ಮುಖ ಪುಟ > ಹಾಗೆ ಸುಮ್ಮನೆ > ನೆನಪುಗಳ ನೋವು ಚಿರನೂತನ…

ನೆನಪುಗಳ ನೋವು ಚಿರನೂತನ…

ನೆನಪಿನಲ್ಲೇ ದಿನ ಕೊಲ್ಲುತ್ತಿದ್ದೇನೆ ಗೆಳತಿ
ಛಿದ್ರವಾದ ಕನಸುಗಳಿಗೆ ತೇಪೆ ಹಾಕುತ್ತಿದ್ದೇನೆ

ಕನಸುಗಳ ಮೋಡವನ್ನೇ ಹೊತ್ತು ತಂದವಳು
ಭರವಸೆಯ ಮಳೆ ಸುರಿಸಿದ್ದೆ ಅಂದು
ಮೇಲೆ ನೋಡಿದರೀಗ ಆಗಸವೂ ಅಣಕಿಸುತ್ತಿದೆ
ಗೆಳತೀ, ಸೂರೊಳಗಿನ ಶಾಂತಿಯೇ ಕದಡಿದೆ

 

 ಬಂದವಳು ಹಾಗೇ ಬರಲಿಲ್ಲ ನೀನು
ಮಧುರ ಘಳಿಗೆಗಳ ಗುಚ್ಚವನ್ನೇ ತಂದಿದ್ದೆ
ಭಂದವೇ ಈಗ ಬಂಧನವಾಗಿದೆ
ನೆನಪುಗಳ ನೋವು ಮಾತ್ರ ಚಿರನೂತನ  

 

ಕಾಯಿಸುವಾತ ಕೈತುಂಬಾ ನೀಡುತ್ತಾನೆ
ಸುಂದರ ಬದುಕು ಹತ್ತಿರದಲ್ಲೆ ಇದೆಯೆಂದೇ?
ಹತ್ತಿರವೆಷ್ಟು ದೂರವೋ ಕಾಣೆ
ಒಂದಿನಿತೂ ಮುನ್ನಡೆಯದವನಾಗಿದ್ದೇನೆ

 

ಕಾಲಕ್ಕೆ ಎಲ್ಲಾ ಮೀರುವ ಶಕ್ತಿಯಿದೆಯೆಂದೆ
ನೀನು ಕಾಲವನ್ನೂ ಮೀರಿದವಳಾ?
ಸವಿ ನೀಡಿದವಳು ಸುಲಿಗೆಯನ್ನೂ ಮಾಡಿದೆ
ನಿಂತ ನೀರಲ್ಲಿ ಕಲ್ಲೆಸೆದು ಹೊರಟೆ

 

ಸರ್ವಶಕ್ತನ ಮೇಲಿನ ನಂಬಿಕೆಯೇ ಇಲ್ಲವಾಗಿ
ಕತ್ತಲೆಯಲ್ಲೇ ಬದುಕು ನಿಂತಿದೆ
ಕಾಣದ ದೇವರ ಮಡಿಲಲ್ಲಿ ನಾನೀಗ
ಹಗಲಿರುಳೂ ಬಿಕ್ಕಳಿಸುತ್ತಿದ್ದೇನೆ..

ಇಲ್ಲ ಬಿಡು, ಬದುಕುತ್ತಿದ್ದೇನೆ.

Advertisements
 1. 24/11/2008 ರಲ್ಲಿ 11:49 ಅಪರಾಹ್ನ

  ಕಲ್ಲೇರಿ ಮ೦ಜುನಾಥ..
  ಕಾಯುಸುವಾತ ಕೈತು೦ಬಾ ನೀಡುತ್ತಾನೆ.. ಎ೦ದ ನಿಮ್ಮ ಆಶಾವಾದ ನ೦ಗೆ ಇಷ್ಟ ಆತು..
  ಬಿಕ್ಕಳಿಸುತ್ತಿಲ್ಲ ..ಬದುಕುತ್ತಿದ್ದೇನೆ ಜಷ್ಟ್ ಸುಪರ್

 2. 26/11/2008 ರಲ್ಲಿ 3:07 ಅಪರಾಹ್ನ

  Fantastic…………………. superb……………….. adbutha………………….

 3. Kallare
  26/11/2008 ರಲ್ಲಿ 9:30 ಅಪರಾಹ್ನ

  ಸಿದ್ದು,
  ನೀವು ಚೆನ್ನಾಗಿದೆ ಅಂದ್ರೆ ತುಂಬಾ ಸಂತೋಷ. ನಾನು ಎರಡಕ್ಷರ ಬರೆದೇನು ಅನ್ಸಿದ್ದರ Output ಈ ಬರಹಗಳು. ಚೆನ್ನಾಗಿ ಬರ್ಯೋರ ಜೊತೆ ಸುಮಾರಾದ್ದಾದ್ರೂ ಸಾಧ್ಯಾ ಆಗತ್ತಾ ಅಂತ ಪ್ರಯತ್ನ ಮಾಡ್ತಿದೀನಿ.
  ಅಂದ್ಹಾಗೆ ನನ್ ಹೆಸರು ಮಹೇಶ್ ಅಂತ. ಕಲ್ಲರೆ ಅನ್ನೋದು ಮನೆ ಮನೆಯಿಂದಾಗಿ ಸೇರ್ಕೊಂಡಿದ್ದು. 🙂

 4. Kallare
  26/11/2008 ರಲ್ಲಿ 9:40 ಅಪರಾಹ್ನ

  Prasad,

  odokeno chennaagide nimm maatu..aadre argiskolodu kashta sir.. ashtondu olle maatugalige arha alveno..

  hmm.. neevu siddu ibroo hosadaagi bandideeri manege… khushi aatu. bartaa iri aagaaga.

 5. 27/11/2008 ರಲ್ಲಿ 6:23 ಅಪರಾಹ್ನ

  ಮಹೇಶ್ ಅವರೆ, ಕೊನೆ ಪ್ಯಾರಾ ಇಷ್ಟ ಆಯ್ತು. ಮತ್ತೆ ಬರೆಯುತ್ತಿರಿ. ಓದುತ್ತಿರುತ್ತೇವೆ

 6. Nagaraja
  27/11/2008 ರಲ್ಲಿ 6:51 ಅಪರಾಹ್ನ

  ಓದುತ್ತಿದ್ದಂತೆ, ಬೇಡ ಬೇಡವೆಂದರೂ ಬಂದು ಹೋದ ಕಣ್ಣ ಹನಿಗಳು ನೆನಪುಗಳ ಮಾತ್ರ ಉಳಿಸಿ ಹೋದವು 🙂

 7. Vishwesh Bhat
  28/11/2008 ರಲ್ಲಿ 12:32 ಅಪರಾಹ್ನ

  Nice one Sir 🙂

 8. Kallare
  28/11/2008 ರಲ್ಲಿ 1:31 ಅಪರಾಹ್ನ

  ಶ್ರೀದೇವಿ,
  ಖುಷಿಯಾಯ್ತು ನೀವು ಬಂದಿದ್ದು… ಆಗಾಗ ಬರ್ತಾ ಇರಿ.

  ನಾಗರಾಜ್,
  ಏನಿದು? ಕಷ್ಟಕ್ಕೆ ಹಾಕಿದ್ಯಲ್ಲಪ್ಪೋ… ಅಪರೂಪದ ಅತಿಥಿ ನೀನು.

  ವಿಶ್ವೇಶ್,

  thanks

 9. 02/12/2008 ರಲ್ಲಿ 11:25 ಫೂರ್ವಾಹ್ನ

  ಈ ಕವನ ತುಂಬಾ ಹಿಡಿಸಿತು ಕಲ್ಲರೆಯವರೇ…

  ಇಂಥ ಕಾಡುವ ಕವಿತೆ ಬರೀತಿರಿ…

 10. Jani.....
  04/12/2008 ರಲ್ಲಿ 8:48 ಫೂರ್ವಾಹ್ನ

  yaravalu mareyalagada gelatii..???

 11. Kallare
  04/12/2008 ರಲ್ಲಿ 9:47 ಫೂರ್ವಾಹ್ನ

  ರಂಜಿತ್,
  ಹಾಗಂತೀರಾ… ಚೆಂದದ ಕವಿತೆ ಬರ್ಯೋರ ಜೊತೆಗೆ ನಂದೂ ಒಂದು ಪ್ರಯತ್ನ ಅಷ್ಟೇ. ಹೀಗೆ ಬರದು ಹಾಕೊದಕ್ಕಿಂತ ನೀವೆಲ್ಲ ಬರ್ದಿದ್ದು ಓದೋದೇ ಒಳ್ಳೇದು ಅಡಿಗರೇ.. ಆದ್ರೂ ಇರ್ಲಿ ಅಂತ ಒಂದಿಷ್ಟು ಗೀಚಿ ಹಾಕ್ತಿರ್ತೀನಿ.

 12. Kallare
  04/12/2008 ರಲ್ಲಿ 9:50 ಫೂರ್ವಾಹ್ನ

  ಜನಿ/ಜಾನಿ,
  ನೀವು ಮತ್ತೆ ಬಂದಿದ್ದು ಸಂತೋಷ.
  ಮರೆಯಲಾರದ ಗೆಳತಿ… ಅದು ಯಾರಂತ ಅವಳಿಗೆ ಗೊತ್ತು ಜೊತೆಗೆ ಅವ್ನಿಗೆ ಗೊತ್ತು ಬಿಡಿ.

 13. Jani.....
  04/12/2008 ರಲ್ಲಿ 10:51 ಫೂರ್ವಾಹ್ನ

  ‘ಜನಿ’ anta kardre saku bidi kallare…

 14. Sunil
  04/12/2008 ರಲ್ಲಿ 3:25 ಅಪರಾಹ್ನ

  ಈ ಕವನ ತುಂಬಾ ಹಿಡಿಸಿತು maheshanavare. chennagi moodi bandide. nimmalliruva kavi innoo thumba thumba kavithegalannu horatharali antha ee ajjana aashirvaada

 15. Suvarna
  06/12/2008 ರಲ್ಲಿ 6:47 ಅಪರಾಹ್ನ

  Mast iddu, nijavaglu anubavavillade ee devdas story mele bareyadu bhari kashta. yavaga bittikke hota maraya

 16. Kallare
  06/12/2008 ರಲ್ಲಿ 7:04 ಅಪರಾಹ್ನ

  ಸುನಿಲ್ ಅಜ್ಜಾ,
  ನೀವು ಬಂದಿದ್ದು ತುಂಬಾ ಖುಷಿ ಆತು. ಅಗಾಗ ಬರ್ತಾ ಇರಿ..
  ವಂದನೆಗಳೊಂದಿಗೆ,
  ಮೊಮ್ಮಗ,
  ಕಲ್ಲರೆ

 17. Kallare
  06/12/2008 ರಲ್ಲಿ 7:09 ಅಪರಾಹ್ನ

  ಸುವರ್ಣಾ,
  ಬಿಟ್ಟು ಹೋದದ್ದು ಒಂದಾ ಎರಡಾ… 🙂
  ಬರ್ದಿದ್ದೆಲ್ಲ ಅನುಭವ ಆಗೋದಿದ್ರೆ… ಆಹಾ. ಇದು ಬರೆ ಒಂದು ಕವಿತೆ ಅಷ್ಟೆ.

 18. Savi nenapu
  14/12/2008 ರಲ್ಲಿ 1:46 ಫೂರ್ವಾಹ್ನ

  ನೆನಪುಗಳ ನೋವು ಚಿರನೂತನ…

  Tumba chennag ede Mahesh.
  Nim kavangalan odta edre naneg aged mosa nenap agatte.

  Naav torso preethige reciprocation segde edre tumba noov agatte:-(((

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: