ಮುಖ ಪುಟ > ಹಾಗೆ ಸುಮ್ಮನೆ > ಅವನು ಕಂಡಂತೆ ’ಅವಳು’…

ಅವನು ಕಂಡಂತೆ ’ಅವಳು’…

ಅವಳು
ಈಟಿ ಮೊನೆಯಂತವಳು
ಸ್ಪರ್ಷ ಮಾತ್ರ
ಹೂ ಮೃದು.

ಅವಳು
ಹಸಿದ ಸಿಂಹಿಣಿಯಂತೆ
ಬಿಡದೇ
ಬೇಟೆಯಾಡುತ್ತಾಳೆ.

ಅವಳು
ಜಿಂಕೆ ಓಟದವಳು
ಸಿಕ್ಕಷ್ಟೂ
ತಪ್ಪಿಸಿಕೊಂಡಿರುತ್ತಾಳೆ.

ಅವಳು
ಭಯಂಕರ! ಸುಂದರಿ
ಹಗಲು ಕಾಣದಂತಿದ್ದು
ರಾತ್ರಿ ಕಾಡುತ್ತಾಳೆ

ಇನ್ನೇನು
ಭೂಮಿ ತಂಪಾಗಿದೆ.
ಕಾಮನ ಬಿಲ್ಲಾಗಿ
ಅವಳು ಬಂದಿದ್ದಾಳೆ

ಮಾತಿಗೆ
ಪೂರ್ಣವಿರಾಮ ಬಿದ್ದಿದೆ
ಜೊತೆಯಲ್ಲಿ
ಮೌನದಂಥಾ ಅವಳು

ಬೆಳದಿಂಗಳು
ಬೀಳದಿದ್ದರೂ ಚಿಂತೆಯಿಲ್ಲ
ಪಕ್ಕದಲ್ಲಿ
ಹಾಲಿನಂತಾ ಅವಳಿದ್ದಾಳೆ.

ಅವಳು
ಮಾತಿನ ಒಡತಿ
ಆದರೆ ತುಟಿ-
ಬಿಗಿದಿಟ್ಟು ಕೊಲ್ಲುತ್ತಾಳೆ!

ಸ್ವರ್ಗ
ಇಲ್ಲೇ ಹತ್ತಿರದಲ್ಲಿದೆ
ಇನ್ನೇನು
ಅವಳು ಬರುತ್ತಾಳೆ!

Advertisements
 1. ವೈಶಾಲಿ
  03/02/2009 ರಲ್ಲಿ 5:31 ಅಪರಾಹ್ನ

  No comment! Suuuuuper!!

  http://kenecoffee.wordpress.com/

 2. nagtalwar
  04/02/2009 ರಲ್ಲಿ 8:13 ಫೂರ್ವಾಹ್ನ

  ಎಲ್ಲಾ ಚನ್ನಾಗಿವೆ,ಓದಿ ಖುಶಿಯಾಯ್ತು ಬ್ರದರ್.
  -ನಾಗು,ತಳವಾರ್.

 3. 04/02/2009 ರಲ್ಲಿ 9:58 ಫೂರ್ವಾಹ್ನ

  ಚೆನ್ನಾಗಿದೆ ಗುರುವೇ! ನಿಮ್ಮ ಸ್ವಂತ ಅನುಭವದಂತೆ ತೋರುತ್ತದೆಯಲ್ಲಾ…!!ಹ್ಹಿ.. ಹ್ಹಿ.. 😉 😉

 4. Kallare
  04/02/2009 ರಲ್ಲಿ 10:20 ಫೂರ್ವಾಹ್ನ

  ವೈಶಾಲಿ,

  ಏನೋಪಾ…. ಇರ್ಲಿ, ಕಾಫಿ ಮಗ್ ಮರೆಯಲ್ಲ ತಾನೆ?

 5. Kallare
  04/02/2009 ರಲ್ಲಿ 10:21 ಫೂರ್ವಾಹ್ನ

  ತಳವಾರ್ ಜೀ,

  ನೀವು ಪಾಸ್ ಮಾಡಿದ್ರಿ ಮತ್ತೆ. ಇನ್ನು ಹೊಸಾ ಕ್ಲಾಸಿಗೆ ಹೋಗ್ಬೇಕಲ್ವಾ?
  ಮತ್ತೆ ’ಸಮರ’ ಯಾವತ್ತು ಬರುತ್ತೆ? ಆ ಹೊತ್ನಲ್ಲಿ ನಾನು ನಿಮ್ಮೊರಿಗೆ ಬರಬೇಕು ನೀವು ಹುಲುಲಿ ಹಳ್ಳ ತೋರಿಸ್ಬೇಕು…. ಓಕೆನಾ?

 6. Kallare
  04/02/2009 ರಲ್ಲಿ 10:21 ಫೂರ್ವಾಹ್ನ

  ಪ್ರದೀಪ್,

  ಸ್ವಂತ ಅನುಭವದ ಮುಂದೆ ಇದು ಯಾವ ಲೆಕ್ಕ ಮಾರಾಯ? ಸ್ವಂತ ಅನುಭವ ಪೋಸ್ಟ್ ಮಾಡಿದ್ರೆ ಅವಳು ಬಿಡ್ತಾಳಾ?

 7. chetana chaitanya
  04/02/2009 ರಲ್ಲಿ 1:39 ಅಪರಾಹ್ನ

  ಮಹೇಶ,
  ಈ ‘ಅವನು’ ಕಂಡ ಹಾಗೆ ಯಾಕೆ!?
  ಪರ್ವಾಗಿಲ್ಲ, ನಾವ್ಯಾರೂ ತಪ್ಪು ತಿಳ್ಕೊಳೋಲ್ಲ ಬಿಡು!! 😉
  ಸಖತ್ತಾಗಿವೆ.

 8. Kallare
  04/02/2009 ರಲ್ಲಿ 1:50 ಅಪರಾಹ್ನ

  ಚೇತನಾ ಮೇಡಮ್,

  ಆ ಅವನು ’ನಾನೇ’ ಅಂದ್ಕೊಳ್ಳಿ…. ಹಾಗಂದ್ರೆ ಚೆನ್ನಾಗಿರುತ್ತೆ ಅನ್ಸಿದ್ರಿಂದ ಆ ಹೆಸರು ಅಷ್ಟೆ.
  ಆದ್ರೂ ನೀವು ಪಾಸ್ ಮಾಡಿದ್ದು ಖುಷಿ ಆತು…

 9. ವಿಜಯರಾಜ್ ಕನ್ನಂತ
  04/02/2009 ರಲ್ಲಿ 3:31 ಅಪರಾಹ್ನ

  sooooooooooooper

 10. Bharat
  04/02/2009 ರಲ್ಲಿ 5:57 ಅಪರಾಹ್ನ

  Mahesh,

  2nd & 9th Beautifullllll…..

 11. 04/02/2009 ರಲ್ಲಿ 7:46 ಅಪರಾಹ್ನ

  ಸ್ವರ್ಗ
  ಇಲ್ಲೇ ಹತ್ತಿರದಲ್ಲಿದೆ
  ಇನ್ನೇನು
  ಅವಳು ಬರುತ್ತಾಳೆ!

  adbhuta maheshannnaaa:)

 12. Kallare
  05/02/2009 ರಲ್ಲಿ 8:53 ಫೂರ್ವಾಹ್ನ

  ವಿಜಯರಾಜ್,

  ಥ್ಯಾಂಕ್ಸೂ…

  ಭರತ್,

  ಥ್ಯಾಂಕ್ಸಪ್ಪೋ…..

 13. Kallare
  05/02/2009 ರಲ್ಲಿ 9:02 ಫೂರ್ವಾಹ್ನ

  ತಮ್ಮಾ ಸೋಮಾ,

  ಇದೇ ಮೊದಲು ನೀನು ಬಂದಿದ್ದು ಅಲ್ವಾ?

 14. Brunda
  05/02/2009 ರಲ್ಲಿ 9:11 ಫೂರ್ವಾಹ್ನ

  hani kavana chenagide, idu nimma swantha anubhavana???

 15. 05/02/2009 ರಲ್ಲಿ 10:02 ಫೂರ್ವಾಹ್ನ

  Nice writing. Could have been even better after some more fine touches!

 16. 05/02/2009 ರಲ್ಲಿ 7:16 ಅಪರಾಹ್ನ

  ಹೌದು ಅವನು ಯಾರೆಂದು ತಿಳಿಯಿತು (ಚೇತನಾ ಅವರಿಗೆ ಉತ್ತರಿಸುತ್ತಾ..).. ಅವಳು ಯಾರೆಂದು ಹೇಳಲೇ ಇಲ್ಲ..:) 😛 ತುಂಬಾ ಚೆನ್ನಾಗಿದೆ ಅವನ ಕಣ್ಣಲ್ಲಿ ಅವಳು.

 17. Kallare
  06/02/2009 ರಲ್ಲಿ 11:18 ಫೂರ್ವಾಹ್ನ

  ಬೃಂದಾ ಮೇಡಮ್,

  ಹೌದ್ರಿ….. ಬೇಕಾಗಿಲ್ಲ ಅಂದ್ರೂ ಕೊಟ್ಬಿಟ್ಳು ‘ಅವಳು’… ಒಂಬತ್ತು ಬೇರೆ ಬೇರೆ ಅನುಭವಗಳು 🙂

 18. Kallare
  06/02/2009 ರಲ್ಲಿ 11:19 ಫೂರ್ವಾಹ್ನ

  ನಮಸ್ಕಾರ ಬಾನಿನಂಗಳದವ್ರಿಗೆ,

  ನವಿಲಗರಿಯವ್ರ ಜೊತೆಗೆ ನೀವೂ ಬಂದಾಂಗಾಯ್ತು….
  ಇದು ಸ್ಲಾಗ್ ಓವರ್ ಹಿಟ್ಟಿಂಗು ಸಾರ್… ನೆಕ್ಸ್ಟ್ ಮ್ಯಾಚಲ್ಲಿ ನೋಡಿ ಆಟ ಹೇಗಿರುತ್ತೆ ಅಂತ! ಜೊತೆಗೆ ವಿಕೆಟೂ ಹಾಕ್ವ… ಹೆಂಗೆ?

 19. Kallare
  06/02/2009 ರಲ್ಲಿ 11:24 ಫೂರ್ವಾಹ್ನ

  ತೇಜಸ್ವಿನಿ ಮೇಡಮ್,

  ಥ್ಯಾಂಕ್ಸೂ…. ಅವಳು ಯಾರು ಅಂತ ನಿಮ್ಮ ’ಅವನು’ ಹೇಳಲ್ವಂತೆ…. ಒಂದ್ಸಲ ಸರಿಯಾಗಿ ಹುಡ್ಕಿದ್ರೆ ನಿಮ್ಗೇ ಸಿಕ್ಬಿಡ್ತಾಳೆ ಅಂತ ತಿಳ್ಸಿ ಅಂದಿದಾನೆ…

 20. vishwanath sunkasal
  08/02/2009 ರಲ್ಲಿ 6:27 ಅಪರಾಹ್ನ

  SUPERB FEELINGS
  vishwanath hegde sunkasal

 21. Kallare
  09/02/2009 ರಲ್ಲಿ 9:23 ಫೂರ್ವಾಹ್ನ

  Vishwanath ji,

  Thank u….

 22. Sumana
  18/02/2009 ರಲ್ಲಿ 6:32 ಅಪರಾಹ್ನ

  Mahesh,

  Kannada font ilde idroo..kannadadalle comment kodabekantha heege baritha iddini 🙂

  Preetiya munchina dwandwada chitrana tumba chennagide…heege munduvaresi..DWANDWAvannalla maaraaya :)..kavithegalanna 🙂

 23. 19/02/2009 ರಲ್ಲಿ 2:44 ಅಪರಾಹ್ನ

  ಸಖತ್ !

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: