ಮುಖ ಪುಟ > ಅನುವಾದ > ಬೇಸಿಗೆ ಮಳೆಯಾಗುವ ಮೊದಲು

ಬೇಸಿಗೆ ಮಳೆಯಾಗುವ ಮೊದಲು

ಒಮ್ಮೆಗೇ, ನಿಮ್ಮ ಸುತ್ತಲಿನ ಹಸಿರಿನೊಳಗಿಂದ
ಏನೋ – ನಿಮಗೆ ತಿಳಿಯದು ಏನು ಮಾಯವಾಯಿತೆಂದು;
ನಿಮಗನ್ನಿಸುತ್ತದದು ತೆವಳಿ ಕಿಟಕಿಯ ಹತ್ತಿರ ಬಂದಂತೆ,
ಚೂರೂ ಸದ್ದಿಲ್ಲದೆ, ಹತ್ತಿರದ ಕಾಡಿನಿಂದ.

ಬಂಡೆಗೊರವನ ಅವಸರದ ಸಿಳ್ಳೆ ಕೇಳುತ್ತೀರಿ ನೀವು,
ಸಂತ ಜೆರೋಮನ ವ್ಯಕ್ತಿತ್ವವನ್ನು ನೆನಪಿಸುತ್ತದದು;
ಅದೆಂತಾ ಏಕಾಂತ ಹಾಗೂ ಉತ್ಸಾಹ ಬರುತ್ತದೆ
ಅತ್ಯುತ್ಸಾಹದಿಂದ ಮಳೆಯನ್ನು ಕರೆಯುವ, ಆ ಒಂದು ಧ್ವನಿಯಿಂದ, 

ಇಚ್ಚೆ ಈಡೇರುತ್ತದೆ. ಗೋಡೆಗಳು, ತಮ್ಮ ಪುರಾತನ ಚಿತ್ರಗಳೊಡನೆ, ಜಾರುತ್ತವೆ
ನಮ್ಮಿಂದ ದೂರ ದೂರ, ಸಾವಧಾನವಾಗಿ, ಅವು
ನಾವಂದುಕೊಳ್ಳುವುದೆಲ್ಲಾ ಕೇಳಬಾರದು ಅನ್ನುವಂತೆ. 

ಮತ್ತೆ ಮಸುಕಾದ ಕಸೂತಿಯ ಮೇಲೆ ಪ್ರತಿಫಲಿಸುತ್ತದೆ ಈಗ;
ಮರಗಟ್ಟಿಸುವ ಚಳಿ, ಅನಿಶ್ಚಿತ ಸೂರ್ಯನ ಬೆಳಕು. ನೀವಂದು 
ಚಿಕ್ಕವರಿದ್ದಾಗ ತುಂಬಾ ಹೆದರಿಕೊಂಡಿದ್ದು.

 

(ಅನುವಾದ ನನ್ನ ಹೊಸ ಹುಚ್ಚು… ಅಕ್ಷರವನ್ನೇ ಬರೆಯದಿದ್ದವನು ಕಳೆದ ಕೆಲವು ತಿಂಗಳುಗಳಲ್ಲಿ ಒಂದಷ್ಟು ತೋಚಿದ್ದನ್ನೆಲ್ಲಾ ಗೀಚಿ ಬ್ಲಾಗಿನಲ್ಲಿ ಹಾಕಿಕೊಂಡೆ.. ನಾಲ್ಕಾರು ಪ್ರಯತ್ನಗಳು ಬೇರೆ ಬೇರೆ ಕಡೆ ಪ್ರಕಟ ಆದ್ವು.  ನೀವೊಂದಿಷ್ಟು ಜನ ಮತ್ತೆ ಬರಿ ಅಂದ್ರಿ. ಒಂದಷ್ಟು ಜನ ಹೊಸ ಗೆಳೆಯರು ಸಿಕ್ಕಿದ್ರಿ… ಅಷ್ಟರಲ್ಲಾಗಲೇ ನಾನು ಸುಳ್ಳೇ ಮತ್ತೇನೋ ಮಾಡ್ತೀನಿ ಅಂತ ಒಂದಷ್ಟು ಬೇರೆ ಬೇರೆ ಕವನಗಳ ರಾಶಿ ಹಾಕ್ಕೊಂಡಾಗಿದೆ. ಅದ್ರಲ್ಲೊಂದು ಈ  ‘Rainer Maria Rilke’ ನ ಕವಿತೆ. ಜರ್ಮನ್ ಕವಿಯ ’ Before Summer Rain ’ ಅನ್ನುವ ಕವಿತೆಯನ್ನೊಮ್ಮೆ ಓದಿ. ಇಂಗ್ಲೀಷಿಗೆ ಭಾಷಾಂತರಿಸಿದವರು ’ Stephen Mitchell  ’ ಅನ್ನುವವರು.  ಮತ್ತೆ ನಾನು ಸುಮ್ಮನೆ ನನಗೆ ತೋಚಿದಂತೆ ನಿಮ್ಮ ಮುಂದಿಟ್ಟ ಸಾಲುಗಳನ್ನ ಅಲ್ಲಿಗೇ ಮರೆತು ಮತ್ತೆಲ್ಲಾದರೂ ಇದೇ ಕವಿತೆಯ ಅನುವಾದವಿದ್ದರೆ ಕೊಡಿ.. 🙂 )

ನಿಮ್ಮವ,

ಕಲ್ಲರೆ.

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: