ಮುಖ ಪುಟ > ಹಾಗೆ ಸುಮ್ಮನೆ > ಹಾಗೆ ಸುಮ್ಮನೆ… ಅಂವನ ಮಾತು.

ಹಾಗೆ ಸುಮ್ಮನೆ… ಅಂವನ ಮಾತು.

ನೀನಂದ್ರೆ ಇಷ್ಟ
ಅಂದವನ ಕಣ್ಣು ಇಷ್ಟಗಲ
ಅವಳದೊಂದೂ ಮಾತಿಲ್ಲ

ಇಂವ ಮತ್ತೆ
ಮತ್ತೆ ಮತ್ತೆ ಹೇಳಿದ..
ಅವಳದೊಂದೂ ಮಾತಿಲ್ಲ

ಸುಮ್ಮನಾಗದವ
ಹಾಗನ್ನುತ್ತಲೇ ಹೊರಟರೆ
ಸುಮ್ಮನೆ ತಬ್ಬಿಕೊಂಡಳಷ್ಟೆ

ಈಗವನ ಮಾತಿಲ್ಲ..

************
ನಿನ್ನ ಕಣ್ಣೀರು
ನೋಡಲಾರೆನೆಂದವನು
ಕಣ್ಣಲ್ಲಿ ಕಣ್ಣಿಟ್ಟು
ಜೋಪಾನ ಮಾಡಿದ

ಆದರೂ ಕಣ್ತಪ್ಪಿಸಿ
ಹೋದವಳು
ಅಲ್ಲೆಲ್ಲೋ ನಗುತ್ತಿದ್ದರೆ
ಇಂವನ ಕಣ್ತುಂಬಾ
ಧಾರೆ ಧಾರೆ..

ಅವಳೂ ಅಂದಂತಿತ್ತು
ನಾನೂ ಕಣ್ಣೀರು ನೋಡಲಾರೆ…

Advertisements
 1. Nagaraja
  07/01/2009 ರಲ್ಲಿ 7:38 ಅಪರಾಹ್ನ

  Don’t know what to comment, I’ll just experience the lines… 🙂

 2. 07/01/2009 ರಲ್ಲಿ 7:40 ಅಪರಾಹ್ನ

  ಮಹೇಶ್,
  ಸುಂದರವಾದ ಕವನಗಳು, ಮಾತಿಗಿಂತ ಕಾರ್ಯ ಮುಖ್ಯ, ವಿರೋಧಾಭಾಸ ಗಳನ್ನೂ ಸರಳವಾಗಿ ಚಿತ್ರಿಸಿವೆ.

  -ಬಾಲ.

 3. nagtalwar
  08/01/2009 ರಲ್ಲಿ 1:40 ಅಪರಾಹ್ನ

  ಹಾಗೆ..ಸುಮ್ಮನೆ…ಇಷ್ಟವಾಯಿತು..
  ನಾಗು,ತಳವಾರ್.

 4. Kallare
  09/01/2009 ರಲ್ಲಿ 10:00 ಫೂರ್ವಾಹ್ನ

  hmm… chennagi baryorella sumne kootu hingentirtaare… e nagaraja haange

 5. Kallare
  09/01/2009 ರಲ್ಲಿ 10:08 ಫೂರ್ವಾಹ್ನ

  ಬಾಲು,

  ಹಾಗೆ ಸುಮ್ನೆ ಮಾಡಿದ ಪೋಸ್ಟ್ ಅದು…. ನಿಮಗಿಷ್ಟವಾದದ್ದು ಸಂತೋಷ.

 6. Kallare
  09/01/2009 ರಲ್ಲಿ 10:09 ಫೂರ್ವಾಹ್ನ

  ನಾಗು ತಳವಾರ್,

  ನಿಮ್ಮ ಬಗ್ಗೆ ಕೇಳಿದ್ದೆ… ಆದರೆ ಇನ್ನೂ ಮಾತಿಗೆ ಅವಕಾಶ ಆಗಿರ್ಲಿಲ್ಲ.
  ನೀವು ಬಂದಿದ್ದು ಸಂತೋಷ… ಹಾಗೆ.. ಸುಮ್ಮನೆ.. ಬರೆದದ್ದು ನಿಮಗೆ ಹಾಗೆ ಸುಮ್ಮನೆ ಇಷ್ಟವಾದುದ್ದು ಹಾಗೆ ಸುಮ್ಮನೆ ಸಂತೋಷದ ಸುದ್ದಿ.. 🙂

 7. 09/01/2009 ರಲ್ಲಿ 1:24 ಅಪರಾಹ್ನ

  ರಮೇಶ್ ರೇ,
  ಚೆನ್ನಾಗಿವೆ ಸಾಲುಗಳು, ಇಷ್ಟವಾಯಿತು.
  ನಾವಡ

 8. 09/01/2009 ರಲ್ಲಿ 5:13 ಅಪರಾಹ್ನ

  ಮೊದಲ ಕವನ ಇಷ್ಟವಾಯಿತು.. ಹಾಗೆ ಸುಮ್ನೇ ಮಾಡಿದ ಪೋಸ್ತ್ ಅಂತೀರಿ, ಸುಮ್ನೇ ಚೆನ್ನಾಗಿದೆ 😉

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: