ಮುಖ ಪುಟ > ಹಾಗೆ ಸುಮ್ಮನೆ > ಆದರಾಗಲಿ ಬಿಡು ಕತ್ತಲು ಮತ್ತೆ….

ಆದರಾಗಲಿ ಬಿಡು ಕತ್ತಲು ಮತ್ತೆ….

ಬೆಳಗು ಬದುಕು ಕಟ್ಟುತ್ತದಂತೆ
ಎದುರಾಗುವ ರಾತ್ರಿಗೆ ಕನಸು ನೀಡುತ್ತದಂತೆ

ಮೊನ್ನಿನ ರಾತ್ರಿ ತುಂಬೆಲ್ಲಾ
ಮಂದ ಬೆಳಕಿನ ಹೊಯ್ದಾಟದಲ್ಲಿ
ಗಿಲಿಗುಡುವ ನೀಲಿ ಬಳೆಗಳ ಚಕ್ಕಂದ
ಸೂರ್ಯನೂ ಅರೆಘಳಿಗೆ ತಡಮಾಡಿ ಬಂದಿದ್ದ..

ನಿನ್ನೆಗಾಗಲೇ ಸದ್ದಿಲ್ಲದೆ ಬಿದ್ದ
ಕೆಂಪು ಹಾಸಿಗೆಯ ಮೇಲೆ ಚೂರು ಬಳೆ
ಗೆದ್ದ ಹುರುಪಿನಲ್ಲಿ ಕೋಳ ಹಿಡಿದ ನೀನು 
ಜಾವಕ್ಕೂ ಮೊದಲೇ ಬೆಳಗಾಗಿ ಬಿಟ್ಟಿತ್ತು..

ಪದೇ ಪದೇ ಬಂದು ಕೆಣಕುತ್ತವೆ
ಒಮ್ಮೆ ಜೀವ ಹಿಡಿದು ಸಂತೈಸಿದರೆ
ಮತ್ತೊಮ್ಮೆ ಜೀವ ಹಿಂಡಿ ಹಿಪ್ಪೆಮಾಡಿ
ಮರಳಿ ವಾಸ್ತವಕ್ಕೆಸೆದು ಹೋಗುತ್ತವೆ.

ಹಾಗೇ ಸಲಹುತ್ತಿರುವೆ ಕನಸುಗಳ
ವಾಸ್ತವದ ಬೆಳಕುಗಳ ನೆರಳಿನೊಳಗೆ
ಬೆಳಗು ಕೈಹಿಡಿದು ನಡೆಸಿದರೆ
ನೆನಪುಗಳು ಹಿಂಬಾಲಿಸಿ ಬರುತ್ತಿವೆ

ಆದರಾಗಲಿ ಬಿಡು ಕತ್ತಲು ಮತ್ತೆ
ಮುಚ್ಚುವ ರೆಪ್ಪೆಗಳ ಜೊತೆಗಾದೀತು
ಕನಸುಗಳು ಬಾಗಿಲಲ್ಲೇ ಸ್ವಾಗತಿಸಿ
ತನ್ನ ತೆಕ್ಕೆಗೆಳೆದುಕೊಂಡು ನಡೆದೀತು

ನೆನಪಿನಂಗಳದ ತುಂಬಾ ಹನಿ ಸುರಿದು
ಹಗಲಿನ ಹಂಬಲಕ್ಕೆ ಸಾಕ್ಷಿಯಾದೀತು.

Advertisements
 1. 27/12/2008 ರಲ್ಲಿ 11:20 ಅಪರಾಹ್ನ

  ಆದರಾಗಲಿ ಬಿಡು ಕತ್ತಲು ಮತ್ತೆ .. ಈಚೆಗೆ ಬರೀ ಸೋಲುಗಳನ್ನೆ ಕ೦ಡ ನನಗೆ ನಿಮ್ಮ ಪದ್ಯ ಹೊಸ ಹುರುಪು ತ೦ದಿದೆ. ನಿಮ್ಮ ಕವನಗಳ ಹೊಸ ಅಭಿಮಾನಿ ನಾನು.. ಮತ್ತೆ ಮತ್ತೆ ಬರೆಯುತ್ತಿರಿ ಎ೦ದು ಹಾರೈಸಿ

 2. 28/12/2008 ರಲ್ಲಿ 10:10 ಅಪರಾಹ್ನ

  “ಹಾಗೇ ಸಲಹುತ್ತಿರುವೆ ಕನಸುಗಳ
  ವಾಸ್ತವದ ಬೆಳಕುಗಳ ನೆರಳಿನೊಳಗೆ…”
  ಬಲು ಸೊಗಸಾದ ಸಾಲುಗಳು.. ಸೊಗಸಾಗಿರುವ ಕವನದಲ್ಲಿ… 🙂

 3. ವೈಶಾಲಿ
  29/12/2008 ರಲ್ಲಿ 5:01 ಫೂರ್ವಾಹ್ನ

  chandada kavite…. 🙂

  http://kenecoffee.wordpress.com/

 4. Brunda
  30/12/2008 ರಲ್ಲಿ 2:24 ಅಪರಾಹ್ನ

  BELAKU MATTU KATHALALLI ISHTODU VISHAYA IDE ENDU, NIMMA KAVITHE ODIDADA MELE GOTAITHU. THUBHA CHENNAGIDE, 4TH STANZA CHENNAGIDE.

 5. Dinesh
  30/12/2008 ರಲ್ಲಿ 10:41 ಅಪರಾಹ್ನ

  I ENJOYED READING THIS POETRY… VERY NICE POEM. GOOD FLOW…

 6. Kallare
  31/12/2008 ರಲ್ಲಿ 4:30 ಅಪರಾಹ್ನ

  ಸಿದ್ದು,

  ನಿಮ್ಮ ಮಾತು ದೊಡ್ಡದು… ಮತ್ತೆ ಮತ್ತೆ ಪ್ರಯತ್ನ ಮಾಡೋದಕ್ಕೆ ಸಹಾಯ ಅಂತೂ ಆಗುತ್ತೆ ನಿಮ್ಮ ಪ್ರೋತ್ಸಾಹದಿಂದಾಗಿ. ಮತ್ತೆ ಈ ’ಅಭಿಮಾನಿ’ ಅನ್ನೋ ಪದ ನಾನು ಬಳಸಬೇಕಾದ್ದು…. ನಿಮ್ಮ ಕವನಗಳ ಮುಂದೆ ಇದೆಲ್ಲಾ ಎನಂದ್ರೆ ಏನೂ ಅಲ್ಲ ಬಿಡಿ..

 7. Kallare
  31/12/2008 ರಲ್ಲಿ 4:31 ಅಪರಾಹ್ನ

  ಪ್ರದೀಪ್,

  ಥ್ಯಾಂಕ್ಸ್..

 8. Kallare
  31/12/2008 ರಲ್ಲಿ 4:34 ಅಪರಾಹ್ನ

  ವೈಶಾಲಿ,

  ನೀವು ಹತ್ತು ಸಲ ಈ ಮಾತು ಹೇಳಿದ್ರಿ…. ಥ್ಯಾಂಕ್ಸೂ…

 9. Kallare
  31/12/2008 ರಲ್ಲಿ 4:35 ಅಪರಾಹ್ನ

  ಬ್ರಂದಾ ಮೇಡಮ್,

  ನೀವು ಮತ್ತೆ ಬಂದ್ರಿ…. ಥ್ಯಾಂಕ್ಸ್.

  ದಿನೆಶ್,

  ಥ್ಯಾಂಕ್ಸ್..

 10. ವಿಜಯರಾಜ್ ಕನ್ನಂತ
  05/01/2009 ರಲ್ಲಿ 2:25 ಅಪರಾಹ್ನ

  thumbaa chennagide….
  heege bareetiri…odi naavu khushi paDteevi

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: