ಮುಖ ಪುಟ > ಹೀಗೊಂದು ಮಾತು > ಮರೆಯಾಗುವವನ ಕಣ್ಣ ಭಾಷೆ..

ಮರೆಯಾಗುವವನ ಕಣ್ಣ ಭಾಷೆ..

ದಾಟಿ ಹೋಗುತ್ತೇನೆ
ಅಂಗಳದ ಮುಂದೆ
ಹೆಜ್ಜೆಗಳ ಜೊತೆಯಾಗಿ
ನೆನೆಪುಗಳ ನಡಿಗೆ
ನೆರಳುಗಳ ಹಂಗಿಲ್ಲ 

ಬೆಳಕಿನ್ನೂ ಹುಟ್ಟಿರದೆ
ಕಡುಗಪ್ಪು ಹಾದಿ
ಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆ
ಸುಮ್ಮನಿರಲೇಳಿ
ನಾನೂ ಮೌನಿಯಾಗುತ್ತೇನೆ.
ಮಾತುಗಳ ಮಳೆಯಿಲ್ಲ

ಮತ್ತೆ ಹುಟ್ಟುವ ಸೂರ್ಯ
ಕಿಟಕಿಯೊಳಗಿಂದ ತಲುಪಿ
ಮೈಮುರಿದು ಎಚ್ಚೆತ್ತು
ನೀ ಕಣ್ತೆರೆಯುವಷ್ಟರಲ್ಲಿ
ನಾ ಹೊರಟುಹೋಗುತ್ತೆನೆ 
ಕಣ್ಣುಗಳ ಮಿಲನವಿಲ್ಲ

ಕತ್ತಲು ಬೆಳಕೆರಡೂ
ಬರುವ ಹೋಗುವ
ನಿತ್ಯದ ಹೊಂದಾಣಿಕೆಗೆ
ಮನಸೋತು
ಮಾತು ಕೊಟ್ಟಿದ್ದೇನೆ
ನೀವು ಸಂಧಿಸುವ ಸಮಯಕ್ಕೆ
ಸರಿಯಾಗಿ ಹಾಜರಿರುತ್ತೇನೆಂದು

ಮತ್ತೆ ಮರೆಯಾಗುತ್ತೇನೆಂದು..

(ದಟ್ಸ್ ಕನ್ನಡದಲ್ಲಿ ಪ್ರಕಟವಾದ ಕವನ)

Advertisements
 1. ವೈಶಾಲಿ
  19/12/2008 ರಲ್ಲಿ 2:06 ಅಪರಾಹ್ನ
 2. ವಿಜಯರಾಜ್ ಕನ್ನಂತ
  19/12/2008 ರಲ್ಲಿ 4:46 ಅಪರಾಹ್ನ

  Nice one… 🙂

 3. 20/12/2008 ರಲ್ಲಿ 9:27 ಫೂರ್ವಾಹ್ನ

  ಅಧ್ಬುತ.. ನೀವು ಆರಿಸಿದ ಫೋಟೋ ನಿಮ್ಮ ಪದ್ಯ ವಾಹ್.. ಭಾರಿ ರೀ ನೀವು..

 4. 20/12/2008 ರಲ್ಲಿ 10:00 ಫೂರ್ವಾಹ್ನ

  ಕವನದ ನಿರ್ಲಿಪ್ತತೆ ಇಷ್ಟವಾಯ್ತು. Its just not only good, it is excellent 🙂

 5. Kallare
  22/12/2008 ರಲ್ಲಿ 4:25 ಅಪರಾಹ್ನ

  ವೈಶಾಲಿ,

  ಥ್ಯಾಂಕ್ಸ್.

  ಕನ್ನಂತರೇ,

  ಥ್ಯಾಂಕ್ಸ್

  ಸಿದ್ದು,

  ನಾನು ಭಾರಿ ಆಗೋಕೆ ಪ್ರಯತ್ನ ಮಾಡಿದ್ರೂ ಆಗ್ತಾ ಇಲ್ರಿ… ಏನ್ ಮಾಡಿದ್ರೂ 70 ದಾಟ್ತಾ ಇಲ್ಲಾ….

  ಹೇಮಾ,

  ಎಲ್ಲೋ ಬೇಕು ಬೇಡದ ನಡುವೆ ಹೊರಟ ಸರಕು ಅದು… ನಾನು ಅಂದುಕೊಂಡಿದ್ದೂ ಅದನ್ನೇ. ಅದರೆ ಸಮಾಧಾನವಂತೂ ಆಗಿರಲಿಲ್ಲ ಮೇಡಮ್… ’ನಿರ್ಲಿಪ್ತತೆ’ಯನ್ನ ತೋರಿಸುತ್ತೆ ಅಂತಾದ್ರೆ ತುಂಬಾ ಸಂತೊಷ..

  ನೀವು ಮೊದಲ್ನೆ ಸಲ ಬಂದಿದೀರಿ… ಖುಷಿಯಾಯ್ತು.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: