ಮುಖ ಪುಟ > ಹೀಗೊಂದು ಮಾತು > ಬದುಕಿಯೂ ಸತ್ತಂತಿರುವ ಆಳುವ ಜನ ನಿಜಕ್ಕೂ ಸಾಯಬೇಕಿದೆ. ಇಲ್ಲಾ ವ್ಯವಸ್ಠೆ ಸರಿಯಾಗಬೇಕಿದೆ

ಬದುಕಿಯೂ ಸತ್ತಂತಿರುವ ಆಳುವ ಜನ ನಿಜಕ್ಕೂ ಸಾಯಬೇಕಿದೆ. ಇಲ್ಲಾ ವ್ಯವಸ್ಠೆ ಸರಿಯಾಗಬೇಕಿದೆ

ನೀವು ಬರ್ದಿದ್ದು, ವಾದ, ವಿವಾದ, ಅಭಿಪ್ರಾಯ, ಬೇಡಿಕೆ ಎಲ್ಲ ನೋಡಿದ್ದಾಯ್ತು. ಎಲ್ಲಾ ಬದಿಗಿಟ್ಟು ಸುಮ್ಮನಿರೋಣವೆಂದರೆ ಅದೂ ಸಾಧ್ಯವಾಗದೇ ನಿಮ್ಮ ಮುಂದೆ ಬರುತ್ತಿದ್ದೇನೆನಿಜಕ್ಕೂ ಇಷ್ಟವಿರಲಿಲ್ಲ ಹೀಗೆ ಬರೆಯುವುದಕ್ಕೆ. ಇಷ್ಟರವರೆಗೆ ನೋಡಿದ್ದು, ಓದಿದ್ದು, ಕೇಳಿದ್ದು.. ಎಲ್ಲದರ ಒಟ್ಟೂ ಮೊತ್ತ –ಕನಿಷ್ಟವೆಂದರೂ ನೂರು ಪ್ರಶ್ನೆಗಳು.  ಉತ್ತರಕ್ಕೆ ಯಾರನ್ನು ಕೇಳಲಿ? ಕೇಳಿದರೂ ಉತ್ತರ ಸಿಕ್ಕೀತಾ?? ಸಿಕ್ಕರೂ ಸಮರ್ಪಕವಾಗಿ ಸಿಕ್ಕೀತಾ??? ಮಾತು ಮಾತಾಗೆ ಉಳಿಯದೆ ಜಗಳವಾಗುವ, ವಾದ ವಾದವಾಗಿಯೇ ಇರದೇ ವಿವಾದವಾಗುವ, ಪ್ರತಿಯೊಂದೂ ಅತಿರೇಕದ ಪರಮಾವಧಿ ತಲುಪು ಇಲ್ಲಿ, ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದರೂ ಸರಿಯೆನ್ನಿಸುತ್ತದೆ ಒಮ್ಮೊಮ್ಮೆ. ಬಿಡಿ, ನೂರು ಪ್ರಶ್ನೆಗಳು ನೂರಾರು ಪ್ರಶ್ನೆಗಳನ್ನೇ ಹುಟ್ಟಿಸುತ್ತಿವೆಯಷ್ಟೇ.

ಬದುಕು ನಿಲ್ಲುವುದಿಲ್ಲ, ಯಾರು ಸತ್ತರೂ, ಹೇಗೆ ಸತ್ತರೂ. ಹೋದವರ ನೆನಪಲ್ಲಿ ಇದ್ದವರ ಮನಸು ಕದಡುತ್ತದೆ. ಒಂದಿಷ್ಟು ಮರುಗುತ್ತೇವೆ, ವಿಚಾರ ಶೂನ್ಯರಾಗುತ್ತೇವೆ. ಮತ್ತೆ ನಮ್ಮ ನಮ್ಮ ದಾರಿ ಹುಡುಕಿ ಹೊರಡುತ್ತೇವೆ. ಕಣ್ಣು ಮುಖದ ಮುಂದಿದೆ ಹಿಂದಲ್ಲ ತಾನೆ? ಮರೆವು ಸಹಜ ಗುಣ ಅಷ್ಟೆ. ಆದದ್ದೆಲ್ಲಾ  ಮರೆತುಬಿಡುತ್ತೇವೆ. ಅವರವರ ಲೋಕದಲ್ಲಿ ಪುರುಸೊತ್ತೆಲ್ಲಿ,  ಮತ್ತೊಮ್ಮೆ ಇನ್ನಷ್ಟು ಜನ ಸಾಯುವವರೆಗೆಹಾಗಾಗಿಯೇ ಇಷ್ಟೊಂದು ಅನಾಹುತಗಳು. ಅಲ್ಲಿ ಬಂದೂಕು ಮೊಳಗುತ್ತಿದ್ದರೆ, ಬಾಂಬು ಸ್ಫೋಟಿಸುತ್ತಿದ್ದರೆ, ಬೆಂಕಿ ಸಿಕ್ಕಲ್ಲಿ ಹರಡಿದರೆ, ಸಾವು ಎಲ್ಲಿಂದ ಬಂದು ಅಪ್ಪಿಕೊಳ್ಳುತ್ತದೆನ್ನುವ ಅರಿವೂ ಇಲ್ಲದೆ ಸತ್ತರು ಅವರೆಲ್ಲ. ಬದುಕಿಸಲು  ಹೊರಟವರಿಷ್ಟು ಜನ ಜೊತೆ ಜೊತೆಗೆ ಹೋದರು. ಎಲ್ಲ ಬದುಕಬೇಕಾದವರೇ. ನಾವು ಅಲ್ಲೇ ಇದ್ದರೆ ನಮ್ಮ ಕತೆಯೂ ಅಷ್ಟೆ ಆಗಿರ್ತ್ತಿತ್ತಲ್ವಾ?

ನೋಡಿದ್ದಾಯ್ತು, ಓದಿದ್ದಾಯ್ತು, ಕೇಳಿದ್ದಾಯ್ತು ಇನ್ನು ಬಾಕಿ ಇರೋದು ಒಂದೇ. ಬರಹಗಳು, ಬೇಡಿಕೆಗಳು, ಸಾಂಕೇತಿಕ ಪ್ರತಿಭಟನೆಗಳು/ವಿರೋಧಗಳು ಇವೆಲ್ಲಾ ಏನು ಮಾಡಿವೆ? ಇಲ್ಲಾ ಮೂಲಕ ಹೊರಟವು ಅದೆಷ್ಟರ ಮಟ್ಟಿಗೆ ಯಶಸ್ಸು ಕಂಡಿವೆ? ಆರಂಭ ಶೂರತ್ವ ಕೂಡ ಇಲ್ಲದ ಕೂಗುಗಳು ಕೇವಲ ಬಾಲಿಶ  ನಡವಳಿಕೆಯಂತೆ ಕಾಣುತ್ತಿವೆ. ಇನ್ನು ಮತ್ತೆಷ್ಟು ಮುಂದುವರೆದೀತು ಹೋರಾಟ? ಸತ್ತವರ ಹೆಸರಲ್ಲಿ ಕಣ್ಣೀರಿಟ್ಟು, ಮೌನ ಆಚರಿಸಿ, ಅವರಿಗೊಂದು ನಮನ ಸಲ್ಲಿಸಿ, ಫೋಟೋಕ್ಕೊಂದು  ಹಾರ ಏರಿಸಿ, ಒಂದಿಷ್ಟು ಸುದ್ದಿ ಹೇಳಿ ಕೊನೆಗೊಮ್ಮೆ ಬದುಕಿರುವ ಅವರ ಮನೆಮಂದಿಗೆ ಇಷ್ಟೇ ಇಷ್ಟು ದುಡ್ಡು ಕೊಟ್ಟು.. ಥೂ. ಬದುಕಿದ್ದೂ ಸತ್ತಂತಿರುವ ವ್ಯವಸ್ಥೆಯ ನಾಯಕರು ಮೊದಲು ಅವರು ಸಾಯಲಿ. ಇಲ್ಲಾ ವ್ಯವಸ್ಥೆ ಸರಿಪಡಿಸಲಿ. ಪ್ರತಿಭಟನೆ, ವಿರೋಧ ಇವೆಲ್ಲ ಇರಲಿ. ಆದ್ರೆ ಅವೆಲ್ಲಾ  ಮಕ್ಕಳಾಟವಲ್ಲ ತಾನೆ? ಏನಾದ್ರೂ ಇದ್ರೆ ಹೇಳಿ. ಸಾಂಕೆತಿಕವಾದದ್ದಲ್ಲ, ಸುಮ್ನೆ ಕೂತ್ಕೊಂಡು ಮಾಡೋದೂ ಅಲ್ಲ  ಸಾಮಾನ್ಯ ಕೆಲಸ ಮಾಡಿ ಅದರಲ್ಲೇ ಖುಷಿ ಪಡೋದು ಸಾಕು. ಇಲ್ಲೆಲ್ಲೋ ಒಬ್ಬಿಬ್ಬರಾದರೂ ಸಿಕ್ಕಿಯಾರು ಒಂದು ಹೆಜ್ಜೆ ಮುಂದಕ್ಕೆ ಹೊರಟು ಪರಿಹಾರಕ್ಕೆ ಕೈಚಾಚುವವರು.  ಅವರಿಗೆ ಕೂಡಲೇ ಜೊತೆಯಾಗುತ್ತೇನೆಅಷ್ಟು ಮಾತ್ರ ಹೇಳಬಲ್ಲೆ.

ಸತ್ತೂ ಬದುಕಿರುವ ಅಷ್ಟೂ ಯೋಧರ ಹೋರಾಟಕ್ಕೆ ಬೆಲೆ ನೀಡಬೇಕಿದೆ. ಬದುಕಿಯೂ ಸತ್ತಂತಿರುವ ಆಳುವ ಜನರು ನಿಜಕ್ಕೂ  ಸಾಯಬೇಕಿದೆ ಇಲ್ಲಾ  ವ್ಯವಸ್ಠೆ ಸರಿಯಾಗಬೇಕಿದೆಸಾವು ಸುಮ್ಮನೆ ಬರಬಾರದು ಅಷ್ಟೆ 

Not only did thousands of people turned up for the peace March at the Gateway of India yesterday but they were loud and clear of what they wanted …

“A Change & Action not bhashan “  

Advertisements
 1. 04/12/2008 ರಲ್ಲಿ 7:09 ಅಪರಾಹ್ನ

  ನಿಜ ಕಣ್ರೀ. ನಾನೂ ಅದನ್ನೇ ಹೇಳಿದ್ದು. ಬರೀ ಸಾಂಕೇತಿಕ ಕಪ್ಪು ಪಟ್ಟಿಯಿಂದೇನೂ ಪ್ರಯೋಜನವಾಗಲ್ಲ. ಈ ನರಮೇಧಕ್ಕೆ ಉಗ್ರರು ಎಷ್ಟು ಕಾರಣರೋ, ಅಷ್ಟೇ ನಮ್ಮ ಗತಿಗೆಟ್ಟ ವ್ಯವಸ್ಥೆಯೂ ಕಾರಣ, ಸಾಂಕೇತಿಕವಾಗಿ ಖಂಡಿಸಿ ಮರುದಿನ ಎಂದಿನಂತೆ, ಏನೂ ಆಗಿರದಂತೇ ಮುಂದುವರಿಯುವ ಪ್ರಜೆಗಳೂ ಕಾರಣ. ಒಂದು ಹೆಜ್ಜೆ ಮುಂದಕ್ಕೆ ಹೊರಡಲು, ನಾನೂ ನಿಮ್ಮ ಜೊತೆಯಿದ್ದೇನೆ. ಬರೇ ಖಂಡಿಸಿದ್ದು, ಮಾತಾಡಿದ್ದು ಸಾಕು….

 2. ವೈಶಾಲಿ
  05/12/2008 ರಲ್ಲಿ 4:46 ಅಪರಾಹ್ನ

  ನಿಜ. ಕೆಲವರದ್ದು ಮಾತು, ಕೆಲವರದ್ದು ಬರಹ..ಕೆಲವರದ್ದು ಸಾಂಕೇತಿಕ ಚಿಹ್ನೆಗಳು… ಎಲ್ಲರೂ ಬರೆಯುತ್ತಿದ್ದಾರೆ, ಮಾತನಾಡುತ್ತಿದ್ದಾರೆ..ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಭಯೋತ್ಪಾದನೆಗೆ. ಹಾಗೆಯೇ ಎಲ್ಲರೂ ಎದೆತಟ್ಟಿಯೇ ಹೇಳುತ್ತಿದ್ದಾರೆ ಏನಾದರೂ ಮಾಡಿ, ನಾನು ಜೊತೆಯಾಗುತ್ತೇನೆ!

  ನಾನು ಹೀಗೆ ಮಾಡುವವನಿದ್ದೇನೆ, ನೀವು ಜೊತೆಗೂಡುತ್ತೀರಾ ಎಂಬ ಧೈರ್ಯದ ದ್ವನಿಯೇಕೆ ಕೇಳುತ್ತಿಲ್ಲ?
  ಹಿಂಬಾಲಿಸುವುದಲ್ಲ, ನಿಮ್ಮ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುವ ಸಾವಿರ ಸಾವಿರ ಜನರು ಸಿಗುತ್ತಾರೆ. ಮೊದಲ ಹೆಜ್ಜೆ ನಿಮ್ಮದೇ ಯಾಕಾಗಬಾರದು ಮಹೇಶ್? ಉತ್ತರವಿದೆಯೇ?

  ಪ್ರೀತಿಯಿಂದ
  – ವೈಶಾಲಿ

  http://kenecoffee.wordpress.com/

 3. 05/12/2008 ರಲ್ಲಿ 5:47 ಅಪರಾಹ್ನ

  ನನಗೆ ವ್ಯವಸ್ಥೆಗಿಂತ ಮೊದಲು ‘ನಾನು’ ಬದಲಾಗಬೇಕಿದೆ, “Good things starts from Home”,

  ನಾನು ಬದಲಾಗದೇ ನಮ್ಮ ವ್ಯವಸ್ಥೆ ಮತ್ತು ಸಮಾಜ ಬದಲಾಗದು ಎಕೆಂದರೆ “ವ್ಯವಸ್ಥೆ ಮತ್ತು ಸಮಾಜ” ನಮ್ಮನ್ನು ಬಿಟ್ಟು ದೂರವಿಲ್ಲ, ನಮ್ಮಿದಾಗಿಯೇ ಆಗಿದ್ದು.

  ನಾವು ಭಾರತಿಯರಲ್ಲಿ ಅರ್ಜೆಂಟಿಗೆ ತುಸು ಜಾಸ್ತಿನೆ ಬೇಕಾಗಿರುವುದು “ಎಕತೆ” ಮತ್ತು “ಜವಾಬ್ದಾರಿ”.

  “ಎಕತೆ” ಎಷ್ಟೊಂದು ಮುಖ್ಯ ಎಂಬುದನ್ನು ನಮ್ಮನ್ನು ೨೦೦ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರೀಟಿಷರು ಆಳಿದರೂ ನಮಗಾರಿಗೂ ಅರಿವಾಗೆಯಿಲ್ಲ. ನಮ್ಮಲ್ಲಿ “ಎಕತೆ” ಹಿಂದೂ ಇರಲಿಲ್ಲ, ಇವತ್ತು ಇಲ್ಲ ಆದರೆ ನಾಳೆ ಅದನ್ನು ಇರಗೊಡಿಸುವುದು ನಮ್ಮೆಲ್ಲರ ಕೈಯಲ್ಲಿದೆ, ಇವತ್ತು ನಮ್ಮನ್ನಾಳುವವರು, ಆಳಿದವರು, ಮುಂದೆ ಆಳುವವರು ನಮ್ಮನ್ನು ಜಾತಿ, ಧರ್ಮ, ಜನಾಂಗ, ಭಾಷೆ, ಪ್ರದೇಶಗಳ ಮೇಲೆ ಒಡೆಯುತ್ತಾ, ನಮ್ಮ ಜಗಳ-ಗಲಭೆಗಳ ಬೆಂಕಿಯಲ್ಲಿ ಮೈಕಾಸಿಕೊಂಡು ನಮ್ಮನ್ನು ತುಳಿದುಕೊಂಡೆ ಈ ರಾಷ್ಟ್ರದ ಸಿಂಹಾಸನವೆರಿದ್ದಾರೆ, ಅವರಿಂದ ನಾವು ಅಗತ್ಯಕ್ಕಿಂತ ಹೆಚ್ಚಿಗೆ ಬಯಸುತ್ತಿದ್ದೆವೆನೋ? ಅವರಿಗಿಂತ ನಮ್ಮ ಎಕತೆ ಮತ್ತು ಅಖಂಡತೆ ಈ ಸಮಸ್ಯೆಗೆ ಬಹು ದೊಡ್ಡ ಪರಿಹಾರವಾದಿತು (?).

  “ಜವಾಬ್ದಾರಿ” ಇವತ್ತು ನಾವು ನಮ್ಮ ನಾಯಕರನ್ನು ಮತ್ತು ಆಡಳಿತಶಾಹಿಗಳನ್ನು ಕೇಳುತ್ತಿರುವ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಳ್ಳುವ, ಪ್ರತಿ ಸಲ ಇಂತಹ ಕೃತ್ಯ ನೆಡೆದ ೨-೩ ದಿನಗಳ ಕಾಲ ಅದನ್ನು ಇದೇ ರೀತಿ ಚರ್ಚಿಸಿ, ಸರ್ಕಾರವನ್ನು ಮತ್ತು ನಮ್ಮನ್ನು ಆಳುವವರನ್ನು ಬೈದಾಡಿ ಸುಮ್ಮನಾಗಿಬಿಡುತ್ತೆವೆ, ನಾವು ಸುಮ್ಮನಾದ ಮರುದಿನವೇ ನಮ್ಮ ನಾಯಕರುಗಳೂ ಕೂಡ (ಯಾಕೆಂದರೆ ಅವರು ನಮ್ಮಂಥವರೆ, ನಮ್ಮ ನಡುವಿನಿಂದ, ನಾವೇ ಆರಿಸಿ ಕಳುಹಿಸಿದವರು). ಯಾಕೇ ನಾವು ಈ ಸಾಮೂಹಿಕ ಜವಬ್ದಾರಿಯಿಂದ ಹಿಂಜರಿದು ಎಲ್ಲವನ್ನು ನಮ್ಮ ನಾಯಕರ ಕೊರಳಿಗೆ ಸುತ್ತುತ್ತೆವೆ, ಇವತ್ತು ನಾವು ಟ್ರಾಫ್ಹಿಕ್ಕಿನಲ್ಲಿ ಸಿಕ್ಕಿ ಬಿದ್ದಾಗಲೂ ನಮ್ಮ ಬೈಗುಳಗಳೆಲ್ಲ ನಮ್ಮ ನಾಯಕರಿಗೆನೆ, ನಾವೇ ಅಥವಾ ನಮ್ಮ ಮುಂದೆಯೇ ನಮ್ಮ ನಡುವಿನ ‘ಜನಸಾಮಾನ್ಯ’ ಟ್ರಾಫಿಕ ಸಿಗ್ನಲ ಮುರಿದಿದ್ದು, ಬೈಕ ಸವಾರ ಫುಟಪಾಥ ಮೇಲೆ ಸವಾರಿ ಮಾಡಿಕೊಂಡು ಹೋಗಿದ್ದು ಕಂಡು ನಮಗೇನೂ ಅನ್ನಿಸುವುದೆಯಿಲ್ಲ, ಅವರನ್ನು ಹಿಡಿದು ಹೀಗ್ಯಾಕೆ ಎಂದು ಕೇಳುವ ಸ್ಥೈರ್ಯ ಮತ್ತು ನೈತಿಕತೆ ನಮ್ಮಲ್ಲಿ ಉಳಿದಿಲ್ಲ, ಹಾಗೆಯೇ ಈಗ ಬೈದಿರುವ, ಬೈಯುತ್ತಿರುವ ಎಲ್ಲ ಬ್ಲಾಗರಗಳನ್ನು, ಮಾಧ್ಯಮದವರನ್ನು ಅದೇ ನಾಯಕರ ಬಳಿ ನಿಲ್ಲಿಸಿದರೇ ತೋದಲಿಯಾರು, ಯಾಕೆಂದರೇ ನಮ್ಮಲ್ಲಿ ಆ ನೈತಿಕತೆ ಉಳಿದಿಲ್ಲ, ನಾಕೆಂದರೆ ಮೂಲಭೂತವಾಗಿ ಹಲವಾರು “ಜವಾಬ್ದಾರಿಗಳಿಂದ” ಹಿಂಜರಿದವರು, ಮತ್ತು ದೂರ ಸರಿದವರು ನಾವು, ಮತ್ತೊಬ್ಬರ ಜವಾಬ್ದಾರಿ ಕೇಳಲು ನಾವು ಜವಾಬ್ದಾರರಾಗಿರಬೇಕು. ನಮ್ಮಲ್ಲಿ ಎಷ್ಟು ಜನ ಜವಾಬ್ದಾರಿಯುತವಾಗಿ ವೋಟ ಮಾಡುತ್ತೆವೆ? ನಮ್ಮಲ್ಲಿ ಎಷ್ಟು ಜನ ನಮ್ಮ ಸುತ್ತಮುತ್ತಲ ಪ್ರದೇಶ, ಆಫೀಸು, ಬಸ್ಸು ಮತ್ತು ರೈಲು ನಿಲ್ದಾನಗಳಲ್ಲಿ ಜವಾಬ್ದಾರಿಯುತ ನಾಗರೀಕರಂತೆ ಸುತ್ತಲಿನ ಪರಿಸರವನ್ನು ಗಮನಿಸುತ್ತೆವೆ ಮತ್ತು ಅಪಾಯಕಾರಿ ವಸ್ತುಗಳಂತೆ ಗೋಚರಿಸುವ ವಸ್ತುಗಳ ಬಗ್ಗೆ ಪೋಲಿಸರಿಗೆ ತಿಳಿಸಿ, ಪೋಲಿಸರು ಬರುವವರೆಗೂ ಜನರು ಅದರ ಬಳಿಗೆ ಸುಳಿಯದಂತೆ ಕಾಯುತ್ತೆವೆ, ನಮ್ಮ ಎಷ್ಟು ಜನ ಯಾರೋ ಒಬ್ಬರನ್ನು ನೋಡಿ ಸಂದೇಹ ಬಂದಾಗ ಕೇಳಿದ್ದಿದೆ, “ನೋಡಿ ಇದು ನನ್ನ ಐ.ಡಿ. ಕಾರ್ಡ, ನಾನು ಇಂತಹ ಕಂಪನಿಯಲ್ಲಿ ಹೀಗಿಗೆ ಕೆಲಸ ಮಾದುತ್ತಿರುವೆ, ದಯವಿಟ್ಟು ನಿಮ್ಮ ಐ.ಡಿ. ಪ್ರೂಫ ತೋರಿಸುತ್ತಿರಾ” ಎಂದು ಕೇಳಿದ್ದಿರಾ? ಕೆಲವು ಸಲ ಎದುರಿನವರಿಗೆ ಬೇಜಾರಾಗಬಹುದು, ಆದರೆ ಅವನ ಉದ್ದೇಶ ಕೆಟ್ಟದ್ದೆ ಆಗಿದ್ದರೆ ಅದನ್ನು ಕಾರ್ಯರೂಪಕ್ಕಿಳಿಸಲು ಹಿಂಜರಿಯುತ್ತಾನಲ್ಲವೇ? ಎಕೆಂದರೆ ನಮ್ಮ ಜೀವದ ರಕ್ಷಣೆಯ ಭಾರ ಪೂರ್ತಿಯಾಗಿ ಸರ್ಕಾರದ್ದಲ್ಲ, ಜೀವವನ್ನು ಬಳಿಯಿರಿಸಿಕೊಂಡು ಓಡಾಡುವ ನಮ್ಮ ಜವಾಬ್ದಾರಿ ಕೂಡ.

  ಎಲ್ಲರೂ ಕೂಡಿಯೇ ಹೋರಾಡೋಣ. ಇದು ಕೇವಲ ನನ್ನ-ನಿನ್ನ ಹೋರಾಟವಲ್ಲ, ಇದು ನಮ್ಮ ಹೋರಾಟ. ನಮ್ಮ ಮನೆಯ ಹೋರಾಟ, ಉಗ್ರವಾದದ ಎದುರು ಕೋನೆಯ ಹೋರಾಟ.

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

 4. Kallare
  06/12/2008 ರಲ್ಲಿ 11:31 ಫೂರ್ವಾಹ್ನ

  ಪ್ರದೀಪ್,

  ನಾನು ಹೇಳದ್ದು ಕೇವಲ ಕಪ್ಪು ಪಟ್ಟಿಯ ಕುರಿತಾಗಲ್ಲ. ಒಂದು ಒಳ್ಳೆಯ ಉದ್ದೇಶಕ್ಕೆ ಬೆಂಬಲ ಸಿಗಲೇ ಬೇಕು… ಎಲ್ಲೋ ಒಂದು ಕಡೆ ಚಿಕ್ಕದಾಗಿ ಪ್ರಾರಂಭ ಆದ್ದು ಬೆಳೆದು ಇನ್ನೆಲ್ಲೋ ತಲ್ಪೋದಕ್ಕೆ ಸಾಧ್ಯ ಅಲ್ವಾ? ಹಾಗಂತ ನಂಬಿದವನು ನಾನು..

 5. Kallare
  06/12/2008 ರಲ್ಲಿ 11:51 ಫೂರ್ವಾಹ್ನ

  ಕವಿತಾ,
  ನಿಮ್ಗೆ ಉತ್ತರ ಸಿಗಲೇ ಬೇಕು. ಆದ್ರೆ ನನ್ನೊಬ್ನಿಂದಷ್ಟೇ ಅಲ್ಲ.. ಉತ್ತರಿಸಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇದೊಂದು ಒಳ್ಳೆ ಪ್ರಶ್ನೆ. ಇರ್ಲಿ, ಆದ್ರೆ ನಿಮ್ಮದು ಒಂದು ಮಾರ್ಕ್ಸಿನ YES or NO Question ಅಲ್ವಲ್ಲಾ.. ಉತ್ತರ ಯಾವ್ದೇ ಇದ್ರೂ ಅದೊಂದಿಷ್ಟು ವಿವರಣೆ ಕೇಳುತ್ತೆ… ಇರಿ ನನ್ನ ಉತ್ತರ ಸಧ್ಯದಲ್ಲೇ ಸಿಗುತ್ತೆ ನಿಮ್ಗೆ. ಬ್ಲಾಗ್ಗೆಳೆಯರು ಯಾರದ್ರೂ ಉತ್ತರ ಕೊಡೋರಿದ್ರೆ ತುಂಬಾ ಸಂತೋಷ.. (ಪ್ರಶ್ನೆ ನನಗೊಬ್ನಿಗೆ ಅಂತಾದ್ರೆ ನಾನು ಹೀಗೆ ಬ್ಲಾಗಿನಲ್ಲಿ ಬರೀತಿರ್ಲಿಲ್ಲ ಅಲ್ವಾ?)

  ನಿಮ್ಮವ,

  ಕಲ್ಲರೆ

 6. Kallare
  06/12/2008 ರಲ್ಲಿ 11:58 ಫೂರ್ವಾಹ್ನ

  ಶೆಟ್ಟರೆ,

  AGREED. ಕೆಲವೊಂದು ವಿಷಯಗಳನ್ನು ಕೇಳಲಿಕ್ಕಿದೆ ನಿಮ್ಮಿಂದ, ನಿಮ್ಮಂತವರಿಂದ.. ಈ ಬ್ಲಾಗುಗಳ ಲೋಕದಲ್ಲಿ ಬಹಳಷ್ಟು ಬಲ್ಲವರಿದ್ದೀರಿ. ಸ್ವಲ್ಪವೇ ಸ್ವಲ್ಪ ಸಮಯ ಕೊಡಿ, ಕಾಣುತ್ತೇನೆ ನಿಮ್ಮನ್ನೆಲ್ಲಾ..
  ವಂದನೆಗಳೊಂದಿಗೆ,

  ನಿಮ್ಮವ

  ಕಲ್ಲರೆ

 7. Suvarna
  06/12/2008 ರಲ್ಲಿ 6:38 ಅಪರಾಹ್ನ

  ವ್ಯವಸ್ಥೆ ಸರಿಯಾಗಲು ಇಂದಿನ ಯುವ ಜನಾಂಗಕ್ಕೆ ನಮ್ಮ ದೇಶ ಹಾಗು ನಮ್ಮ ನಾಯಕರಗುವವರ ಬಗೆಗೆ ಸ್ಪಷ್ಟ ಪರಿಕಲ್ಪನೆ ಬೇಕಾಗಿದೆ. ರಾಜಕೀಯವೇ ಒಂದು ಕಡೆ, ಸಾಮಾಜಿಕ ಭದ್ರತೆ ನೀಡಲು ಇರುವ ಅಧಿಕಾರಿಗಳು ಅವರ ಹಿಂದೆ ಮತ್ತು ಹೆಚ್ಚಿನ ವಿದ್ಯಾವಂತ ಜನರಿಗೆ ಅದರೆದೆಗಿನ ನಿರ್ಲಕ್ಷ್ಯ. ಹೊಸ ಚಿಂತನೆಯ ಕೆಲವು ನಿಷ್ಠ ರಾಜಕಾರಣಿಗಳ ಧೃಡ ಪಕ್ಷ ಮತ್ತು ಸಕಾರಾತ್ಮಕ ಸರ್ಕಾರದೊಂದಿಗೆ ಕೈಗೂಡಿಸುವ ಪ್ರಜ್ಞಾವಂತ ಮನಸ್ಸು ಅವಶ್ಯ ಅನಿಸುತ್ತಿದೆ.ನಮ್ಮ ದೇಶದ ಜೊತೆ ನಾವು ಎಂಬ ಏಕತೆ ಮನಸ್ಸು ನಮಗೆ ಬೇಕಿದೆ.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: