ಮುಖ ಪುಟ > ಅನುವಾದ > ಈ ರಾತ್ರಿ ಬರೆಯಬಲ್ಲೆ ನಾ ಅತ್ಯಂತ ವಿಷಾದಭರಿತ ಸಾಲುಗಳ – A Pablo Neruda’s Poem

ಈ ರಾತ್ರಿ ಬರೆಯಬಲ್ಲೆ ನಾ ಅತ್ಯಂತ ವಿಷಾದಭರಿತ ಸಾಲುಗಳ – A Pablo Neruda’s Poem

ಈ ರಾತ್ರಿ ಬರೆಯಬಲ್ಲೆ ನಾ ಅತ್ಯಂತ ವಿಷಾದಭರಿತ ಸಾಲುಗಳ

ಹಾಗೇ, ಉದಾಹರಣೆಗೆ, ’ಈ ರಾತ್ರಿ ನಲುಗಿದೆ
ದೂರದಲ್ಲಿ ನೀಲೀ ನಕ್ಷತ್ರಗಳೂ ನಡುಗುತ್ತಿವೆ’

ರಾತ್ರಿಯ ಸುಳಿಗಾಳಿ ತಿರುತಿರುಗಿ ಹಾಡುತ್ತಿದೆ ಆಗಸದಲ್ಲಿ.

ಈ ರಾತ್ರಿ ಬರೆಯಬಲ್ಲೆ ನಾ ಅತ್ಯಂತ ವಿಷಾದಭರಿತ ಸಾಲುಗಳ
ನಾನಾಕೆಯ ಪ್ರೀತಿಸಿದೆ, ಅಂತೆಯೇ ಆಕೆಯೂ ಕೂಡಾ.

ಇಂತದ್ದೇ ಹಲವು ರಾತ್ರಿಗಳುದ್ದಕ್ಕೂ ಅವಳ ಬಾಹುಗಳಲ್ಲಿ ಬಂಧಿಸಿ
ಅನಂತ ಆಗಸದಡಿಯಲ್ಲಿ ಮತ್ತೆ ಮತ್ತೆ ಚುಂಬಿಸಿದ್ದೆ.

ಆಕೆ ಪ್ರೀತಿಸಿದಳು ನನ್ನ ಕೆಲಕಾಲ. ನಾನೂ ಸಹ ಪ್ರೀತಿಸಿದೆ.
ಆ ವಿಶಾಲ, ಸ್ತಬ್ಧ ಕಂಗಳನ್ನ ಯಾರು ತಾನೇ ಪ್ರೀತಿಸದಿರರು

ಈ ರಾತ್ರಿ ಬರೆಯಬಲ್ಲೆ ನಾ ಅತ್ಯಂತ ವಿಷಾದಭರಿತ ಸಾಲುಗಳ
ಅವಳನ್ನೀಗ ಹೊಂದಿಲ್ಲವೆಂದು ಯೋಚಿಸಲು. ಅವಳ ಕಳೆದುಕೊಂಡುದ ಅನುಭವಿಸಲು

ಈ ನೀರವ ರಾತ್ರಿ ಕಳೆಯುವುದು, ಅವಳಿಲ್ಲದೇ ಅದು ಇನ್ನಷ್ಟು ನೀರವ.
ಕವಿತೆ ಮೈ ಆವರಿಸಿಕೊಳ್ಳುತ್ತದೆ. ಹನಿ ನೆಲ ಆವರಿಸಿಕೊಂಡಂತೆ.

ಅದೇನೂ ವಿಷಯವಲ್ಲ. ನನ್ನ ಪ್ರೀತಿ ಅವಳನ್ನುಳಿಸಿಕೊಳ್ಳಲಿಲ್ಲವೆಂಬುದು.
ರಾತ್ರಿ ಕಮರಿಹೋಗಿದೆ, ಅವಳು ನನ್ನ ಜೊತೆಯಿಲ್ಲ.

ಅಷ್ಟೇ. ದೂರದಲ್ಯಾರೋ ಹಾಡುತ್ತಿದ್ದಾರೆ. ದೂ..ರದಲ್ಲಿ.
ಹ್ರದಯಕ್ಕಿನ್ನೂ ನಂಬುಗೆಯಿಲ್ಲ ತಾನವಳ ಕಳೆದುಕೊಂಡಿದ್ದೇನೆಂದು.

ದ್ರಷ್ಟಿಯಿನ್ನೂ ಹುಡುಕುತ್ತಿದೆ ಅವಳಲ್ಲಿಗೆ ಹೋಗೆಬಿಡುತ್ತೇನೆ ಅನ್ನುವಂತೆ
ಹ್ರದಯ ಅರಸುತ್ತದೆ, ಆದರೆ ಅವಳೀಗ ನನ್ನ ಜೊತೆಯಿಲ್ಲ.

ರಾತ್ರಿ ಅದೇ. ಮರಗಳಿಗೆ ಬೆಳಕೆರಚಿ ಬಂದದ್ದು
ಆದರೆ, ಅಂದಿನ ನಾವು, ಇಂದು ನಾವಲ್ಲ.

ನಿಜ, ನಾನೀಗ ಅವಳ ಪ್ರೀತಿಸುವುದಿಲ್ಲ. ಆದರೆ ನಾನೆಷ್ಟು ಪ್ರೇಮಿಸಿದೆ ಅವಳ.
ಧ್ವನಿ ಗಾಳಿಯರಸಿ ಹೊರಟಿತ್ತು, ಆಕೆಯನ್ನು ಹಾಗಾದರೂ ತಲುಪುತ್ತೇನೆನ್ನುವಂತೆ.

ಇನ್ಯಾರವಳೋ. ಆಕೆ ಇನ್ಯಾರವಳೋ ಆಗುತ್ತಾಳೆ. ಅಂದಿನ ನನ್ನ ಮುತ್ತುಗಳಂತೆ.
ಅವಳ ದನಿ. ಅವಳ ಕಾಂತಿಯುಕ್ತ ದೇಹ. ಆ ಅನಂತ ಕಂಗಳು.

ಇನ್ನೆಂದೂ ಪ್ರೀತಿಸಲಾರೆ ಅವಳ, ಅಕ್ಷರಶಃ ನಿಜ, ಆದರೂ ಪ್ರೀತಿಸುತ್ತೀನೇನೋ ಅವಳ.
ಪ್ರೇಮ ಅಲ್ಪಕಾಲಿಕ. ಮರೆಯುವುದು ಮಾತ್ರ ದೀರ್ಘ…

ಯಾಕೆಂದರೆ, ಇಂತಹುದೇ ಹಲವು ರಾತ್ರಿಗಳಲ್ಲಿ ನಾನವಳ ಬಾಹುಗಳಲ್ಲಿ ಬಂಧಿಸಿದ್ದೆ.
ಹ್ರದಯಕ್ಕಿನ್ನೂ ನಂಬುಗೆಯಿಲ್ಲ ತಾನವಳ ಕಳೆದುಕೊಂಡಿದ್ದೇನೆಂದು.

ಅವಳು ನಾನನುಭವಿಸುವಂತೆ ಮಾಡಿದ ಕೊನೆಯ ನೋವು ಇದಾದರೆ
ಇವು ನಾನವಳಿಗೆ ಬರೆವ ಕೊನೆಯ ಸಾಲುಗಳು…

Advertisements
 1. chetana chaitanya
  20/01/2009 ರಲ್ಲಿ 10:19 ಫೂರ್ವಾಹ್ನ

  ಅನುವಾದ ಬಹಳ ಇಷ್ಟವಾಯ್ತು.
  ನಾನೂ ನನ್ನ ಮಟ್ಟಿಗೆ ಇದನ್ನ ಅನುವಾದ ಮಾಡಿಕೊಂಡಿದ್ದೆ. ಅದನ್ನ ಮೇಲ್ ಮಾಡುತ್ತೇನೆ. ಟೀನಾ ಬ್ಲಾಗಿನಲ್ಲೂ ಇದರದ್ದೊಂದು ಅನುವಾದವಿದೆ.
  ಬರೆಯುತಿರು…

  ವಂದೇ,
  ಚೇತನಾ

 1. 20/01/2009 ರಲ್ಲಿ 11:31 ಫೂರ್ವಾಹ್ನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: