆ ನನ್ನ ಶೃಂಗಾರಮಯ ಕಾಮರಸಭರಿತ ಬ್ಲಾಗಿಗೆ ಬನ್ನಿ,ಒಮ್ಮೆ..

  ಓದಿ ನೋಡಿ, ಟೀಕಿಸಿ..ಎಲ್ಲಕ್ಕೂ ರೆಡಿ

  http://shrungara.wordpress.com
  http://shrungara.blogspot.com

  ಇತಿ
  ನಿಮ್ಮ ಆತ್ಮೀಯ ಕತೆಗಾರ

 6. Kallare
  22/11/2008 ರಲ್ಲಿ 11:34 ಫೂರ್ವಾಹ್ನ

  ವೈಶಾಲಿ,
  ಈ ಪದ್ಯ ಗದ್ಯ ಎಲ್ಲಾ ಓದೋದು ಮಾತ್ರ ಸಾಕು, ಬ್ಲಾಗ್ ಮುಚ್ಚಿ ಮನೇಲಿ ಮಲಗ್ವಾ ಅಂದ್ಕೊಂಡಿದ್ದೆ. ನೀವೆಲ್ಲಾ ಹೇಗಂತೀರೋ ಹಾಗೆ…

  ಟೀನಾ ಮೇಡಂ,
  ವಿಷ್ಯ ಇನ್ನೂ ಇದೆ ಹೇಳ್ತೇನೆ ಇರಿ.. ಇದು ಶುರು ಅಷ್ಟೇ.

  ಆಗಾಗ ಬರ್ತಾ ಇರಿ..

 7. chetana chaitanya
  25/11/2008 ರಲ್ಲಿ 5:03 ಅಪರಾಹ್ನ

  ಹಾಗೆ ವಾರಕ್ಕೊಮ್ಮೆ ಊರಿಗೆ ಹೋಗುವ ನಿಮ್ಮ ಮೇಲೆ ನನಗೆ ಹೊಟ್ಟೆಕಿಚ್ಚು…

 8. Suvarna
  06/12/2008 ರಲ್ಲಿ 6:50 ಅಪರಾಹ್ನ

  ravi belagere dhati swalpa bandideyana antha anistu, still very good one.
  adru vidha vidha sahityadalli bareyadu ishta agtu………..

  good luck

 9. Kallare
  06/12/2008 ರಲ್ಲಿ 7:15 ಅಪರಾಹ್ನ

  ಚೇತನಾ,
  ಬನ್ನಿ ನಿಮ್ಮನ್ನೂ ಕರ್ಕೊಂಡು ಹೋಗ್ವಶುಕ್ರವಾರ ಹೊರತು ಸೋಮವಾರ ಬರೋದು..

 10. Kallare
  06/12/2008 ರಲ್ಲಿ 7:18 ಅಪರಾಹ್ನ

  ಸುವರ್ಣ,
  ಇದೇನ್ರೀ ಜನರನ್ನಾ ಅಟ್ಟಕ್ಕೆ ಹತ್ಸೋದ್ರಲ್ಲಿ ನಾವೊಂದಿಷ್ಟು ಜನ ಮುಂದಿದೀವಿ ಅಂದ್ಕೊಂಡ್ರೆ, ನೀವು ಇನ್ನೂ ಮುಂದಕ್ಕೆ ಹೋಗ್ತೀನಿ ಅಂತೀರಿ…
  ಬರ್ತಾ ಇರಿ..

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: