ಮುಖ ಪುಟ > ಹೀಗೊಂದು ಮಾತು > ‘ಭಯೋತ್ಪಾದನೆ ನಿರ್ಮೂಲನಾ ಹವನ’ ಮಾಡಿಸುವ ಪಂಡಿತರನ್ನೇನೆನ್ನುತ್ತೀರಿ ನೀವು?

‘ಭಯೋತ್ಪಾದನೆ ನಿರ್ಮೂಲನಾ ಹವನ’ ಮಾಡಿಸುವ ಪಂಡಿತರನ್ನೇನೆನ್ನುತ್ತೀರಿ ನೀವು?

ಕೆಲವರದ್ದು ಮಾತು, ಕೆಲವರದ್ದು ಬರಹ..ಕೆಲವರದ್ದು ಸಾಂಕೇತಿಕ ಚಿಹ್ನೆಗಳುಎಲ್ಲರೂ ಬರೆಯುತ್ತಿದ್ದಾರೆ, ಮಾತನಾಡುತ್ತಿದ್ದಾರೆ..ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಭಯೋತ್ಪಾದನೆಗೆ. ಹಾಗೆಯೇ ಎಲ್ಲರೂ ಎದೆತಟ್ಟಿಯೇ ಹೇಳುತ್ತಿದ್ದಾರೆ ಏನಾದರೂ ಮಾಡಿ, ನಾನು ಜೊತೆಯಾಗುತ್ತೇನೆನಾನು ಹೀಗೆ ಮಾಡುವವನಿದ್ದೇನೆ, ನೀವು ಜೊತೆಗೂಡುತ್ತೀರಾ ಎಂಬ ಧೈರ್ಯದ ದ್ವನಿಯೇಕೆ ಕೇಳುತ್ತಿಲ್ಲ?ಹಿಂಬಾಲಿಸುವುದಲ್ಲ, ನಿಮ್ಮ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕುವ ಸಾವಿರ ಸಾವಿರ ಜನರು ಸಿಗುತ್ತಾರೆ. ಮೊದಲ ಹೆಜ್ಜೆ ನಿಮ್ಮದೇ ಯಾಕಾಗಬಾರದು? ಹಾಗಂತ ಒಂದು ಪ್ರಶ್ನೆಯಿದೆ. ಉತ್ತರವಿದೆಯೇ ಅಂತ ಜೊತೆಗೊಂದು ಪ್ರಶ್ನೆ ಸಹ ಇದೆ. ನಿಮ್ಮಲ್ಲೊಂದು ಉತ್ತರವಿರಬಹುದು ಆಲ್ವಾ?? ಇಲ್ಲಿ ಬ್ಲಾಗುಗಳ ಒಳಹೊಕ್ಕಿ ನೋಡಿದರೆ ನೀವೆಲ್ಲಾ ಬಹಳಷ್ಟು ತಿಳಿದವರಿದ್ದೀರಿ. ಎಲ್ಲೋ ಒಂದು ಒಳ್ಳೆಯ ಬೆಳವಣಿಗೆ ಆದೀತೆಂಬ ಆಶಯದೊಂದಿಗೆ ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಆಲಸಿತನ, ವಾರದುದ್ದದ ಕೆಲಸ, ವಾರಾಂತ್ಯದ ಉದ್ದುದ್ದ ಪ್ರಯಾಣ ಎಲ್ಲದರ ನಡುವೆ ಕೆಲವೇ ದಿನಗಳ ಹಿಂದೆ ಹಿಡಿದು ಕೂರಿಸಿಕೊಂಡಿದ್ದು ಬ್ಲಾಗು. ತುಂಬಾ ಖುಷಿಯಿಂದ ಹೊರಟಿದ್ದೆ ನಿಮ್ಮೆಲ್ಲರನ್ನು ಓದುತ್ತಾ. ನಡುವೆ ಬಂದಿದ್ದು ಮಹಾನಗರಿಯ ಸುದ್ದಿಸಾವಿನ ಮನೆಯವರ ಅಮಾನವೀಯ ಕ್ರತ್ಯದ್ದು. ನಿಮ್ಮೆಲ್ಲರನ್ನೂ ಓದುತ್ತಾ ಓದುತ್ತಾ ಇಲ್ಲಿಗೆ ಬಂದು ತಲುಪಿದ್ದೇನೆ. ಹೆಚ್ಚಿನ ವಿಚಾರಗಳಲ್ಲಿ ಸಹಮತವಿದೆ, ಕೆಲವೆಡೆ ಕೆಲವೊಂದು ಅಭಿಪ್ರಾಯಗಳನ್ನು ಒಪ್ಪಿಕೊಳ್ಳಲಾಗಿಲ್ಲ. ಕುರಿತು ಹೇಳಲಿಕ್ಕೆನೂ ಇಲ್ಲ ಬಿಡಿ. ಪ್ರತಿಯೊಬ್ಬರ ಮಾತು, ಬರಹ, ಕ್ರತಿ, ಎಲ್ಲವೂ ಅವರವರ ದ್ರಷ್ಟಿಯಲ್ಲಿ ಸರಿಯಾದುದೇ ಆಗಿರುತ್ತದೆ. ಆಗಿರಲೂ ಬೇಕು. ಇಲ್ಲವಾದಲ್ಲಿ ಅದಕ್ಕೆ ಸಲ್ಲಬೇಕಾದ ಬೆಲೆಸೊನ್ನೆ‘. ಇವತ್ತಿನ ದಿನದಲ್ಲಿ ಯಾವುದೊಂದು ಕೆಲಸವೂ ಒಬ್ಬನ ಅಣತಿಯಂತೆ, ಇಲ್ಲಾ ಸಂಘವೊಂದರ ಆಜ್ಞೆಯಂತೆ, ಸಂಸ್ಥೆಗಳ ಆಸಕ್ತಿಯಂತೆ ನೇರ ದಾರಿಯಲ್ಲಿ ಸಾಗುವುದು ಬಹಳ ಕಡಿಮೆ. ಪ್ರತಿಯುಒಂದು ಕೆಲಸಕ್ಕೂ ಒಂದಿಷ್ಟು ಅಡಚಣೆಗಳು ಎದುರಾಗುವುದು ಸಾಮನ್ಯ. ಹಾಗಾಗಿಯೇ ಬೆಸ್ಟ್ ಅನ್ನುವುವ ಜಾಗದಲ್ಲಿ Arguably Best ಅಂತ ಅನ್ನೋದು ನಾವು. ಇಲ್ಲಾ ಬಹಳಷ್ಟು ಉತ್ತಮವೆನ್ನಿಸುವ ಸಂಗತಿಗಳು ನಮ್ಮ ನಡುವೆಯಿವೆ. ಹಾಗಾಗಿಯೇ ಅಂತಹ ಪದ ಪ್ರಯೋಗ
 
ಸಧ್ಯದ ಆರ್ಥಿಕ ಸ್ಥಿತಿಗತಿ, ಸಾಮನ್ಯ ಜನ ಜೀವನ, ದೈನಂದಿನ ಚಟುವಟಿಕೆಗಳ ನಡುವೆ ಉದ್ಭವಿಸಿದ್ದು ಭಯೋತ್ಪಾದನೆಯ ವಿಷಯ. ಹೊಸದಲ್ಲದಿದ್ದರೂ ಹೆಚ್ಚುಕಡಿಮೆ ಅದಕ್ಕೆ ಹೊಂದಿಕೊಂಡುಬಿಟ್ಟೆವಾ ಅನ್ನುವಷ್ಟರಲ್ಲಿ ಒಂದಿಷ್ಟು ಜಾಗ್ರತಿಯಾದರೆ ಒಳಿತಾದೀತು ಅನ್ನುವ ಮಾತಾಡುತ್ತಿದ್ದೇವೆ. ಏನಾಗುತ್ತದೆನ್ನುವುದು, ಏನು ಮಾಡಬೇಕೆನ್ನುವುದು, ನಾನು ನೀವು ನಿರ್ಣಯಿಸುವ ವಿಷಯವಾ ಇದು? ( ವಯಕ್ತಿಕ ನೆಲೆಗಟ್ಟಿನಲ್ಲಿ ಆಗಬೇಕಾದ ಬದಲಾವಣೆಗಳಿಗೆ ನಾವೇ ಜವಾಬ್ದಾರರು ಬಿಡಿ). ನನ್ನ ಮುಂದಿರುವ ಮೂಲ ಪ್ರಶ್ನೆ ಇಲ್ಲೆಲ್ಲೋ ಉತ್ತರ ಹುಡುಕುತ್ತಾ ಸುಳಿದಾಡುತ್ತದೆ.. ಉತ್ತರ ಹುಡುಕಲು ಕಷ್ಟವಾಸಿಕ್ಕರೆ ಮತ್ತಿನ್ನು ಇಂತಾ ಕೆಲಸ! ಆಗಲಾರದು. ಇಲ್ಲವಾದರೆ ಬದುಕಿರುವಷ್ಟು ನನ್ನ ನಿಮ್ಮಂತವರ ಮಾತು, ಬರಹ, ಸಾಂಕೇತಿಕ ಹೋರಾಟ.  ಜಾರಿಯಲ್ಲಿರಲಿ ಬಿಡಿ… 
 
ಹೇಗಿದ್ದರೂ ಪ್ರಶ್ನೆ ಸರಳವಾಗಿದೆ, ಚಿಕ್ಕದೊಂದು ಉತ್ತರ ನೀಡಿ ಸುಮ್ಮನಾಗಬೇಕೆಂದರೆ ಅದು ಒಂದು ಮಾರ್ಕ್ಸಿನ YES or NO  ಉತ್ತರ ಕೇಳುವ ಪ್ರಶ್ನೆ ಪತ್ರಿಕೆಯಲ್ಲಿದ್ದುದಲ್ಲ. ಕೇಳಿದವರೂ ಸಹ ನೊಂದವರೇ, ನನ್ನಂತೆ ನಿಮ್ಮಂತೆ. ವಯಕ್ತಿಕವಾದ ಬದಲಾವಣೆ ಯಾವತ್ತಿಗಿದ್ದರು ಆಗಲೇಬೇಕು, ಅಲ್ಲಿಂದ ಹೊರಟ ಬದಲಾವಣೆಯ ಗಾಳಿ ಸುತ್ತಲೆಲ್ಲಾ ಬೀಸಬೇಕು ಅನ್ನುವ ವಿಚಾರ ಸರಿ. ಆದರೆ ಇವತ್ತಿನ ಅವಶ್ಯಕತೆಗೆ ಒಂದು ಸಾಮನ್ಯ ಮನುಷ್ಯ ಏನು ಮಾಡಬೇಕು ಅಂದರೆ ನಿಮ್ಮಲ್ಲಿ ಏನೇನು ಉತ್ತರವಿದೆ? ಹೇಳಿ, ಎಷ್ಟು ಸಲಹೆಗಳಿವೆ? ಅದ್ಯಾವ ಯಶಸ್ವೀ ಚಳವಳಿಗೆ ಮುನ್ನುಡಿ ಬರೆಯಬಲ್ಲಿರಿ? ಹೇಗೆ? ಆಗಲೇಬೇಕಾದ ಬದಲಾವಣೆಗೆ ಮೂಲ ನಾನಾ? ನೀವಾ? ಇಲ್ಲ ಎಲ್ಲೋ ಒಂದು ಕಡೆ ನಮ್ಮ ಅವಶ್ಯಕತೆಯಿದೆಯಾ? ನನ್ನದು ಕೇವಲ Support Role. ಅದಕ್ಕಿಂತ ಮುಂದಿನದು ನನ್ನಿಂದಾಗದ ಕೆಲಸ. ಮತ್ತೆ ಹೇಳುತ್ತೇನೆ ಶಕ್ತವಾದ ಹೋರಾಟಕ್ಕೆ ಬೆಂಬಲ ನೀಡಬಹುದು ಅಷ್ಟೆ. ವಿಷಯ ಮರೆಯುವ ಮುನ್ನವೇ ಮಾಯವಾಗುವ Initiatives ತುಂಬಾ ಇರುತ್ತವೆ ಬಿಡಿ. ಅವುಗಳು ಇದ್ದರೆಷ್ಟು ಬಿಟ್ಟರೆಷ್ಟು. ಕೈಲಾದದ್ದು ಮಾಡುತ್ತೇನೆ ಅಂತಾ, ಏನೋ ಒಂದಿಷ್ಟು ಮಾಡುವುದಕ್ಕಿಂತಾ ಸುಮ್ಮನಿರುವುದೇ ವಾಸಿ. ಮಾಡಲು ಬೇಕಷ್ಟಿವೆ ಪ್ರತಿಯೊಬ್ಬರಿಗೂ, ಮಾಡುವ ಮನಸ್ಸಿದ್ದರೆ. ಅಂತಹ ಕೆಲಸವಾಗಲಿ. ಅಲ್ಲೆಲ್ಲೋ ಒಳ್ಳೆಯದಾದೀತು ಸ್ವಂತಕ್ಕೆ, ಜೊತೆಗೆ ಇನ್ನೊಬ್ಬರಿಗೂ ಸಹ.
ಮದುವೆ ಮಾಡಿಸುವ ಪಂಡಿತರುಭಯೋತ್ಪಾದನೆ ನಿರ್ಮೂಲನಾ ಹವನ’ ಮಾಡಿಸುತ್ತೇನೆಂದರೆ ಅವರಿಗೆ ಏನೆನ್ನುತ್ತೀರಿ ನೀವು?

ಮನೆಯ ಹಿರಿಯನೊಬ್ಬ ಮಾಡಬೇಕಾದ ಕೆಲಸ ಕೆಲಸದಾಳು ಮಾಡಬಹುದಾ? ಮುಂಗೈ ಮೇಲೆ  ‘ವಿಷ್ಣು ಅಭಿಮಾನಿಎಂದು ಹಚ್ಚೆ ಹಾಕಿಸಿಕೊಂಡ ವಿಪರೀತದ ಅಭಿಮಾನಿ, ಅವನು ವಿಷ್ಣು ಆಗಲು ಸಾಧ್ಯವಾ? ಆತ ವಿಷ್ಣುವರ್ಧನ್ ಹೇಳಿದಂತೆ ಮಾಡಬಲ್ಲ ಅಷ್ಟೆ. ವಿಷ್ಣುವರ್ಧನ್ ಇನ್ನೂ ಏನು ಹೇಳಿಲ್ಲ. ರಾಜ್ ಆಗಲೇ ಚಿರಶಾಂತಿಯಲ್ಲಿದ್ದಾರೆ. ಟೈಮ್ಸ್ ಪರಿಚಯಿಸಿದ Lead India Initiative ಇವತ್ತಿಗೆ ಏನಾಗಿದೆ? ಹೊಸ ಮುಖಂಡರು ಏನು ಮಾಡುತ್ತಿದ್ದಾರೆ? ಇನ್ನು ಮೂರು ಬೋಟ್ ಇಟ್ಟುಕೊಂಡು ಮೀನು ಹಿಡಿದುಕೊಂಡು ವ್ಯವಹರಿಸುವ ನನ್ನದೇ ಗೆಳೆಯ ಯಾದವ, ಅವನು ಅಲ್ಲೆಲ್ಲೋ ಸಮುದ್ರದಿಂದ ಬರುವ ಸಾವಿನ ಜನರನ್ನು ಹಿಡಿದು ಅಪಘಾತವನ್ನು ತಡೆಯಲಾದೀತಾ? ಸುಮ್ಮನೆ ಮಾತು ಸಾಕು, ನಾನಿನ್ನು ಹೊರಡುತ್ತೇನೆಬೆಳಗಾದರೆ ಕೆಲಸವಿದೆ. ನಿಮಗೂ ಅಷ್ಟೆ ಆಲ್ವಾ?

Advertisements
  1. 10/12/2008 ರಲ್ಲಿ 3:06 ಅಪರಾಹ್ನ

    ಮಹೇಷ್ ಅವರೇ, ಚಳುವಳಿ ಮಾಡುವುದೆಂದರೆ ಅಷ್ಟೊಂದು ಸುಲಭದ ಕೆಲಸವಲ್ಲ. ಚಳುವಳಿ ಮಾಡುವ ಮುನ್ನ ಸಾಕಷ್ಟು ವಿಚಾರ ಮಾಡಬೇಕಾಗುತ್ತದೆ. ಸರಕಾರ ಸರಿಯಿಲ್ಲವೆಂದು ಅದರ ವಿರುಧ್ಧ ದಂಗೆಯೆದ್ದು ಅರಾಜಕತೆಯುಂಟಾದರೆ, ಆಗ ಈ ಉಗ್ರರಿಗೆ ದಾಳಿ ಮಾಡಲು ಇನ್ನಷ್ಟು ಸುಲಭವಾಗಿ ಬಿಡುತ್ತದೆ. ಹಾಗಂತ ಸೋಮಾರಿ ಆಡಳಿತದ ವಿರುಧ್ಧ ತಲೆಯೆತ್ತದೇ ಕೂರುವುದೂ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಸರಿಯಾಗಿ ಚಿಂತನೆ ನಡೆಸಿ ಮುನ್ನುಗ್ಗಬೇಕು. ನಿಜ, ಎಲ್ಲರಲ್ಲೂ ನಾಯಕತ್ವದ ಗುಣಗಳಿರುವುದಿಲ್ಲ. ಆದರೆ, ಹಾಗಂತ ಪುರಾಣ ಕಥೆಗಳಲ್ಲಿದ್ದಂತೆ “ನಾಯಕನು ಒಂದು ದಿನ ಬರುವನು” ಎಂದು ಕಾದು ಕುಳಿತಿರುವುದು ಎಷ್ಟರ ಮಟ್ಟಿಗೆ ಸರಿ? ನೀವೇ ಹೇಳಿ….

  2. siddu devaramani
    12/12/2008 ರಲ್ಲಿ 12:23 ಫೂರ್ವಾಹ್ನ

    ಎಷ್ಟು ಪ್ರಾಕ್ಟಿಕಲ್ ಆಗಿ ಬರೆದಿದ್ದೀರಿ .. ನಂಗೆ ನಾಳೆ ಕೆಲಸ ಇದೆ ..ನಿಮಗೂ ಕೊಡ ಅಲ್ವ ಅನ್ನುವ , ಲೇಖನದ ಚಿಂತನೆಯ ವಜಿ ಹೊರಿಸದೆ ಇಲ್ಲೇ ಪಕ್ಕಕ್ಕೆ ನಿಂತು ಮಾತನಾಡುವ..ಗೆಳೆಯರ ಮಾತುಗಳಂತೆ ..ಹೀಗೆ ಬರೆಯುತ್ತಿರಿ

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: