ಮುಖ ಪುಟ > ಹೀಗೊಂದು ಮಾತು > ….ಯಾಕಂದ್ರೆ ನನ್ನನ್ನು ನಾನು ಪ್ರೀತಿಸುತ್ತೇನೆ.

….ಯಾಕಂದ್ರೆ ನನ್ನನ್ನು ನಾನು ಪ್ರೀತಿಸುತ್ತೇನೆ.

’Life is like an Ice-Cream. Enjoy before it melts’.  ಬ್ಲ್ಯಾಕ್’ನಲ್ಲಿ ಬರುವ ಮಾತುಗಳು ನಾನು ನಂಬಿದ ಮಾತುಗಳೂ ಹೌದು. ಆದರೆ ಮೊನ್ನಿನಿಂದ್ಯಾಕೋ ನನ್ನ ನಂಬಿಕೆಯ ಮೇಲೇ ನನಗೆ ಅನುಮಾನ. ಹಾರುತ್ತಲೇ ಇರುವ ನಂಬಿಕೆಯ ಇಂಜಿನ್ನಿಗೆ ಢಿಕ್ಕಿಯಾದರೆ ಹಾಗಾಗುತ್ತದಾ? ಢಿಕ್ಕಿ ಹೊಡೆವ ಹಕ್ಕಿಯ ಕತೆ? ಯೋಚಿಸಲೂ ಸಮಾಧಾನವಿಲ್ಲವಾಗಿದೆ. ಜೊತೆಗೆ ಮನಸೂ. ಎಲ್ಲಕ್ಕೂ ಮೊದಲು ಹಾರುತ್ತಿದ್ದ ನಂಬಿಕೆಯ ಗೂಡು ನೆಲಕ್ಕಿಳಿಸಬೇಕು. ಹೆಚ್ಚುತ್ತಿರುವ ಬಿಸಿ ಸ್ಪೋಟಕ್ಕನುವುಮಾಡಿಕೊಡದಂತೆ ತಣ್ಣಗಾಗಿಸಬೇಕು. ನನ್ನ ನಂಬಿಕೆಯೆಂಬುದು ನಿಜವಾದರೆ ಚಕ್ರ ಮತ್ತೆ ತಿರುಗೀತು.

ನನಗೀಗ ಸಂಜೆಯಾಗುವುದೇ ಬೇಡ ಕತ್ತಲಾಗಿಬಿಡಲಿ ಅನ್ನಿಸುತ್ತೆ. ಆದರೆ ಕಾಲುಗಳಿಗೆ ಮಾತ್ರ ಸಂಜೆಯ ಸೂಚನೆ ಸಿಕ್ಕುತ್ತಿದ್ದಂತೇ ಅದೆಲ್ಲಿಂದಲೋ ಆಜ್ನೆ ಸಿಕ್ಕಿಬಿಡುತ್ತದೆ. ಯಾವ ಮಾಯೆಯೋ, ಬಲಗಾಲು ತನ್ನಡಿಗೆ ಸಿಗುವ ಕಿಕ್ಕನ್ನೊದ್ದು, ಎಡಗಾಲು ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ, ಗೇರ್ ಬದಲಿಸುತ್ತಾ. ಹತ್ತೇ ಹತ್ತು ನಿಮಿಷ, ಸಿಗುವ ತಿರುಗಳನ್ನೆಲ್ಲಾ ಸುತ್ತಿಸುತ್ತಿ ದೊಡ್ಡ ಕೆರೆಯ ಮುಂದಿನ ಕಲ್ಲು ಬೆಂಚಿನ ಮುಂದೆ ಬಿಡುತ್ತದೆ ಸದಾ ನಿನ್ನಂತೇ ಗುರುಗುಡುವ ಕಡುಗಪ್ಪು ಗಾಡಿ. ನೀನೇ ತಂದದ್ದು ಅದು. ಅಲ್ಲಿಂದ ಮುಂದೆ ಕಾಲು ಗಾಡಿ ಎರಡೂ ನಿಶ್ಚಲ. ಮನಸು ಮಾತ್ರ ಗೇರು ಬದಲಿಸುತ್ತಾ ಹೊರಡುತ್ತದೆ ಒಂದೊಂದಾಗಿ. ಅದೆಷ್ಟು ದೂರ ಹೋಗಿಬಿಡುತ್ತದೋ ಸಮಯದ ಪರಿವೆಯೇ ಇಲ್ಲದೇ. ಬೆಂಚಿನ ಎಡಭಾಗ ಮಾತ್ರ ಖಾಲಿ ಖಾಲಿ. ಸುಮ್ಮನಿರದ ಕೈ ತಂತಾನೆ ಬೆಂಚು ಸವರಿದರೆ ಮನಸ್ಸಿನ ತುಂಬಾ ಹಾಡು ಆವರಿಸಿಕೊಳ್ಳುತ್ತದೆ.

ಫಿರ್ ವೊಹೀ ಶ್ಯಾಮ್ ವೊಹಿ ಘಮ್ ಹೈ…..

ಲೆಕ್ಕ ಮಾಡಿದರೆ ನಾನು ಈ ಮಹಾನಗರಿಗೆ ಬಂದು ಆಗಲೇ ಐದು ವರುಷ. ಚಂದದ ಊರಿನಲ್ಲಿ ಅಡ್ಡಡ್ಡ ಕೈಬೀಸಿ ನಡೆದು ರೂಢಿಯಿದ್ದ ನನಗೆ ಈ ಜಾತ್ರೆಯಲ್ಲಿ ಕಳೆದುಹೋಗುತ್ತೀನೇನೋ ಅಂತನ್ನಿಸಿದ್ದು ನಿಜ. ಆದರೆ ಹಾಗಾಗಲಿಲ್ಲ. ಕಲಿತ ಅಕ್ಷರ ಕೈ ಬಿಡಲಿಲ್ಲ. ಜೀವನ ಪ್ರೀತಿ ನಿರ್ದಿಷ್ಟ ದಾರಿಯನ್ನೇ ತೋರಿಸಿತ್ತು. ಅದೇ ದಾರಿಯಲ್ಲಿ ನಡುವೆ ಬಂದದ್ದು ನೀನು. ಮಾಯದ ಬಳ್ಳಿಯೆಂದು ತಿಳಿಯದೇ ದಾಟಿಬಿಟ್ಟೆನಾ? ಅನುಮಾನ ಬಂದದ್ದು ನೀನು ಇಲ್ಲವಾದಮೇಲೇ. ಸ್ಪಷ್ಟವಾಗಿ ತಿಳೀದಮೇಲೂ ಯಾಕೆ ಅನುಮಾನವೋ?

ನಾಳೆಗೆ ಮೂರು ವರ್ಷವಾಗುತ್ತಿತ್ತು ನೀನು ಜೊತೆಯಿದ್ದರೆ. ಈಗಲೂ, ನೀನಿಲ್ಲದೆಯೂ ಆಗುತ್ತದೆ. ಜೊತೆಗೆ ಕಲ್ಲು ಬೆಂಚಿರುತ್ತದೆ ನಿನ್ನ ಜಾಗದಲ್ಲಿ. ನಾಳೆಯಾಗುವುದರೊಳಗೊಂದು ಮಾತು, ನನಗೆ ತಿಳಿಯದೇ ನನ್ನಿಂದೇನಾದರೂ ತಪ್ಪಾಗಿದ್ದರೆ, ಈಗಲೇ, ಮಂಡಿಯೂರಿ ಕೇಳುತ್ತೇನೆ. ಕ್ಷಮೆಯಿರಲಿ. ನಾನು ಪರಿಪೂರ್ಣನಲ್ಲ. ಆದರೆ ಪರಿಪೂರ್ಣತೆಯ ಹುಡುಕಿ ಹಿರಟವ. ನೀತಿ, ನಿಯತ್ತು, ನ್ಯಾಯ, ನಡವಳಿಕೆಗಳ ಚೌಕಟ್ಟಿನೊಳಗೆ ತೂರಿಕೊಂಡವ. ಏನಾದರೂ ಒಂದು ಮಾತನಾಡಿದ್ದಲ್ಲಿ ಅದು ನನ್ನೊಳಗಿನ ಆ ಹೊತ್ತಿನ ಮಾತೇ ವಿನಃ ಉದ್ದೇಶಪೂರ್ವಕ ನಡವಳಿಕೆಯಲ್ಲ. ಇರಲಿ, ನಾಳೆಯದಿನ ಮತ್ತೊಂದು ವರ್ಷ ಮುಗಿಯುತ್ತದೆ. ನನ್ನ ಪಾಲಿಗೆ ನಾಡಿದ್ದು ಹೇಗೋ ಏನೋ? ನಿನಗಾಗಲೇ ಹೊಸ ದಿನಗಳು ಪ್ರಾರಂಭವಾಗಿ ಹೊಸ ಕನಸೂ ಬಲಿಯುತ್ತಿರಬೇಕಲ್ಲ? ಕನಿಷ್ಟಪಕ್ಷ ಅಲ್ಲಾದರೂ ಅವುಗಳನ್ನ ನನಸಾಗಿಸು! ಅರ್ಧಕ್ಕೇ ಕೊಲ್ಲುವ ಚಾಳಿ ಮತ್ತೆ ಬೇಡ. ಹರೆಯದ ದಿನದಲ್ಲೇ ಮಾನಸಿಕ ಬಂಜೆತನ ಬರದಿರಲಿ ಮತ್ತೆ. ಅದು ಮೂರು ಅವಸ್ಥೆಗಳನ್ನೂ ಸರಿಯಾಗಿ ದಾಟಿ ನಾಲ್ಕನೇ ಹಂತದಲ್ಲಿ ಬರಬೇಕಾದದ್ದು. 

ಅಂದು, ಐದು ವರ್ಷಗಳ ಹಿಂದೆ ಭೂತಾಕಾರವಾಗಿ ಕಂಡಿದ್ದ ಈ ಜಗತ್ತೀಗ ತುಂಬಾ ಚಿಕ್ಕದೆನಿಸುತ್ತದೆ. ಜೊತೆಗೆ ಸಂಬಂಧಗಳೂ. ಹುಡುಕುವ ಕಷ್ಟವಿಲ್ಲ. ಕಳೆದುಹೋದವರೂ ಮರಳಿ ಕಾಣಿಸುತ್ತಾರೆ ಈ ಹುಚ್ಚು ಸಂತೆಯಲ್ಲಿ.
ತೋರಿಸುತ್ತೇನೆ ಅಂದು ನಿನಗೆ, ಕಳೆದುಹೋಗದೇ ಬದುಕುವುದು ಹೇಗೆಂದು. ನೀನು ಬಿಟ್ಟುಹೋದ ಇನ್ನೂ ವರ್ಷ ತುಂಬದ ಕನಸು ಹೇಗೆ ಬೆಳೆದಿರುತ್ತದೆಂದು.

ಕಹೀ ಕಿಸೀ ರೋಜ್, ಕಿಸೀ ನ ಕಿಸೀ ಮೊಡ್ ಪೆ
ಹಮ್ ಫಿರ್ ಮಿಲೇಂಗೆ ಝರೂರ್!

ಮತ್ತೇನಕ್ಕಲ್ಲ. ನನ್ನ ಕನಸಿಗೊಮ್ಮೆ ಅದರ ಕಳೆದುಹೋದ ನಿನ್ನನ್ನು ತೋರಿಸಬೇಕು. ತಿಳಿದಿರಲಿ, ನನಗಿಷ್ಟವಿಲ್ಲದಿದ್ದರೂ ತೋರಿಸಬೇಕು. ಯಾಕೆಂದರೆ ನನ್ನನ್ನು ನಾನು ಪ್ರೀತಿಸುತ್ತೇನೆ….

Advertisements
 1. Brunda
  23/01/2009 ರಲ್ಲಿ 4:46 ಅಪರಾಹ್ನ

  sabhadagalu thumba vichitra, ondu sari thuma dura idaru hatira iruvante basavagathe,nimma e baraha thubha chennagide.

 2. chetana chaitanya
  24/01/2009 ರಲ್ಲಿ 3:44 ಅಪರಾಹ್ನ

  fine

 3. nagtalwar
  25/01/2009 ರಲ್ಲಿ 12:01 ಫೂರ್ವಾಹ್ನ

  ಬಿಸಿಲ್ಗುದುರೆಯ ಬೆನ್ನು ಹತ್ತಿದ, ಸುಮ್ಮನೇ ಈಡೇರದ ಬಯಕೆಗೆ ಬಸಿರಾದ, ಯಾರಿಂದಲೋ ಅವಮಾನಕ್ಕೊಳಗಾದ, ಹಾಗೂ ತನಗೆ ತಾನೇ ಸಮಧಾನ ಮಾಡಿಕೊಂಡಂತಹ ಮನುಸ್ಸುಗಳಿಗೆಲ್ಲಾ ನಿಜಕ್ಕೂ ತುಂಬಾ ಮುದ ನೀಡುತ್ತದೆ ಈ ನಿಮ್ಮ ಬರಹ…!
  …..ನಾಗು,ತಳವಾರ್.

 4. Ajja
  26/01/2009 ರಲ್ಲಿ 3:39 ಅಪರಾಹ್ನ

  ಮಹೇಶಾ,

  ಸುಂದರವಾದ ಬರಹ. ಆಪ್ತವೆನ್ನಿಸುವಂತೆ, ಸಮಾಧಾನ ನೀಡುವಂತೆ ಬರೆಯುವ ಭಾಷೆಯಿದೆ ನಿನ್ನೊಳಗೆ. ಹೀಗೇ ಬರೀತಿರು….

  ಅಜ್ಜ.

 5. 27/01/2009 ರಲ್ಲಿ 2:47 ಅಪರಾಹ್ನ

  ನಿಮ್ಮ ಗದ್ಯ ಮೊದಲ ಬಾರಿ ಓದ್ತಿರೋದು. ಚೆನ್ನಾಗಿ ಮೂಡಿಬಂದಿದೆ. ಮುದ ನೀಡಿತು.

 6. minchulli
  29/01/2009 ರಲ್ಲಿ 4:26 ಅಪರಾಹ್ನ

  ಹಾಯ್,

  ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

  ಧನ್ಯವಾದಗಳು,

  ಶಮ, ನಂದಿಬೆಟ್ಟ
  http://minchulli.wordpress.com

  ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ

 7. Kallare
  30/01/2009 ರಲ್ಲಿ 2:27 ಅಪರಾಹ್ನ

  ಥ್ಯಾಂಕ್ಸ್ ಬ್ರಂದಾ ಅವ್ರೆ…

  ಚೇತನಾ ಮೇಡಮ್ ಥ್ಯಾಂಕ್ಸ್.

  ನಾಗು ತಳವಾರ್,

  ಈ ಬರಹದ ಹಿಂದೆ ನನ್ನ ಬಂಗಾಳಿ ಗೆಳೆಯನೊಬ್ಬನಿದ್ದಾನೆ. ಆತನ ಯಾತನೆಯಿದೆ. ಆತನ ಗೆಲುವಿದೆ.
  ನಿಮಗೆ ಇಷ್ಟವಾದದ್ದು ಸಂತೋಷ.

  ಸುನೀಲ್ ಅಜ್ಜಾ,

  ನೀವು ಹೇಳಿದ್ಮೇಲೆ ಬರೀಲೇಬೇಕು.

  ರಂಜಿತ್,

  ನಿಮಗಿಷ್ಟವಾದದ್ದು ಸಂತೋಷ.

 8. vishwanath sunkasal
  08/02/2009 ರಲ್ಲಿ 6:18 ಅಪರಾಹ್ನ

  superb
  vishwanath hegde sunkasal

 9. 18/02/2009 ರಲ್ಲಿ 6:48 ಅಪರಾಹ್ನ

  Hey……..most happening feelings for people. It may be a person or our desire,when we lost them, we really feel the exact way you wrote..REALISTIC WRITNING Mahesh

  Liked these lines the most!! “ಮತ್ತೇನಕ್ಕಲ್ಲ. ನನ್ನ ಕನಸಿಗೊಮ್ಮೆ ಅದರ ಕಳೆದುಹೋದ ನಿನ್ನನ್ನು ತೋರಿಸಬೇಕು. ತಿಳಿದಿರಲಿ, ನನಗಿಷ್ಟವಿಲ್ಲದಿದ್ದರೂ ತೋರಿಸಬೇಕು. ಯಾಕೆಂದರೆ ನನ್ನನ್ನು ನಾನು ಪ್ರೀತಿಸುತ್ತೇನೆ….”

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: