ಮುಖ ಪುಟ > ಕವನ > ತಂತಿ ದೀಪ

ತಂತಿ ದೀಪ

ಬ್ಲಾಗಿಗೆ ರಜೆ ಕೊಡಲೇ ಬೇಕಂತೆ. ಸಾಕು ಗೀಚಿದ್ದೆಲ್ಲಾ ತಂದು ತುಂಬಿದ್ದು, ಇನ್ನು ನೀನು ಹೇಳಿದಂತೆ ಕೇಳಲ್ಲ ಅಂತ ಸಿಟ್ಟಾಗಿಬಿಟ್ಟಿತ್ತು ನನ್ನ ಬ್ಲಾಗು. ನೀನು ಮಾತ್ರ ಊರೂರು ಸುತ್ತಿದ್ದು ಸಾಲದು ಅಂತ ರಜೆ ಬೇರೆ ತಗೊಂಡು ಊರಿಗೆ ಹೋಗ್ತೀಯಾ, ನನ್ಗೂ ರಜೆ ಬೇಕು ಅಂತ ಹಠ ಹಿಡಿದು ಆಗ್ಲೇ ಪೂರ್ತಿ ಒಂದು ದಿನ ಆಯ್ತು.  ಭರ್ತಿ ಒಂದೂವರೆ ತಿಂಗಳ ರಜೆ ಬೇಕಂತೆ. ತಥಾಸ್ತು ಅಂದಿದೀನಿ. ಖುಷಿಯಾಗಿ ಒಂದೇ ಒಂದು ಪೋಸ್ಟ್ ಮಾಡು ಅಂತ ಒಪ್ಪಿಗೆ ಕೊಟ್ಟು ರಜ ತಗೊಂಡು ಹೋಗ್ತಿದೆ ಕಲ್ಲರೆಮನೆ! ಸಾಧ್ಯ ಆದ್ರೆ ಬೇಗ ಬಂದ್ರೂ ಬಂದೆ ಅಂತ ಭರವಸೆ ಕೂಡಾ ಕೊಟ್ಟಿದೆ… ಅಲ್ಲಿವರೆಗೆ ’ತಂತಿ ದೀಪ’ ಇರುತ್ತೆ ಇಲ್ಲಿ. ಮತ್ತೆ ಪ್ರಕಟಿಸಿದ ದಟ್ಸ್ ಕನ್ನಡಕ್ಕೆ ನಂದೊಂದು ಥ್ಯಾಂಕ್ಸೂ…. 

ತಂತಿ ದೀಪ

 ಹೊಕ್ಕು ಹೊರಬೀಳುತ್ತದೆ ಬೆಳಕೊಂದು
ಕತ್ತಲ ಕೋಣೆಯೊಂದನ್ನು ಮಾತ್ರ ಬಿಟ್ಟು
ಗೋಡೆಗಾತುಕೊಂಡ ಕೆಂಪು ದೀಪದ ಬಲ್ಬು
ತುಂಬು ಚಂದ್ರನಂತಾದರೂ ಸಾಲುತ್ತಿಲ್ಲ ಬೆಳಕು
ತಿರುಗುವ ಮೀಟರು ಮಾತ್ರ ತಲೆಕೆಳಗು

ಗದ್ದೆಯೊಳಗೆ ಬೆತ್ತಲೆ ನಿಂತಿದೆ ಕಂಬ
ಎತ್ತುಗಳೆರಡು ದಣಿದು ನಡೆವಾಗ
ನುಕ್ಕೆ ಗಿಡದ ಕೋಲು ಕುಣಿಯುತ್ತದೆ
ಅಡಗಿ ಅಲ್ಲಾಡದೇ ಕುಳಿತಿದೆ ಹೊನ್ನೆಳ
ರಕ್ತ ಹೀರಲು ಸೂಕ್ತ ಜಾಗ ಹುಡುಕಿ

ರೇಟು ಈಗಲೇ ಮಾಡೋಣ. ಇತ್ತಕೊಡಿ
ಮಧ್ಯಾನ್ಹ ಅಂಗಡಿಗೆ ಬನ್ನಿ ಇವ್ರೇ
ಕೊಡೋದೇನಿದ್ರೂ ಅಲ್ಲೆ ಮುಗಿಸೋಣ
ಸ್ವಾಮಿ, ಮೋಸ ಇಲ್ವೇ ಇಲ್ಲ
ಲಾಕರ್ ಅಂಗಡೀಲಿ ಭದ್ರವಾಗಿದೆ
ಕೀಲಿ ಕೈ ಹೆಂಡ್ತಿಕೈಲಿ ಭದ್ರವಾಗಿದೆ
ಸಂತೆಯ ಬಾಳೆಕಾಯಿ ಕೈ ಬದಲಾಗಿದೆ.

ನಿನ್ನೆ ಹೊಸಾ ಸಿನೆಮಾ ಹತ್ತಿದೆ
ದೊಡ್ಡ ರಸ್ತೆಯ ಬದಿಗೆ ಜನರ ಹಾವಳಿ
ಹೀರೋ ಹೊಡೆದರೆ ವಿಲನ್ನು ರಸ್ತೆಗೆ ಬಿದ್ದಾನು
ಹೊಂಡ ಗಿಂಡ ಬಿಡಿ. ರಸ್ತೆಯೊಳಗೆ
ಹೊಡೆದಾಟ ಶುರುವಾದರೆ ಒಮ್ಮೆಗೇ
ಶೂಟ್ ಅಂತೆಲ್ಲಿ ಮಾಡ್ತೀರಿ. ಇಲ್ಲಾ
ಕಟ್ ಅಂತೀರೋ ಚಪ್ಪಾಳೆ ಹೊಡೆದು
ಕಾಳಜಿಯಿರಲಿ ಸ್ವಲ್ಪ. ಪಕ್ಕದಲ್ಲಿ
ಅಂಗನವಾಡಿ ಕೇಂದ್ರವಿದೆ. ಮಕ್ಕಳಿದ್ದಾರೆ ಎಚ್ಚರಿಕೆ

ತಳೆಯಿಲ್ಲದೆ ಮರ ಹತ್ತುವ ಹುಡುಗ
ಪಕ್ಕಡು ಹಿಡಿದೇ ಕಂಬ ಹತ್ತಿದ್ದಾನೆ
ಸುಟ್ಟು ಕರಕಲಾದ ತಂತಿ ಜೋಡಿಸಲು
ದೂರದಿಂದಲೇ ಸರಿಯಾಗಿ ಸಿಕ್ಕಿಸಿ
ನೆಲಕ್ಕೆ ಹಾರುತ್ತಾನೆ ಸರಸರ ಇಳಿದು
ಉದ್ದುದ್ದ ತಂತಿಗೆ ಬೆಳಕು ಹರಿದಾಗ.

Advertisements
 1. chetana chaitanya
  17/02/2009 ರಲ್ಲಿ 10:24 ಫೂರ್ವಾಹ್ನ

  mahEshaNNa,
  ee blog rajeyalli chennAgi duDidu oLLoLLe kavanagaLa Phasalu tegi. namagU hanchu!
  hAganta pUrA talemaresikonDu biDabhEDa!!

 2. 18/02/2009 ರಲ್ಲಿ 10:42 ಫೂರ್ವಾಹ್ನ

  ಏನ್ ಸಾರ್.. ಬ್ಲಾಗಿಗೊಂದು ತಿಂಗಳು ರಜಾ ಕೊಟ್ಟುಬಿಟ್ರೀ…

 3. Sanjeev
  19/02/2009 ರಲ್ಲಿ 10:40 ಫೂರ್ವಾಹ್ನ

  Belaku ellede hariyuvantaagali…..

 4. Sunil
  19/02/2009 ರಲ್ಲಿ 11:40 ಫೂರ್ವಾಹ್ನ

  Wish you would have used a Solar Photovoltaic Street light picture above to popularise green energy.

  Also look forward to write a blog and an article on Green energy

 5. minchulli
  20/02/2009 ರಲ್ಲಿ 3:33 ಅಪರಾಹ್ನ

  ಹೀಗೆ ತಿಂಗಳುಗಟ್ಟಲೆ ಮರೆಯಾಗಿ ಹೋಗೋದು ಶ್ರೀ ಅನ್ಸುತ್ತಾ ? ನನಗೇನೋ ಇದು ಒಳ್ಳೆ ಐಡಿಯಾ ಥರಾ ಕಾಣಿಸಲಿಲ್ಲ. ನೀವೆಲ್ಲ ಹೀಗೆ ಹೋದರೆ ನಾವು ಓದೋದೆನನ್ನು ?

 6. 20/02/2009 ರಲ್ಲಿ 5:15 ಅಪರಾಹ್ನ

  ರಜೆಯಿಂದ ಬರೋದು ಯಾವಾಗ? ತುಂಬಾ ದಿನ ರಜೆ ಮಾಡಿದ್ರೆ ನಾವು ಟೂಊಊಊಊಊ….

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: