ಮುಖ ಪುಟ > ಕವನ > ತೋಳಿಲ್ಲದ ಚಳಿ.

ತೋಳಿಲ್ಲದ ಚಳಿ.

ಈ ಚಳಿ ಗೆಲ್ಲಬೇಕಂತೇ ಬಂದಂತಿದೆ.
ಸೋಲಲಾರೆನೆಂದು ಪಣ ತೊಟ್ಟವಳು
ಕೊನೆಗೂ ಸೋತು ಗೆದ್ದಿದ್ದಾಳೆ
ಸಂಕ್ರಾಂತಿಯ ಮಾರನೇ ದಿನ
ಹುಡುಗನ ಬೆಳ್ಳಗಿನ ನಗು ಹರಡಿದೆ.

ತಂಗಾಳಿ ಬೀದಿ ದಾಟಿ ಬರುವಾಗ
ಚಂಚಲೆ ಕದವಿಕ್ಕಿ ಹೊರಟಿದ್ದಾಳೆ
ಬಜಾರಿನಲ್ಲಿ ತೆರೆದ ತೋಳುಗಳು
ಕ್ಷಣಾರ್ಧದಲ್ಲಿ ಬೂದು ಬೂದಾಗಿ ಕಂಡು
ಚಳಿ ಬೆಳಗನ್ನೂ ವಂಚಿಸಿದೆ

ಅಲ್ಲೆಲ್ಲಾ ಬೂಟುಗಾಲಿನಲ್ಲೇ ಹೋಗಬೇಕು
ಕತ್ತಲು ಬೆಳಕಿನ ಹೊಯ್ದಾಟದಲ್ಲಿ
ಜೋಡಿಗಳು ಲಯಬದ್ಧವಾಗಿ ಕುಣಿಯುತ್ತವೆ
ಮೈಚಳಿ ಬಿಟ್ಟು ತೋಳ್ತೋರಿದ್ದಾಳೆ ಹುಡುಗಿ
ಹುಡುಗನ ಬೂಟೊಳಗೆ ಚಳಿ ಬೆವರುತ್ತಿದೆ.

ಗಾಂಧಿ ನಡೆದ ದಾರಿಯಲ್ಲಿ ಚಳಿಯಿಲ್ಲ
ಅಂದಿಗೂ ಇಂದಿಗೂ ಅರೆಬೆತ್ತಲ ನಡಿಗೆ
ಬಡ ನಡುವಿನ ತೆರೆದೆದೆಯ ಹುಡುಗಿಯರೂ
ಕುರಿದಾಡಿಯ ಕಿವಿಚುಚ್ಚಿಸಿಕೊಂಡ ಹುಡುಗರೂ
ನಡು ರಾತ್ರಿಯಲ್ಲಿ ಬೀದಿ ಸುತ್ತಿದ್ದಾರೆ.
ಗಾಂಧಿಯ ಪ್ರತಿಮೆ ಮಾತ್ರ ನಡುಗುತ್ತ ನಿಂತಿದೆ.

ಬಸ್ ನಿಲ್ದಾಣ ಖಾಲಿ ಹೊಡೆಯುವಾಗ
ದಿನವಿಡೀ ಬಿಸಿಯಾಗಿ ಜ್ವರ ಏರಿ
ಬಸ್ ಸ್ಟ್ಯಾಂಡಿನ ಗಡ್ಡದ ಮುದುಕ
ಹೊದ್ದ ಕಂಬಳಿಯೊಳಗೇ ನರಳಿ ನರಳಿ
ಬಿಸಿಲಿಗೆ ಬರ ಕಾಯ್ದಿದ್ದಾನೆ
ಬಸ್ಸು ತನಗೇನೂ ಆಗಿಲ್ಲವೆಂಬಂತೆ ಸುಮ್ಮನಿದೆ

 

 

(08/02/2009 ರಂದು ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದೆ)

Advertisements
 1. 09/02/2009 ರಲ್ಲಿ 9:41 ಫೂರ್ವಾಹ್ನ

  ಬೆಂಗಳೂರಲಿ ಕಂಡುಬರೋ ದೃಶ್ಯಗಳ ಚೆನ್ನಾಗಿ ವರ್ಣಿಸಿದ್ದೀರ…

 2. siddu devaramani
  10/02/2009 ರಲ್ಲಿ 12:52 ಫೂರ್ವಾಹ್ನ

  ಬಸ್ಸು ತನಗೇನು ಆಗಿಲ್ಲ ಎ೦ಬ೦ತೆ ಸುಮ್ಮನಿದೆ ! ವ್ಹಾ .. ಮಹೇಶ್ , ಈ ತರಹ ಬರೆದು ಬಿಸಿಲ ನಾಡಿನ ನಮಗೆ ಚಳಿಯ ಹಿತ ಕೊಟ್ಟು ಕಳಿಸಿದ್ದೀರಿ …ಥ್ಯಾ೦ಕ್ಸ್.

 3. Sunil Bhat
  10/02/2009 ರಲ್ಲಿ 10:46 ಫೂರ್ವಾಹ್ನ

  Good one Mahesh. Keep writing.

 4. 10/02/2009 ರಲ್ಲಿ 3:57 ಅಪರಾಹ್ನ

  ನಿಮ್ಮ ಕವನ ಚೆನ್ನಾಗಿದೆ….ಹೀಗೆ ಬರೆಯುತ್ತಿರಿ…

 5. sahana
  10/02/2009 ರಲ್ಲಿ 8:31 ಅಪರಾಹ್ನ

  A nice poem for the right season .
  Keep writing , that will improve the poetic language also . U cud have used ” sankranthiya maru dina ” instead of ” sankranthiya maaraneya dina ” . Take it easy..its just my opinion.

  I liked lines such as ” chali belagannoo vanchiside ” and ” gandhi nadeda daariyalli chali illa ” and many more.

  Keep posting.

  Best ,
  sahana

 6. pbanagi
  13/02/2009 ರಲ್ಲಿ 11:18 ಫೂರ್ವಾಹ್ನ

  hi maheshanna, saptahika prabhadalle odi khushi gondidde. chennagide….
  praveen banagi

 7. Kallare
  16/02/2009 ರಲ್ಲಿ 5:58 ಅಪರಾಹ್ನ

  ಪ್ರದೀಪ್,

  ಸಣ್ಣದೊಂದು ಪ್ರಯತ್ನ…

  ಸಿದ್ದು,

  ಚಳಿ ಇನ್ನೂ ಕಡಿಮೆ ಆಗ್ಲೇ ಇಲ್ವಲ್ರಿ ಇಲ್ಲಿ 🙂

  ಸುನೀಲ್ ಅಜ್ಜಾ,

  ಥ್ಯಾಂಕ್ಸೂ…

  ಜ್ನಾನಮೂರ್ತಿಯವರೇ,

  ನೀವು ಇದೇ ಮೊದಲು ಬಂದದ್ದು… ಆಗಾಗ ಬರ್ತಾ ಇರಿ…

  ಚಿಕ್ಕಮ್ಮಾ…

  ಸೀಸನ್ನು ಇನ್ನೂ ಮುಗ್ದಿಲ್ಲಾ…. ನೀವೂ ಇದೇ ಮೊದ್ಲು ಬಂದಿದ್ದು. ಆಗಾಗ ಬರ್ತಿರಿ…

  ಪ್ರವೀಣ್,

  ಯಾವತ್ತು ಬರ್ತೀಯಪ್ಪಾ? ಕೆಲ್ಸ ಇದೆ ಗೊತ್ತಲ್ಲಾ….

 8. shreenidhids
  28/02/2009 ರಲ್ಲಿ 3:52 ಅಪರಾಹ್ನ

  tumba chenda bareyutteri!lovely.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: