ಬೆಳಕು..

 (ಇದು ಮೊದಲಿಗೆ ಬರೆದದ್ದು. ಓದಿದ್ದು ಇಬ್ಬರೇ, ಗೆಳೆಯ ಸಿದ್ದು ಮತ್ತೆ ಅಕ್ಕ. ಮೊದಲಿಗೆ ಬರೆದಿಟ್ಟ ಸಾಲುಗಳನ್ನ ಬದಲಾಯಿಸಿ ’ಆಕೆಯ ಅನುಮತಿಯಿಲ್ಲ’ ಅನ್ನೋ ಹೆಸರಲ್ಲಿ ನಿನ್ನೆ ಅಷ್ಟೇ ಪೋಸ್ಟ್ ಮಾಡಿದ್ದೆ. ಇವತ್ತಿಗಾಗಲೇ ನಿರ್ಧಾರ ಬದಲಾಗಿದೆ. ಮೊದಲಿಗೆ ಬರೆದದ್ದು ನಿಮ್ಮ ಮುಂದಿದೆ…. )

ಬೆಳಕು

ಹೊರಳಿ ಮಗ್ಗುಲು ಬದಲಿಸಿದವಳ
ನೀಳ ಜಡೆ
ಜಾವದ ಬೆಳಕಿಗಷ್ಟೇ ಹೊಳೆಯುತ್ತದೆ
ಕಿಟಕಿಯೊಳಗೆ ಸೂರ್ಯ ಕಣ್ ಹೊಡೆದು
ನಾನೇ ಎಬ್ಬಿಸುತ್ತೇನೆನ್ನುತ್ತಾನೆ
ಆಕೆಯ ಅನುಮತಿಯಿಲ್ಲ..

ಮತ್ತೆ ಹೊರಳುವ ಸ್ವಪ್ನ
ಸುಂದರಿಯ ಹರವು ಬೆನ್ನಲ್ಲಿ
ಬೆರಳುಗಳ ಚಿತ್ತಾರ
ನೆರಳಿನೊಳಗೆ ಚಂದಿರ ಬಿಡಿಸಿದ್ದು
ಕಿಟಕಿಯಿಂದಲೇ ಹಾರಿ ಹೋಗುವುದು
ಮುಂಬಾಗಿಲು ತೆರೆದಾಕ್ಷಣ

ನಿಚ್ಚಳ ಬೆಳಕು ದಿನ ಕಾಣಿಸುವುದು..

Advertisements
 1. neelanjala
  16/01/2009 ರಲ್ಲಿ 3:46 ಅಪರಾಹ್ನ

  idarallinu vandanedu ista ayitu.

 2. 16/01/2009 ರಲ್ಲಿ 4:10 ಅಪರಾಹ್ನ

  ಬೆಳಕು ಮತ್ತಷ್ಟು ಮನಸೊಳಗೆ ಬೆಳಕಾಗಿ ನಿಲ್ತು. ಎರಡನೆಯದು ಸ್ವಲ್ಪ ಮಬ್ಬಾಗ್ತು.

 3. 18/01/2009 ರಲ್ಲಿ 8:45 ಅಪರಾಹ್ನ

  eradu version galu chennagive gurugale..

 1. 16/01/2009 ರಲ್ಲಿ 10:51 ಫೂರ್ವಾಹ್ನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: