ಮುಖ ಪುಟ > ಹೀಗೊಂದು ಮಾತು > ಅವರಿಗೊಂದು ಮಾತು: ಬದುಕು ಹಸನಾಗಿಸುತ್ತೇವೆ….

ಅವರಿಗೊಂದು ಮಾತು: ಬದುಕು ಹಸನಾಗಿಸುತ್ತೇವೆ….

ಊರು  ಉರಿಯುತ್ತಿದೆ
ಉರಿದುರಿದು ಬರಿದಾದ ಮನಸುಗಳು
ಒಳಗೊಳಗೇ ನಲುಗುತ್ತಿವೆ
ನಾಳೆ ಏನಾದೀತೋ ಕಾಣೆ
 
ನಾವಿಲ್ಲಿ ಆಡಿದ್ದೇವೆ, ಹಾಡಿದ್ದೇವೆ
ನಗುನಗುತ್ತಾ ಹಬ್ಬ ಆಚರಿಸಿದ್ದೇವೆ
ಬಿನ್ನಾಭಿಪ್ರಾಯಗಳನ್ನು ಇಲ್ಲವಾಗಿಸಿ
ವರುಷದುದ್ದಕ್ಕೂ ದೇಶ ಕಟ್ಟಿದ್ದೇವೆ
 
ಬದುಕು ಕಟ್ಟುವ ಜೊತೆಗೆ
ಬೆಳೆದ ಬಂಧ ಸೆಳೆವ ನಾಡು
ಎಚ್ಚೆತ್ತರೆ ಕರೆವ ಅಚ್ಚರಿಯ ಬೆಳಗೀಗ
ವಿಷವರ್ತುಲದೊಳಗೆ ಬಂಧಿ
 
ಬದುಕು ನೀಡಿದ್ದು ನೀವಲ್ಲ
ಸಾವು ಕೊಳ್ಳುವವರೂ ಕೂಡಾ
ಹುಟ್ಟುವ ಮೊದಲೇ ದ್ವೇಷವಿತ್ತಾ ನಿಮಗೆ?
 ಇಲ್ಲಾ ದ್ವೇಷಿಸಲೇ ಹುಟ್ಟಿದವರಾ?
 
ಅದ್ಯಾವ ದೊಣ್ಣೆನಾಯಕನ ಅಪ್ಪಣೆ ನಿಮಗೆ?
ಬದುಕು ಬರಡಾಗಿಸಲು
 
ಅಲ್ಲೆಲ್ಲೋ ಕುಳಿತು ಸಾವನ್ನೇ ಚಿಂತಿಸುವ ಬದಲು
ಒಮ್ಮೆ ನಮ್ಮಲ್ಲಿಗೆ ಬನ್ನಿ
ಪ್ರೀತಿ ನೀಡಿ ನೀತಿ ಕಲಿಸುತ್ತೇವೆ.
ಬದುಕು ಹಸನಾಗಿಸುತ್ತೇವೆ.
Advertisements
 1. 03/12/2008 ರಲ್ಲಿ 3:16 ಅಪರಾಹ್ನ

  ಮಾತು ಕೇಳುವವರಲ್ಲಪ್ಪಾ ಅವರು…. ಬಂದೂಕಿನ ಭಾಷೆ ಮಾತ್ರ ಬಲ್ಲವರು…

 2. Jani.....
  04/12/2008 ರಲ್ಲಿ 8:51 ಫೂರ್ವಾಹ್ನ

  Hrudaya ta(mu)ttitu Sirrrr…..

 3. Sunil
  04/12/2008 ರಲ್ಲಿ 3:14 ಅಪರಾಹ್ನ

  Maheshanavare , thaavu ee yalevayasinalli deshadha chinte maaduva badalu, preethi, prema pranayada bagge baredare chennagirutte antha ee ajjana anisike.

  bandhooku hididavaru adannu biduvaralla saaaru.

 4. 10/12/2008 ರಲ್ಲಿ 5:23 ಅಪರಾಹ್ನ

  ಕವನ ಇಷ್ಟವಾಯಿತು.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: