ಮುಖ ಪುಟ > ಹಾಗೆ ಸುಮ್ಮನೆ > ಇವು ಸುಮ್ಮನೆ ಕಂಡ ಬಿಂಬಗಳು

ಇವು ಸುಮ್ಮನೆ ಕಂಡ ಬಿಂಬಗಳು

ಕನ್ನಡಿ
ಸೊಕ್ಕಿನ ಚೆಲುವೆಯಾಗಿದೆ 
ನೀನು ಕಾಣಿಸಿದಾಗ.

 

ಕನಸು
ಸಮುದ್ರದ ಅಲೆಯಾಗಿದೆ
ನೀನು ದಡವಾಗಾಗ.

 

ನೀರು
ಅಲುಗದೇ ಸುಮ್ಮನಾಗಿದೆ
ನೀನು ಬಿಂಬವಾದಾಗ

 

ಬೆಳಗು
ಬೆರಗು ಬಣ್ಣವಾಗಿದೆ
ನೀನು ಹನಿಯಾದಾಗ

 

ಕಣ್ಣು
ಬಯಸಿ ಭೂತಗನ್ನಡಿಯಾಗಿದೆ
ನೀನು ಮರೆಯಾದಾಗ.

 

ಮನಸು
ಗರಿಯ ನವಿಲಾಗಿದೆ
ನೀನು ಜೊತೆಯಾದಾಗ.

Advertisements
 1. 30/01/2009 ರಲ್ಲಿ 3:04 ಅಪರಾಹ್ನ

  ಸುಮ್ಮನೆ ಚೆನ್ನಾಗಿದೆ ಕಣ್ರೀ! 😀

 2. nagtalwar
  31/01/2009 ರಲ್ಲಿ 1:26 ಅಪರಾಹ್ನ

  ನೀರು ಅಲುಗದೇ
  ಸುಮ್ಮನಾಗಿದೆ
  ನೀನು ಬಿಂಬವಾದಾಗ,
  ವಾವ್..ಎಂಥಹ ಪರಿಕಲ್ಪನೆ…ನಿಮ್ಮದು.ಮಹೇಶ್ ಜೀ ಚಂದ ಬರೆಯುತ್ತೀರಿ..!
  -ನಾಗು,ತಳವಾರ್.

 3. siddu devaramani
  01/02/2009 ರಲ್ಲಿ 1:02 ಫೂರ್ವಾಹ್ನ

  wharre wha !

 4. Praveen Mutalik
  02/02/2009 ರಲ್ಲಿ 10:08 ಫೂರ್ವಾಹ್ನ

  Mayya Masth ide.

  njoyed….

  Praveen

 5. Kallare
  02/02/2009 ರಲ್ಲಿ 10:19 ಫೂರ್ವಾಹ್ನ

  ಪ್ರದೀಪ್,

  🙂

  ತಳವಾರ್ ಜೀ…

  ನಿಮಗೆ ಇಷ್ಟ ಆಯ್ತು ಅಂತಾದ್ರೆ ಮತ್ತೊಂದಿಷ್ಟು ಪ್ರಯತ್ನ ಮಾಡ್ವ…

  ಸಿದ್ದೂ,

  ನಾನು ವ್ಹಾ.. ಅಂತ ಅನ್ಬೇಕ್ರಿ ನಿಮ್ಮ ಕವನಕ್ಕೆ. ಇದೆಲ್ಲಾ ಯಾವ್ ಲೆಕ್ಕ?
  ಆದ್ರೂ ಖುಷಿ ಆಯ್ತು ನೀವು ಪಾಸ್ ಮಾಡಿದ್ದಕ್ಕೆ…

 6. 02/02/2009 ರಲ್ಲಿ 4:00 ಅಪರಾಹ್ನ

  ಕಣ್ಣು ಭೂತಗನ್ನಡಿಯಾಗುವ ಕಲ್ಪನೆ ಹಿಡಿಸಿತು.

  ನೀವು ಇನ್ನೂ ಚೆನ್ನಾಗಿ ಬರೆಯಬಹುದು ಅನ್ನಿಸಿತು. ಅದಕ್ಕೆ ನಿಮ್ಮ ಕವಿತ್ವದ ಬಗ್ಗೆ ಜಾಸ್ತಿ ಊಹಿಸಿಕೊಂಡಿದ್ದೇ ಕಾರಣವೇನೋ!:)

 7. Kallare
  03/02/2009 ರಲ್ಲಿ 3:43 ಅಪರಾಹ್ನ

  ಕೆಂಪಾ,

  ಅಂತೂ ಬಂದೆ ನೀನು…. ಖುಷಿ ಆತ್ಲೇ…

  ಅಡಿಗರೇ,

  ನಿಮಗೆ ಇಷ್ಟ ಆದದ್ದು ಸಂತೋಷ. ಬರೆಯೋ ಪ್ರಯತ್ನ ಮಾಡ್ತೀನಿ… ನಿಮಗನ್ನಿಸಿದ್ದು ನಿಜವಾ ಅಥವಾ ಸುಳ್ಳಾ ಅನ್ನೋದು ಗೊತ್ತಾಗುತ್ತಲ್ವಾ? ಅಷ್ಟಕ್ಕೊ ಅದೆಂತಾ ಊಹೆ ಮಾಡಿದ್ರಿ ರಂಜಿತ್? ಕವಿಯೇ ಅಲ್ಲದವನ ಬಗ್ಗೆ ಏನು ಅಂತಾ ಊಹೆ ಮಾಡಿದ್ರಿ ನೀವು?

 8. ವೈಶಾಲಿ
  03/02/2009 ರಲ್ಲಿ 5:39 ಅಪರಾಹ್ನ

  ನೀರು
  ಅಲುಗದೇ ಸುಮ್ಮನಾಗಿದೆ
  ನೀನು ಬಿಂಬವಾದಾಗ….

  Subhaan allah!!

 9. 03/02/2009 ರಲ್ಲಿ 6:16 ಅಪರಾಹ್ನ

  ನಿಜ ಮಹೇಶ್. ಬೇರೆಯವರೆಲ್ಲಾ ಮೆಚ್ಚಿಕೊಂಡಿರುವುದರಿಂದ ಅವರೆಲ್ಲಾ ಹೇಳಿದ್ದೇ ನಿಜವಿರಬಹುದು.

  ನೆರೂಡನ ಕವಿತೆಗಳನ್ನೆಲ್ಲಾ ಅನುವಾದಿಸಿರುವುದರಿಂದ ಅಂತ ಊಹೆ ಬಂತಷ್ಟೇ.

 10. 03/02/2009 ರಲ್ಲಿ 7:15 ಅಪರಾಹ್ನ

  ವೈಶಾಲಿ,

  ಊರಿಗೆ ಬರ್ತಾ ಕಾಫಿ ಮಗ್ ತರೋದು ಮರೀಬೇಡಾ….. 🙂

  ಅಡಿಗರೇ,

  ಇನ್ನೂ ಚೆನ್ನಾಗಿ ಬರೀಬಹುದು….. ಅಂದ್ರಲಾ ಅದ್ಕೆ ಹಾಗಂದೆ, ಬರೀತಾ ಬರೀತಾ ಗೊತ್ತಾಗುತ್ತೆ ಅಂತ. ನಿಮ್ಮಂತವರ ಪ್ರೋತ್ಸಾಹ ಇದ್ರೆ, ಬರೆಯೋದಕ್ಕೆ ಸಾಧ್ಯ ಆದ್ರೆ ಬರೆಯೋದು, ಇಲ್ಲಾ ಅಂದ್ರೆ ಆದಷ್ಟು ಓದಿಕೊಂಡು ಸುಮ್ಮನಿರೋದು… ನಿಜಕ್ಕೂ ಈ ಬ್ಲಾಗಿನಲ್ಲಿರೋದು ಬಿಟ್ಟು ಇನ್ನೊಂದಕ್ಷರ ಬರೆದಿಲ್ಲ ರಂಜಿತ್.

  ಮತ್ತೆ ನಾನೆಲ್ಲಿ ನೀವು ಅಂದಿದ್ದು ಸುಳ್ಳು ಅಂದೆ ರಂಜಿತ್?

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: