ಮುಖ ಪುಟ > ಸಿನೆಮಾ > ‘Michael Radford’ನ ಒಂದು ಸುಂದರ ಕಾವ್ಯ..

‘Michael Radford’ನ ಒಂದು ಸುಂದರ ಕಾವ್ಯ..

***********************************                                                                      visit: http://saangatya.wordpress.com/                 ***********************************

‘Writer/star Massimo Troisi postponed heart surgery so that he could complete the film.’  … 
 

 ಇಂಥದ್ದೊಂದು ವಿಚಾರ ತಿಳ್ಕೊಬೇಕಾಗುತ್ತೆ ಮತ್ತು ಅಲ್ಲಿಂದಲೇ ಬರೆಯಬೇಕಾದ ಸಂದರ್ಭ ಬರುತ್ತೆ ಅಂದ್ಕೊಂಡಿರ್ಲಿಲ್ಲ, ಸಿನಿಮಾ ನೋಡುವಾಗ. ಸುಮ್ಮನೆ ಸಿನಿಮಾ ನೋಡಿ, ಅದರ ಕುರಿತಾಗಿಷ್ಟು ಮಾತಾಡಿ, ಚರ್ಚೆ ಮಾಡಿ, ಹೊಗಳಿ ಇಲ್ಲಾ ತೆಗಳಿ.. ಇದ್ದಿದ್ದೆ ಅವೆಲ್ಲಾ ಅಲ್ವಾ?

 

ಆದರೆ ಕೆಲವು ಸಂದರ್ಭಗಳಲ್ಲಿ ವಿಷಯವನ್ನು ಮೀರುತ್ತದೆ ವಸ್ತು. ವಿಷಯಕ್ಕಿಂತ ವ್ಯಕ್ತಿ ಮುಖ್ಯವಾಗಿಬಿಡುತ್ತಾನೆ. ‘ Troisi ‘ಅನ್ನುವ ಅಲ್ಪಾಯುಷಿಯ ವಿಷಯದಲ್ಲಾದದ್ದೂ ಅದೇ. 1994 ರಲ್ಲಿ ಬಿಡುಗಡೆಯಾದ ತನ್ನ ಸಿನಿಮಾವೊಂದರ ಚಿತ್ರೀಕರಣಕ್ಕೆ ತೊಂದರೆಯಾಗಬಾರದೆಂದು ಆತ ಆಗಲೇಬೇಕಿದ್ದ ತನ್ನ ಹೃದಯ ಚಿಕಿತ್ಸೆಯನ್ನು ಮುಂದೂಡಿದ್ದ. ಯಾವ ತೊಂದರೆಯೂ ಆಗದಂತೆ ಚಿತ್ರವನ್ನು ಮುಗಿಸಿ ಒಂದೇ ಒಂದು ದಿನ, he suffered a fatal heart attack. ಅಷ್ಟೇ. ಚಿತ್ರ ನೋಡಲು ಆತನೇ ಇರಲಿಲ್ಲ. ‘Michael Radford’ ನಿರ್ದೇಶನದ  ‘ಇಲ್ ಪೋಸ್ಟಿನೊಎನ್ನುವ ಚಿತ್ರ ಮಾತ್ರ ಅದ್ಭುತವಾಗಿ ಮೂಡಿಬಂದಿತ್ತು.

 

‘Il Postino ಮುಖ್ಯ ಪಾತ್ರವೇ ಆತನದು. Mario Ruoppolo ಅನ್ನುವ ಹೆಸರಿನ ಪೋಸ್ಟ್ ಮ್ಯಾನ್ ಅಂವ. ಜೊತೆಗೆ ಇನ್ನೆರಡು ಮುಖ್ಯ ಪಾತ್ರಗಳು. ‘ ಚಿಲಿ ಕವಿ Pablo Neruda’ ಪಾತ್ರದಲ್ಲಿ ‘Philippe Noiret’ ಹಾಗು ‘Beatrice’ ಪಾತ್ರದಲ್ಲಿ  ‘Maria Grazia Cucinotta’. Beatrice ಮರಿಯೊನ ಪ್ರೇಯಸಿ.

 

ಸಾಮಾನ್ಯ ಅಂಚೆಯವ ಒಬ್ಬ ಪ್ರಸಿದ್ದ ಕವಿಯ ಪತ್ರಗಳನ್ನು ತಲುಪಿಸುತ್ತಾ ತಲುಪಿಸುತ್ತಾ ತಾನೂ ಕವಿತೆಯ ಪ್ರೇಮಕ್ಕೆ ಬೀಳುವುದರ ಸುತ್ತ ಹಣೆದ ಸುಂದರ ಕಾವ್ಯ ಇದು. ನೆರುಡಾ ಅನ್ನುವ ಚಿಲಿಯ ಕವಿ ತನ್ನ ದೇಶದಿಂದ ಹೊರಬಂದವನು ನೆಲೆ ಕಂಡುಕೊಳ್ಳುವುದು ಇದೇ ‘Mario ‘ ಚಿಕ್ಕ ದ್ವೀಪದಲ್ಲಿ. ಮೀನುಗಾರಿಕೆಯನ್ನೆ ನಂಬಿಕೊಂಡ ದ್ವೀಪದ, ಮೀನುಗಾರನೊಬ್ಬನ ಮಗ ‘Mario ‘. ತಂದೆಯ ವೃತ್ತಿಯನ್ನು ಮುಂದುವರಿಸುವ ಯಾವುದೇ ಇಚ್ಛೆಯಿಲ್ಲದ ಮಗ. ಆತ ನೆರುಡಾನನ್ನು ಭೇಟಿಯಾಗುವುದು, ಅಂಚೆಯವನಾಗಿ ಕೆಲಸ ಪ್ರಾರಂಭಿಸುವುದು… ಹೀಗೆ Mario ಬದುಕು ಪ್ರಾರಂಭವಾಗುತ್ತದೆ. ಚಿತ್ರ ಆಗಲೇಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ, ‘Timely ಸಂಭಾಷಣೆ ಮತ್ತು ‘Punch’ಗಳ ಮೂಲಕ

 

 ತನ್ನದೊಂದು ಮುರುಕು ಸೈಕಲ್, ಚಿತ್ರ ವಿಚಿತ್ರ ಹಾವ ಭಾವ, ಮಾತುಗಳ ಪೋಸ್ಟ್ ಮ್ಯಾನ್, ತಾನು ದಿನವೂ ಭೇಟಿಯಾಗುವ, ಕಮ್ಯುನಿಸ್ಟ್ ವಿಚಾರ ಧಾರೆಯ, ಅದರಿಂದಾಗಿಯೇ ತನ್ನ ದೇಶದಿಂದ ಹೊರದಬ್ಬಲ್ಪಟ್ಟ, ಕವಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಕವಿಯ ಗೆಳೆಯನಾಗುತ್ತಾನೆ. ಏನೆಂದರೆ ಏನೂ ತಿಳಿಯದ ‘Mario’ಗೆ ಕವಿತೆಯನ್ನು ಹೇಳುತ್ತಾನೆ ನೆರುಡಾ. ಅದನ್ನು ಅನುಭವಿಸಲು, ಪ್ರೀತಿಸಲು ಕಲಿಸುತ್ತಾನೆ. ‘ಮರಿಯೊಕವಿತೆ ಬರೆಯಲೂ ಪ್ರಯತ್ನಿಸುತ್ತಾನೆ

 

ಹಾಗೇ ಸುಮ್ಮನೆ ಅಲ್ಲ! ನೆರುಡಾನಿಂದ ಪ್ರಭಾವಿತನಾದವನು ಕವಿತೆ ಬರೆಯ ಹೊರಟಿದ್ದು ಅಷ್ಟರಲ್ಲಾಗಲೇ ತಾನು ಇಷ್ಟಪಟ್ಟಿದ್ದ ‘Beatrice’ಳನ್ನು ಒಲಿಸಿಕೊಳ್ಳುವುದಕ್ಕೆ. ಆದ್ರೆ ಆತನ ಪ್ರಯತ್ನ ‘pathetic failure’ ಆಗುವುದು, ಮುಂದೆ ನೆರುಡಾನ ಸಹಾಯದಿಂದ ಅವರಿಬ್ಬರೂ ಹತ್ತಿರವಾಗುವುದು, ನಂತರ ಇಬ್ಬರ ಮದುವೆ ..ಹೀಗೆ ಸುಂದರ ಸನ್ನಿವೇಶಗಳ, ಸಂಭಾಷಣೆಗಳ ನಡುವೆ ಸಾಗುತ್ತದೆ ಚಿತ್ರ.

ಅಷ್ಟರಲ್ಲೊಮ್ಮೆ ಕವಿ ನೆರುಡಾಗೆ ಮರಳಿ ತನ್ನ ನೆಲಕ್ಕೆ ಹೊರಡುವ ಅವಕಾಶವಾಗಿ, ಆತ ಚಿಲಿಗೆ ಹೊರಟರೆ, ‘ಮರಿಯೊ ಬದುಕು ನಿತ್ಯದ ದುರಂತಕ್ಕೆ ಮರಳುತ್ತದೆ. ಕವಿಯ ವಿಚಾರದಿಂದ ಪ್ರಭಾವಿತನಾದಮರಿಯೊಆತನ ವಿಚಾರಗಳೂ ತನ್ನದೆಂದುಕೊಂಡು ತನ್ನನ್ನೂಕಮ್ಯುನಿಸ್ಟ್ಅಂದುಕೊಳ್ಳುತ್ತಾನೆ. ಅದು ಕೇವಲ ಕವಿಯ ಮೇಲಿನ ಪ್ರೀತಿಯಿಂದಾದದ್ದು, ಯಾವುದೇ ವಿಚಾರ ಧಾರೆ, ಸೈದ್ದಾಂತಿಕ ನಿಲುವು, ರಾಜಕೀಯ ತಿಳುವಳಿಕೆಯಿಂದಲ್ಲ

 

ಕವಿಗೆ ಮತ್ತೆ ಸಿಗುವ ಹಂಬಲದಲ್ಲೇ ಸಮಯ ಸಾಗುತ್ತದೆ. ನೆರುಡಾನ ಪತ್ರದ ನಿರೀಕ್ಷೆಯೂ ಹುಸಿಯಾಗುತ್ತಾ, ತನ್ನ ದೈನಂದಿನ ಬದುಕಿನಲ್ಲೂ ಶಾಂತಿ ಕಳೆದುಕೊಳ್ಳುತ್ತಾನೆ ‘Mario’.  He finds himself in intense state of melancholy.  ಕೊನೆಗೊಮ್ಮೆ ಆತನ ಪತ್ರ ಬರುವುದೂ, ‘Mario’ ಪತ್ರ ಕವಿ ಬರೆದುದಲ್ಲವೆಂದು ತಿಳಿದುಕೊಳ್ಳುವುದೂ ಅದರಿಂದಾಗಿ ನಿರಾಶನಾಗುವುದೂ ನಡೆದುಹೋಗುತ್ತದೆ. ‘Mario’ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆತ್ಮವಿಮರ್ಶೆ ಮಾಡಿಕೊಳ್ಳುತ್ತಾನೆ. ಅದರಿಂದಾಗಿ ತಾನು ಏನಾದರೂ ಮಾಡಬೇಕೆಂಬ ಬಯಕೆಯುಂಟಾಗುತ್ತದೆ ಆತನಿಗೆ. ಉಪಯುಕ್ತವಲ್ಲದಿದ್ದರೂ ಸರಿ. ತನ್ನ ದ್ವೀಪದ ಎಲ್ಲ ಶಬ್ದಗಳನ್ನೂ, ಭಾವನೆಗಳನ್ನೂ ಧ್ವನಿಮುದ್ರಿಸುತ್ತಾನೆ. ನೆರುಡಾ ಇಲ್ಲದ ತನ್ನ ನೆಲದ ಮತ್ತೊಂದು ರೂಪ ಕಾಣುತ್ತದೆ ಆತನಿಗೆ. ಬರೆಯುವುದಕ್ಕೊಂದು ಪ್ರೇರಣೆ ಸಿಗುತ್ತದೆ

 

ನೆರುಡಾನಿಗಾಗಿ ಬರೆದ ಕವನವನ್ನು ವಾಚಿಸುವ ಅವಕಾಶ ಸಿಕ್ಕು, ಸಂಭ್ರಮದಿಂದ ಹೊರಡುತ್ತಾನೆ ಮರಿಯೊ. ಆತನಿಗೆ ತನ್ನ ಕವನವನ್ನು ನೆರುಡಾಗೆ ಅರ್ಪಿಸಬೇಕುಅದನ್ನೆಲ್ಲಾ ಧ್ವನಿಮುದ್ರಿಸಿ ನೆರುಡಾಗೆ ತಲುಪಿಸಬೇಕು. ಆದರೆ ಮರಿಯೋನ ಹಣೆಬರಹ ಬದಲಾಗುತ್ತದೆ, ಅಲ್ಲ ಅಲ್ಲಿಗೇ ಮುಗಿಯುತ್ತದೆ. ಸ್ಟೇಜಿನ ಮುಂದೇ ಶುರುವಾದ ಗಲಭೆಯಲ್ಲಿ ಮರಿಯೊ ಇಲ್ಲವಾಗುತ್ತಾನೆಕವನ ಅಲ್ಲೇ ಉಳಿದುಹೋಗುತ್ತದೆ. ಕವಿ ಚಿಲಿಯಲ್ಲಿ

ಸಮಯ ಸರಿಯುತ್ತದೆ. ನೆರುಡಾ ತಾನಿದ್ದ ದ್ವೀಪವನ್ನೂ, ತಾನಿಷ್ಟಪಟ್ಟಅಂಚೆಯವನನ್ನೂನೋಡಲು ಬರುತ್ತಾನೆ. ಇತ್ತ ಮಾರಿಯೊ ಕಾಲವಾದ ಸ್ವಲ್ಪ ಸಮಯದಲ್ಲೇಬಿಯಟ್ರೀಸ್‘ ‘ಪೆಬ್ಲಿಟೊಗೆ ಜನ್ಮ ನೀಡುತ್ತಾಳೆ. ತನ್ನಲ್ಲಿಗೆ ಬರುವ ಕವಿಗೆ ಎದುರಾಗುವ ಮಗನೊಂದಿಗೆ ಕಣ್ಣೀರ ಸ್ವಾಗತ ನೀಡುವಬಿಯಾಟ್ರೀಸ್ಮರಿಯೋನ ಟೇಪನ್ನೆಲ್ಲಾ ನೆರುಡಾಗೆ ನೀಡುತ್ತಾಳೆ….  

 

ಅಲ್ಲಿಗೆ ಚಿತ್ರ ಮುಗಿಯುವುದಿಲ್ಲ. ನಿಮ್ಮೊಳಗೆ ನಿಜವಾದ ಚಿತ್ರ ಮೂಡಲಾರಂಭಿಸುತ್ತದೆ. ಚೆಂದದ ನಿರೂಪಣೆ, ಜೀವನ ಪ್ರೀತಿ, ಗೆಳೆತನ, ಕಲಿಕೆ.. ಬಹಳಷ್ಟು ಕಾರಣಗಳಿಗೆ ಹಿಡಿದಿಟ್ಟುಕೊಳ್ಳುತ್ತದೆ ಚಿತ್ರ. ಕವಿತೆಯಂತೆ ಸಾಗುತ್ತದೆ.  ಕಥೆಗೆ ತಕ್ಕ ಪರಿಸರ, ಅದ್ಭುತ ಅನ್ನುವಂತಹ ಚಿತ್ರೀಕರಣ, ಸುಂದರ ಸಂಗೀತ ಮೋಡಿಮಾಡುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಮರಿಯೊನ ಮಗ, ಬೆಳ್ಳನೆಯ ಚೆಂಡು ಹಾಗೆಯೇ ನೆನಪಿನಲ್ಲುಳಿಯುತ್ತದೆ….

Advertisements
 1. nagtalwar
  10/01/2009 ರಲ್ಲಿ 11:46 ಫೂರ್ವಾಹ್ನ

  ಪೀಠಿಕೆಯ ರೂಪದಲ್ಲಿಯೇ ಚಿತ್ರವನ್ನ…. ಪಾತ್ರವನ್ನ..ಸನ್ನಿವೇಶ-ಸಂದರ್ಭಗಳನ್ನ ತುಂಬಾ, ತುಂಬ ಅನುಭವಿಸಿ ಬರೆದಿದ್ದೀರಿ…! ತಮ್ಮ ಬರಹಕ್ಕೆ ನಿಜಕ್ಕೂ ಅಭಾರಿ ನಾನು..
  ನಾಗು, ತಳವಾರ್.

 2. 13/01/2009 ರಲ್ಲಿ 2:50 ಅಪರಾಹ್ನ

  ನಿಮ್ಮ ಸರಳ ಸುಂದರ ನಿರೂಪಣೆ ನನ್ನನ್ನು ಚಿತ್ರವನ್ನು ವೀಕ್ಷಿಸಲು ಪ್ರೇರೇಪಿಸುತ್ತಿದೆ. ಧನ್ಯವಾದಗಳು.

 3. 13/01/2009 ರಲ್ಲಿ 3:32 ಅಪರಾಹ್ನ

  ಚಿತ್ರಕಥೆ ಚೆನ್ನಾಗಿದೆ.. ಆದರೆ, ಇದು ನಮ್ಮ ಹಿಂದೀ/ಕನ್ನಡ ಸಿನಿಮಾದವರಿಗೆ ತಿಳಿದುಬಿಟ್ಟರೆ, ಇದನ್ನೇ ಆಧರಿಸಿ, ನಾಲ್ಕಾರು ಹಾಡುಗಳ ತುರುಕಿ, ಅದು, ಇದು ಅಂತ ಬೇಡದ ಸೆಂಟಿಮೇಂಟೆಲ್ಲಾ ತುರುಕಿ, ಇದೊಂದು ವಿಭಿನ್ನ ಚಿತ್ರವೆಂದು ಬಿಡುಗಡೆ ಮಾಡಿಬಿಟ್ಟಾರು!! 😉

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: