ಮುಖ ಪುಟ > ಕಲ್ಲರೆ ಮನೆ > ಗಣಿತ ಮನಸು….ಅಗಣಿತ ನೋಟ

ಗಣಿತ ಮನಸು….ಅಗಣಿತ ನೋಟ

 ಮನಸೇ…
ಮತ್ತೆ ಕಣ್ಣಿಗೆ ಸುಣ್ಣ ಬೇಡ
ಮುಗ್ಧ ನೋಟದ
ಸಶಕ್ತ ಜೋಡಿಗಳಿಗೆ
ಸ್ವಲ್ಪವಾದರೂ ರಿಯಾಯತಿಯಿರಲಿ!

ಅವು ಗೊಂದಲ ಹುಟ್ಟಿಸುವುದಿಲ್ಲ
ವೈಪರೀತ್ಯಗಳಿಗೆ ಕಾರಣವಾಗುವ
ಮರೆಮೋಸವಿಲ್ಲ ಅಲ್ಲಿ!

ಪ್ರೀತಿ ತೋರಿಸುವ
ಸಿಟ್ಟಾಗಿ ಕುಣಿವ
ಉದ್ದೇಶಪೂರ್ವಕ ಮರೆವ
ವಿವಿಧ ನಮೂನೆ ನಖರೆಗಳು
ಅವುಗಳೊಳಗಿಲ್ಲ

ನಿನ್ನಿಂದಾಗಿ ಅವು
ಒಮ್ಮೊಮ್ಮೆ ಮರುಗಿದರೂ
ಮಸುಕಾಗುವುದಿಲ್ಲ, ಮಂಕಾಗುವುದಿಲ್ಲ.

ಮುಂದೊಂದು ಹಿಂದೊಂದು
ಯೋಚಿಸುವ ಕಲೆಯಿಲ್ಲ ಅವುಗಳೊಳಗೆ

ನಿನ್ನೊಳಗೋ ಎಲ್ಲಾ ಲೆಕ್ಕಾಚಾರ
ಕಾಣಬೇಕಾದುದ ಕಣ್ತುಂಬಿಕೊಂಡು 
ಬೇಡದ್ದು ಅಲ್ಲೇ ಬಿಡುತ್ತವೆ ಅವು.

ನಿನ್ನ ಯೋಚನೆ-ಯೋಜನೆಗಳ
ಫಲವಾಗಿ ದೂರ ದಾರಿ
ಒಳಗಣ್ಣಿಗೂ ಕಾಣಿಸದಾಗುತ್ತದೆ ಆಗಾಗ

ಕೂಡಿ ಕಳೆದು ಗುಣಿಸಿ ಭಾಗಿಸುವ
ಉತ್ತರಕ್ಕೆ ಹಪಹಪಿಸುವ ಕೆಲಸವಿಲ್ಲ
ಗಣಿತ ಮನಸು ಬೇಡ
ಅಗಣಿತ ನೋಟ ಸಾಕು!
ನಿನ್ನಲ್ಲಿ ಸಿಗುವುದೆಲ್ಲಾ ಉತ್ತರವಲ್ಲ
ಹಲವು ಪ್ರಶ್ನೆಗಳ ಮೂಲ!

ಆ ತಂಪಿನೊಳಗೆ
ಲೆಕ್ಕವಿಲ್ಲ. ಆಸೆ ಆಕಾಂಕ್ಷೆಗಳು
ಓಂದು ನೋಟ ಮಾತ್ರದಲ್ಲಿ
ವ್ಯಕ್ತವಾಗುತ್ತವೆ.
ನೀನಾದರೋ..
ಸರಿ-ತಪ್ಪು, ಸುಖ-ದು:ಖ
ಸೋಲು-ಗೆಲುವು… ಲೆಕ್ಕವಿಲ್ಲದಷ್ಟು
ಲೆಕ್ಕಾಚರದಲ್ಲಿ ಮುಳುಗಿ..
ಲೆಕ್ಕ ತಪ್ಪಿಸುತ್ತೀ.. 

ಮಹೇಶ್ ಹೆಗಡೆ, ಕಲ್ಲರೆ

(ಬ್ಲಾಗ್ ಲೋಕಕ್ಕೆ ಮತ್ತೊಬ್ಬರ ಪ್ರವೇಶವಾಗಿದೆ. ಗೆಳೆಯ ವಿ.ಆರ್ ’ಬತ್ತಲಾರವು ಭಾವನೆಗಳು’ ಅನ್ನೋ ಕವನದೊಂದಿಗೆ ’ಬಾನಿನಂಗಳ’ ಹೊಕ್ಕಿದ್ದಾರೆ. ವಿಆರ್ ಓದಿಕೊಂಡವರು, ಒಂದಿಷ್ಟು ಬರೆದಿದ್ದಾರೆ ಕೂಡಾ.. ಬರೆದಿದ್ದೆಲ್ಲಾ ಮುಚ್ಚಿಟ್ಟು ಕುಳಿತವರು ಈಗ ಒಂದೊಂದಾಗಿ ಹೊರತರುವ ಮಾತಾಡಿದ್ದಾರೆ.. ಒಮ್ಮೆ ಹೋಗಿಬನ್ನಿ ಬಾನಿನಂಗಳಕ್ಕೆ….  http://vrhegde.wordpress.com/ )

Advertisements
 1. 02/01/2009 ರಲ್ಲಿ 3:25 ಅಪರಾಹ್ನ

  ಹೊಸ ದೃಷ್ಟಿಕೋನವನ್ನು ಚಿತ್ರಿಸುತ್ತಿರುವ ಕವನ ತುಂಬಾ ಚೆನ್ನಾಗಿದೆ. ಎಲ್ಲವುದಕ್ಕೂ ಈ ಮನಸೇ ತಾನೆ ಕಾರಣ ?
  ಸಾಲೊಂದು ನೆನಪಾಗುತ್ತಿದೆ…. “ನೋಟ ಒಂದು ಭಾವ ಹಲವು”

  ಕವನಕ್ಕೆ ಪೂರಕವಾಗಿರುವ ಚಿತ್ರ ಕೂಡಾ ಇಷ್ಟವಾಯಿತು.

 2. ಜಿತೇಂದ್ರ
  02/01/2009 ರಲ್ಲಿ 5:09 ಅಪರಾಹ್ನ

  ಕವಿತೆ ಚಂದವಿದೆ. ಅಷ್ಟೇ ಲಯ ಬದ್ಧ. ಕಾಗುಣಿತ ದೋಷಗಳು ಸ್ವಲ್ಪ ಕಿರಿಕಿರಿ ಮಾಡಿದ್ದು ಉಂಟು.

 3. Sunil
  02/01/2009 ರಲ್ಲಿ 5:31 ಅಪರಾಹ್ನ

  Kavithe chennagi moodi bandide. Innu idhe therana bhavishyadalli sundara kavanagalu baruvanthaagali. Nimma manassu moodisiddannu Kayyi geechuvanthaagali

 4. balaglobal
  02/01/2009 ರಲ್ಲಿ 6:36 ಅಪರಾಹ್ನ

  ‘ಗಣಿತ ಮನಸ್ಸಿನ ‘ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ.
  ಹೊಸ ವರ್ಷದ ಶುಭಾಶಯಗಳು, ಹೊಸವರುಷದಲ್ಲಿ ನಿಮ್ಮ ಕನಸುಗಳು ನನಸಾಗಲೆಂದು ಹಾರೈಸುತ್ತಾ
  ಸ್ನೇಹದಿಂದ,
  -ಬಾಲ.

 5. Suvarna Hegde
  02/01/2009 ರಲ್ಲಿ 7:20 ಅಪರಾಹ್ನ

  cholo iddu, manassina most lekkachara ella express agodu kanninalli thane ……!

 6. 03/01/2009 ರಲ್ಲಿ 8:39 ಫೂರ್ವಾಹ್ನ

  ನೀವು ನಮ್ಮೆಲ್ಲರಿಗೂ ಎನೋ ಬರಿತಿದ್ದೀನಿ ಎ೦ದು ಲೆಕ್ಕ ತಪ್ಪಿಸುತ್ತಿದ್ದೀರಿ.. ನಿಮ್ಮ ಲೆಕ್ಕ ಸರಿಯಾಗಿದೆ..
  ಎಲ್ಲಿ೦ದ ಹೊಳೆಯುತ್ತೆ ನಿಮಗೆ ಈ ತರಹದ ಯೋಚನೆಗಳು..?
  ನಿಮ್ಮ ಬರಹ ಹೀಗೆ ಲೆಕ್ಕ ತಪ್ಪಿಸುತ್ತಿರಲಿ.. ಪ್ರೀತಿಯಿ೦ದ

 7. Deepti Hegde
  03/01/2009 ರಲ್ಲಿ 10:04 ಅಪರಾಹ್ನ

  ಪೇಳಬಾರದು ಬಾಲೆ ನಾ ನಕ್ಕ ಪರಿಯ ಪೇಳಿದರೆ ನೀ ಅನ್ಯರಿ೦ಗುಸಿರದಿರೆಯ?

 8. 05/01/2009 ರಲ್ಲಿ 8:05 ಅಪರಾಹ್ನ

  ganitha manassininda nodidaagalu, aganita nota beeridaagalu, chennaaagi toruttide! 🙂

 9. Kallare
  06/01/2009 ರಲ್ಲಿ 3:46 ಅಪರಾಹ್ನ

  ತೇಜಸ್ವಿನಿ ಮೇಡಮ್,

  ಈ ಪ್ರಯತ್ನಕ್ಕೆ ವೈಶಾಲಿಯವ್ರು ಕಾರಣ… ನೆನಪು, ಕನಸು… ಅಂತ ಒಂದೆರಡು ಪೋಸ್ಟ್ ಮಾಡಿ ಬ್ಲಾಗ್ ಹೊಕ್ಕವನಿಗೆ ಬೇರೆ ಬರೀ ಅದೊಂದೇ ಅಲ್ಲ ಬೇರೆನೂ ಪ್ರಯತ್ನ ಮಾಡು ನೀನು ಬರೀತೀಯ ಅನ್ಸುತ್ತೆ ಅಂದಿದ್ರು.. ತಲೆ ಹೊಕಿದ್ದು ಇದು.

  ನೋಡುವ ಕಣ್ಣು ಸರಳವಾಗಿ ನೋಡಿದರೆ, ಯೋಚಿಸುವ ಮನಸು ಹಲವು ನಮೂನೆಗಳದ್ದು ಅನ್ನುವ ವಿಚಾರ ಇಟ್ಕೊಂಡು ಮಾಡಿದ ಪ್ರಯತ್ನ… ನಿಮಗೊಪ್ಪಿಗೆಯಾದದ್ದು ಸಂತೋಷ. ಚಿತ್ರ ಕೂಡಾ… ತುಂಬಾ ಹುಡ್ಕಿ ಹುಡ್ಕಿ ಹಾಕಿದ್ದು ಅದು..

  ನೀವು ಇದೇ ಮೊದಲಲ್ವಾ ಬಂದಿದ್ದು? ಖುಷಿ ಆತು.. ಆಗಾಗ ಬರ್ತಿರಿ.

 10. Kallare
  06/01/2009 ರಲ್ಲಿ 3:49 ಅಪರಾಹ್ನ

  ಜಿತೇಂದ್ರ ಸರ್,

  ನಿಮಗೊಪ್ಪಿಗೆಯಾದದ್ದು ಸಂತೋಷ. ಸುಧಾರಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿರುತ್ತೆ…
  ನೀವು ಇನ್ನೂ ವಿವರಿಸಿ ಹೇಳಿದ್ರೆ ಚೆನ್ನಾಗಿರ್ತಿತ್ತು….

 11. Kallare
  06/01/2009 ರಲ್ಲಿ 3:52 ಅಪರಾಹ್ನ

  ಸುನೀಲ್ ಅಜ್ಜಾ,

  ಥ್ಯಾಂಕ್ಸೂ… ಗೀಚಿದ್ನೆಲ್ಲಾ ನಿಮ್ಮನೆಗೆ ಪೋಸ್ಟ್ ಮಾಡಿರ್ತೀನಿ. ಅದ್ರ ಜೊತೆಗೊಂದು ಲವ್ ಲೆಟರ್ ಕೂಡಾ… ಅಗಾಗ ಬರ್ತಿರಿ ಮೊಮ್ಮಗನ ಮನೆಗೆ..

 12. Kallare
  06/01/2009 ರಲ್ಲಿ 3:54 ಅಪರಾಹ್ನ

  ಬಾಲಾ ಗ್ಲೋಬಲ್….

  ಥ್ಯಾಂಕ್ಯೂ… ನೀವೂ ಇದೇ ಮೊದಲು ಬಂದಿದ್ದು. ಖುಷಿ ಆತು…

 13. Kallare
  06/01/2009 ರಲ್ಲಿ 3:58 ಅಪರಾಹ್ನ

  ಸುವರ್ಣಾ,

  ನೀವು ಹೇಳಿದ್ದು ಸರಿ.. ಆದ್ರೆ ನಾನು ಇಲ್ಲಿ ಹೇಳಿದ್ದು ಸ್ವಲ್ಪ ಬೇರೆಯದೇ ವಿಚಾರ….
  ನೀವೂ ಚೆನ್ನಾಗಿ ಬರೀತೀರಂತ ಕೇಳಿದ್ದೆ.. ಅದ್ನೆಲ್ಲ ಓದಿಸ್ತೀರಾ?

 14. Kallare
  06/01/2009 ರಲ್ಲಿ 4:05 ಅಪರಾಹ್ನ

  ಸಿದ್ದು,

  ನಿಮ್ಮ ಪ್ರೀತಿ ದೊಡ್ದದು… ಬ್ಲಾಗ್ ಬರೆಯುವವರಲ್ಲಿ ಇಷ್ಟವಾಗುವ ಕೆಲವರಲ್ಲಿ ನೀವು ಮೊದಲಿಗರು ಸಿದ್ದು.. ನಿಮಗಿಷ್ಟವಾದದ್ದು ಸಂತೋಷ. ಇಲ್ಲೇ ಪರಿಚಯವಾದ ಕೆಲವರ ಪ್ರೋತ್ಸಾಹ ತುಂಬಾ ಖುಷಿ ಕೊಡುತ್ತೆ…

  ಸ್ನೇಹ ಹೀಗೇ ಮುಂದುವರೆಯಲಿ…

 15. Kallare
  06/01/2009 ರಲ್ಲಿ 4:08 ಅಪರಾಹ್ನ

  ದೀಪ್ತಿ,

  😦 ಎಲ್ಲಿಂದ ಎಲ್ಲಿಗೆ ಹೋಲಿಸ್ಬೇಕು? ನಿಮ್ಮ ಪ್ರತಿಕ್ರಿಯೆಗೆ ಹೇಳೋದಕ್ಕೆ ಏನೂ ಇಲ್ಲಾ… ನೀವೆ ವಿವರಿಸ್ಬೇಕೂ…

 16. Kallare
  06/01/2009 ರಲ್ಲಿ 4:10 ಅಪರಾಹ್ನ

  ಪ್ರದೀಪ್,

  ಥ್ಯಾಂಕ್ಸಪ್ಪೋ… ನಿನ್ನ ಜಾಗರಣೆ/ ಹಾಳು ಪ್ರೇಮ ರೋಗ ಎಲ್ಲಿಗೆ ಬಂತು?

 17. Shridhar
  07/01/2009 ರಲ್ಲಿ 6:13 ಅಪರಾಹ್ನ

  idu bhaari lekkaachaara Mahesh….

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: