ಮುಖ ಪುಟ > ಹಾಗೆ ಸುಮ್ಮನೆ > ನಡೆದ ದಾರಿಯಿನ್ನೂ ಅರ್ಧ- ಅಷ್ಟೇ

ನಡೆದ ದಾರಿಯಿನ್ನೂ ಅರ್ಧ- ಅಷ್ಟೇ

ಹೋಗುವುದಾದರೆ ಹೋಗು
ದಾರಿ ದೊಡ್ಡದಿದೆ
ಹೊರಟ ವೇಗಕ್ಕೆ ದಾರಿ ತಪ್ಪೀತು
ನೆನೆಪಿರಲಿ ಅಷ್ಟೆ
 
ಕಳೆಯುವುದಾದರೆ ಕಳೆ
ಕೂಡಲು ಬಹಳಷ್ಟಿದೆ
ಕೂಡಿಸುವ ಭರದಲ್ಲಿ ಲೆಕ್ಕ ಹೋದೀತು
ಕಳೆದುಹೋಗದಿರು ಅಷ್ಟೆ
 
ತೊಳೆಯುವುದಾದರೆ ತೊಳೆ
ಶುದ್ದವಾಗಲು ಅವಕಾಶವಿದೆ
ತೊಳೆವ ರಭಸಕ್ಕೆ ಬಣ್ಣ ಬಿಟ್ಟೀತು
ಬಯಲಾಗದಿರು ಅಷ್ಟೆ
 
ಸಾಧಿಸುವುದಾದರೆ ಸಾಧಿಸು
ಹಂಬಲ ಬೆಟ್ಟದಷ್ಟಿದೆ
ಗೆದ್ದ ಹುರುಪಿನಲ್ಲಿ ಮೈಮರೆತೀತು
ಬುದ್ಧಿ ನೆಟ್ಟಗಿರಲಿ ಅಷ್ಟೆ
 
ಹಂಬಲಿಸುವುದಾದರೆ ಹಂಬಲಿಸು
ನೆನಪು ಬೇಕಾದಷ್ಟಿದೆ
ವರ್ತಮಾನದಲ್ಲಿ ಭೂತ ಮರೆತೀತು
ಭಾವನೆಗಳಿರಲಿ ಅಷ್ಟೆ

Advertisements
 1. siddu devaramani
  12/12/2008 ರಲ್ಲಿ 1:05 ಫೂರ್ವಾಹ್ನ

  ಏನ್ರಿ ಮಹೇಶ್ , ನನ್ನ ನೋಡಿ ಬರೆದಿರೋ ಹೇಗೆ ?ಅಷ್ಟೇ ಅಷ್ಟೇ ಅಂತ ಎಲ್ಲವನ್ನು ಹೇಳುವ ನೀವು ..ತಿನ್ನುವುದಿಲ್ಲ ಅಂತ ಹಠ ಹಿಡಿಯುವ ಮಗನಿಗೆ ಇಷ್ಟೇ ಇಷ್ಟೇ ಅಂತ ತಿನ್ನಿಸುವ ತಾಯಿ .. ಒಂದೇ ಅನ್ನಿಸಿ ಬಿಡುತ್ತಿರಿ . ಹೊರಟ ದಾರಿಗೆ ಹಂಬಲದ ಬುತ್ತಿ ಕೊಟ್ಟು, ಹೊರಟ ರಬಸಕ್ಕೆ ದಾರಿ ತಪ್ಪೀತು ಎ೦ದು ಎಚ್ಚರಿಸಿ ..ಏನೋ ಸಾದಿಸಿದ್ದಿನೆ ಅಂದುಕೊಂಡ ನನಗೆ ನಡೆದ ದಾರಿಯಿನ್ನು ಅರ್ದ ಅಷ್ಟೇ ಅಂದು ಮತ್ತಷ್ಟು ಬದುಕು ಕೈಗೆ ಇಟ್ಟಿದ್ದಿರಿ … ಇ ದೇವರು ಅನ್ನುತ್ತಾರಲ್ಲ ಅದು ನೀವೇ ನಾ ? ಕಾಡುವ ಅನುಮಾನ ನನ್ನೊಳಗೆ..

 2. 12/12/2008 ರಲ್ಲಿ 7:44 ಅಪರಾಹ್ನ

  😀 ಇಷ್ಟವಾಯಿತು.

 3. 12/12/2008 ರಲ್ಲಿ 7:54 ಅಪರಾಹ್ನ

  ವರ್ತಮಾನದಲ್ಲಿ ನಿಮ್ಮ ಈ ಸಾಲುಗಳು quotations ಆಗಿ ಎಲ್ಲೆಡೆ ತೋರಲಿವೆ! 🙂

 4. 12/12/2008 ರಲ್ಲಿ 9:08 ಅಪರಾಹ್ನ

  ಕಲ್ಲಾರೆಮನೆ…

  ಕವನ ಸೊಗಸಾಗಿದೆ…

  ಹೊಸತನ ಇದೆ…
  ಸ್ವಂತಿಕೆ ಇದೆ….

 5. Kallare
  12/12/2008 ರಲ್ಲಿ 11:06 ಅಪರಾಹ್ನ

  ಸಿದ್ದು,

  ದೇವರಮನಿಯವ್ರೇ ಹೀಗಂದ್ರೆ ಹೆಂಗೆ?
  ನಿಮ್ಗೆ ಇಷ್ಟ ಆಯ್ತು ಅಂತಾದ್ರೆ ಸಂತೋಷ. ನಿಮ್ಮ ಜೊತೆ ಎಷ್ಟು ದಿನಗಳ ಗೆಳೆತನವೋ ಅದಕ್ಕಿಂತ ಕೆಲವೇ ಕೆಲವು ದಿನಗಳ ಹೆಚ್ಚಿನ ಗೆಳೆತನ ಈ ಬ್ಲಾಗು ಹಾಗು ಅಕ್ಷರದ್ದು… ಹುಲುಲಿ ಹಳ್ಳ ಯಾವತ್ತು ತೋರಿಸ್ತೀರಿ ಸಾರ್?

  ನಿಮ್ಮವ,

  ಕಲ್ಲರೆ.

 6. Kallare
  12/12/2008 ರಲ್ಲಿ 11:10 ಅಪರಾಹ್ನ

  ನೀಲಾಂಜಲದ ಮೇಡಂ,

  ನೀವು ಬಂದಿದ್ದು ಖುಷಿಯಾಯ್ತು.

  ನಿಮ್ಮವ

  ಕಲ್ಲರೆ.

 7. Kallare
  12/12/2008 ರಲ್ಲಿ 11:18 ಅಪರಾಹ್ನ

  ಪ್ರದೀಪ್,

  ಭೂತಗಳಿಗೆ ಮಾತ್ರ ಅಂತ ಚಿಕ್ಕದಾಗಿ ಬರೆದಿರುತ್ತೆ ಕೆಳಗೆ…. ಆಮೇಲೆ ಬರೆದೋನು ಭೂತ!! 🙂

 8. Kallare
  12/12/2008 ರಲ್ಲಿ 11:44 ಅಪರಾಹ್ನ

  ಪ್ರಕಾಶ್,

  ಥ್ಯಾಂಕ್ಸ್.

  ಚೆಂದದ ಬರಹಗಳ ನಡುವೆ ನನ್ನದೂ ಒಂದು ಅಂತ ಪೋಸ್ಟ್ ಮಾಡಿದ್ದೆ.ಸಾಧಾರಣ ಸಾಲುಗಳು ಅವು.. ಇಷ್ಟವಾಗುತ್ತೆ ಅಂತ ಕೂಡ ಅಂದ್ಕೊಂಡಿರಲಿಲ್ಲ.
  ಅನಿರೀಕ್ಷಿತ ಮೆಚ್ಚುಗೆ ಸಾರ್… ಖುಷಿ ಆತು.
  ನೀವು ಮೊದಲ್ನೇ ಸಲ ಬಂದಿದೀರಿ ಆಲ್ವಾ? ಈ ಬ್ಲಾಗು ತುಂಬಾ ಜನರನ್ನ ಪರಿಚಯಿಸಿದೆ ಕಳೆದ ಕೆಲವು ದಿನಗಳಲ್ಲಿ.ಬರ್ತಾ ಇರಿ ಆಗಾಗ..

  ನಿಮ್ಮವ,

  ಕಲ್ಲರೆ

 9. 13/12/2008 ರಲ್ಲಿ 8:55 ಅಪರಾಹ್ನ

  ಹೂಂ…. ಹೀಗೆ ವಿಷ್ಯ…

 10. 16/12/2008 ರಲ್ಲಿ 1:20 ಅಪರಾಹ್ನ

  chennagide.

  ondu ola nota hondida, vaastavika nelegattina gatti kavana annisitu.

  Ganesh.

 11. Giri
  17/12/2008 ರಲ್ಲಿ 3:33 ಅಪರಾಹ್ನ

  Good One. Well narrated.

 12. Kallare
  17/12/2008 ರಲ್ಲಿ 4:12 ಅಪರಾಹ್ನ

  ಶ್ರೀದೇವಿ ಮೇಡಂ,

  ವಿಷ್ಯ ಹಾಗೇ… ಅದೊಂಥರಾ ಮಜ್ಜಾ ಕಥೆ ಗೊತ್ತಲ್ವಾ?
  ನೀವು ಮತ್ತೆ ಬಂದಿದ್ದು ಖುಷಿ ಆತು….

  ಥ್ಯಾಂಕ್ಸ್ ಗಣೇಶ್ & ಗಿರಿ ..

  ಎಲ್ಲೋ ಒಂದು ಕಡೆ ತಲೆ ಹೊಕ್ಕ ವಿಚಾರ ತಂದು ನಿಮ್ಮ ಮುಂದೆ ಹಂಚ್ಕೊಂಡೆ… ಪೋಸ್ಟ್ ಮಾಡಿದಮೇಲೂ ಸಮಾಧಾನ ಇರ್ಲಿಲ್ಲ.ಅಷ್ಟೊಂದು ಒಳ್ಳೆ ಮಾತುಗಳಿಗೆ ಅರ್ಹ ಅಲ್ವೇನೋ…

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: