ಮುಖ ಪುಟ > ಹಾಗೆ ಸುಮ್ಮನೆ > ಮೀಸೆ ಪುರಾಣ.

ಮೀಸೆ ಪುರಾಣ.

 ಈ ಮೀಸೆ ದಾಡಿ ಕಷ್ಟ ಗೊತ್ತಲ್ಲ ನಿಮ್ಗೆ. ಪದೇ ಪದೇ ಮಾಡ್ಬೇಕು. ಬೇಕಿದ್ರೂ, ಬೇಕಿಲ್ಲದಿದ್ರೂ. ಮನೇಲಿ ಮಾಡೋರ್ದು ಒಂದು ರೀತಿ ಆದ್ರೆ ಬಿಲ್ಲೂ ಹತ್ರ ಹೋಗೋರು,  ಅವ್ರದ್ದು ಇನ್ನೊಂಥರದ ಕಷ್ಟ. ಮೊನ್ನೆ ಮೊನ್ನೆ ಬ್ಲೇಡು ಹಿಡಿದು ಕನ್ನಡಿ ಮುಂದೆ ನಿಂತ್ರೆ ಗಂಡು ಪ್ರಾಣಿಗಳೆಲ್ಲರ ಕಷ್ಟ ನನ್ನ ಮುಂದೆ ನಿಂತಂತಾಗಿ ಕೈಲಿದ್ದ ರೇಜರ್ ಕುಣಿದು ಮೀಸೆ ಒಂದ್ಕಡೆ ಅರ್ಧ ಆಗೋಯ್ತು. ’ಫು ಮುಂಚು’ ಸ್ಟೈಲ್ ಮಾಡ್ಬೇಕು ಅಂತ ಹೊರಟಿದ್ದೆ, ಅದ್ನೋಡಿದ್ರೆ ಮೀಸೆ ಇಲ್ದೆ ಇರೋ ಹಾಗಾಗಿ ಹೈಸ್ಕೂಲ್ ದಿನದ ನೆನಪು ಬಂತು.

 ಆಗಿನ್ನೂ ಹದಿನೈದರ ಹುಮ್ಮಸ್ಸು. ಗುಂಪಿಗೆ ಸೇರದ ನಾಲ್ಕಾರು ಹುಡುಗರನ್ನು ಬಿಟ್ಟರೆ ಎಲ್ಲಾ ಸೇರಿ ಹತ್ತು ಜನರ ಗುಂಪು ಅದು. ಪ್ರತಿಯೊಬ್ಬರಿಗೂ ಚಿಗುರು ಮೀಸೆ ಮೂಡುವ ಹೊತ್ತು. ಓಂದಿಬ್ಬರಿಗೆ ಆಗಲೇ ಬೆಳೆದದ್ದು, ಮತ್ತಿಬ್ಬರಿಗೆ ಬರಲೇ ಇಲ್ಲವೆಂದು ಚಿಂತೆಯಾದದ್ದೂ ಆಗಿ ಅಂತೂ ಮೀಸೆ ಚರ್ಚೆಯ ವಿಷಯವಾಗಿತ್ತು. ಒಂದಿಷ್ಟು ಸಮಸ್ಯೆಗೆ ಕಾರಣವೂ ಆಗಿತ್ತು.  ಒಮ್ಮೊಮ್ಮೆ ಸಂಜೆ ಐದಕ್ಕೆ ಶುರುವಾಗುವ ಮೀಸೆಯ ವಿಷಯ ನಕ್ಕಾಗ ಮೇಲ್ತುಟಿಯ ಕೆಳಗೆ ಹಲ್ಲು ಮಾತ್ರ ಕಾಣುವಷ್ಟು ಕಪ್ಪಾದರೂ ಮುಗಿಯುತ್ತಿರಲಿಲ್ಲ.

ಸೆವೆನ್ ಓ’ಕ್ಲಾಕ್ ಬ್ಲೇಡಿನಲ್ಲೇ ಮೀಸೆ ತೆಗೀಬೇಕು ಅಂದ್ರೆ ಮಾತ್ರ ಮೀಸೆ ಚೆನ್ನಾಗಿ ಬೆಳೆಯುತ್ತೆ ಅಂತ ಒಬ್ಬನೆಂದರೆ, ಮೀಸೆ ಬೆಳೆಯುವುದಕ್ಕೂ ಬ್ಲೇಡಿಗೂ ಏನು ಸಂಬಂಧ ಅಂತ ಇನ್ನೊಬ್ಬ ವಾದ ಮಾಡುತ್ತಿದ್ದ. ಹಾಗೆ ಹದಿನೈದರ ಹುಡುಗರು ಮೀಸೆ ಹಿಂದೆ ಬಿದ್ದಿದ್ವಿ..

ಹದಿನೈದಿಪ್ಪತ್ತು ಹುಡುಗರೂ ಅಷ್ಟೇ ಹುಡುಗಿಯರೂ ಇದ್ದ ಕ್ಲಾಸಿನಲ್ಲಿ ಇದ್ದ ಒಬ್ಬೇ ಒಬ್ಬ ಧಡಿಯನಿಗೆ ಆಗಲೇ ಮೀಸೆ ಬಂದು ಎರಡು ವರ್ಷ ಪೂರ್ತಿಯಾಗಿತ್ತು. ಆದರೆ ಆತ ಮೀಸೆ ತಿರುವಿ ದಾಡಿ ನೀವಿ ಬರುವ ಬದಲು ಕಳ್ಳ ಕಳ್ಳರಂತೆ ಬರುತ್ತಿದ್ದ. ಇತರರಿಗಿಲ್ಲದ ಮೀಸೆ ತನಗೆ ಆಗಲೆ ಬಂದದ್ದು ಆತನ ಕಷ್ಟಕ್ಕೆ ಕಾರಣವಾಗಿತ್ತು. ಆತನ ಪಕ್ಕಕ್ಕೇ ಕೂರುವ ಕುಳ್ಳ ನೀನು ಪದೇ ಪದೇ ಶೇವ್ ಮಾಡಿದ್ರೆ ಇನ್ನೊ ಬೆಳೆಯುತ್ತೆ ನೋಡು, ದಾಡಿ ಬಿಟ್ಟ ಮುಲ್ಲಾ ತರ ಆಗ್ತೀಯ ಅಂತ ಆತನನ್ನು ಮತ್ತಷ್ಟು ಚಿಂತೆಗೆ ಹಾಕಿದ್ದ. ಇನ್ನೊಬ್ಬನನ್ನು ನೋಡಿದ್ರೆ ಇನ್ನೂ ಮೀಸೆ ಸರಿಯಾಗಿ ಬರ್ಲೇ ಇಲ್ವಲ್ಲ ಅಂತ ಚಿಂತೆ ಮಾಡ್ಕೊಂಡಿದ್ದು ಮೂತಿ ನೋಡಿದ್ರೇ ತಿಳೀತಿತ್ತು. ಯಾರೋ ಅಂದಿದ್ರು ಅಂತ ಉಲ್ಟಾ ಶೇವ್ ಮಾಡಿದ್ನಂತೆ. ಮುಖ ಒಳ್ಳೇ ಮೊಡವೆಯೂ ಸೇರಿಕೊಂಡು ರಿಪೇರಿ ಮಾಡಿದ ಟಾರು ರಸ್ತೆಯಂತಾಗಿತ್ತು. ಇನ್ನೊಬ್ಬ ತನಗಿನ್ನೂ ಮೀಸೆಯೇ ಬಂದಿಲ್ಲವೆಂದು ಚಿಂತೆಗೆ ಬಿದ್ದಿದ್ದ. ಆತನನ್ನು ಸಮಾಧಾನಪಡಿಸುತ್ತಾ ಚಿಗುರು ಮೀಸೆಯ ಚಡ್ಡಿ ದೋಸ್ತು ಮೊದಲ ಬೆಂಚಿನ ಹುಡುಗಿಯನ್ನ ತೋರಿಸಿ ಒಬ್ಬೊಬ್ಬರಿಗೆ ಹಾಗೇ ಅಂತ ಕಣ್ಣು ಹೊಡೆದಿದ್ದ. ಆದರೆ ಆತನ ಗಮನ ಮಾತ್ರ ಅಲ್ಲಲ್ಲಿ ಬೆಳೆಯುತ್ತಿದ್ದ ದಾಡಿಯನ್ನು ಒಟ್ಟಿಗೆ ಸೇರಿಸುವುದರಲ್ಲಿತ್ತು. ಹಾಗೆ ನಡೆದಿತ್ತು ಪುಂಡ ಹುಡುಗರ ಮೀಸೆ ಸುದ್ದಿ.

 ಅವರೆಲ್ಲರ ನಡುವೆ ನಿಜಕ್ಕೂ ಕಷ್ಟಪಟ್ಟವನು ಪೋಲೀಸ್ ಇನಸ್ಪೆಕ್ಟರ್ ಮಗ. ಸಭ್ಯ ಹುಡುಗ ಆತ. ನಿಮ್ಮಪ್ಪನ ಮೀಸೆ ನೊಡಿದ್ರೆ ಒಳ್ಳೇ ಹಿಡಿಕಟ್ಟು ಇದ್ದಾಂಗಿದೆ ನಿಂಗ್ಯಾಕೋ ಇನ್ನೂ ಜಿರಲೆ ಮೀಸೆನೂ ಬಂದಿಲ್ಲ ಅಂತ ಆತ ಕಾಡಿಸ್ಕೋತಿದ್ದ. ಅಳುತ್ತಿದ್ದ. ಹುಡುಗರ ಕಾಟ ತಾಳಲಾರದೆ ಒಮ್ಮೆ ಅಪ್ಪನನ್ನೂ ಕರೆಸಿದ್ದ. ಅಂಕಲ್ ನಿಮ್ಗೆ ಸರ್ಕಾರ ಮೀಸೆ ಬೆಳೆಸೋಕೆ ಕಾಸು ಕೊಡುತ್ತಂತೆ ಅಲ್ವಾ ಅಂತ ಆ ಪೋಲಿಸಪ್ಪನನ್ನೇ ಕೇಳಿ ಒಂದಿಡೀ ದಿನ ಬಿಸಿಲಲ್ಲಿ ನಿಂತವನು ಹುಟ್ಟಿದ ಮೀಸೆಯೂ ಕಾಣದಂತಿದ್ದ ಪಕ್ಕಾ ಚಾಲೂ ಹುಡುಗ. ಬಂದಿರದ ದಾಡಿ ಕೆರಕೊಂಡು ಬಂದವನು ಮೂತಿ ಪೂರಾ ಉರಿ ಅಂತ ಹೊಯ್ಕೊತಿದ್ದ  ಮತ್ತೆ.

ಹಾಗೆ ಮೀಸೆ ಎದುರಿಗಿಟ್ಟುಕೊಂಡು ಮಾತನಾಡುವ ಹುಡುಗರ ಬುದ್ಧಿ ಒಮ್ಮೊಮ್ಮೆ ಹೆಚ್ಚಿಗೆ ಕೆಲ್ಸ ಮಾಡಿದಾಗ ಮಾತು ತಮ್ಮ ಜೊತೆ ಓದುವ ಹುಡುಗಿಯರತ್ತ ಹೊರಳಿ….ಬಿಡಿ. ಆ ಸುದ್ದಿ ಅತ್ಲಾಗಿರ್ಲಿ.

ಹುಡುಕಿ ಹೊರಟರೆ ಮೀಸೆ ಪುರಾಣ ಕ್ರಿಸ್ತ ಪೂರ್ವ ೩೦೦ ರರಷ್ಟು ಹಿಂದೆ ಹೊರಟು ಕುದುರೆಯ ಮೇಲೆ ಕುಳಿತ ಇರಾನಿ ಮನುಷ್ಯನತ್ತ ಹೊರಳುತ್ತದೆ. ಆತ ದಾಖಲೆಯಲ್ಲಿ ಸಿಗುವ ದಾಡಿ ಮಾಡಿ ಮೀಸೆಯನ್ನು ಬಿಟ್ಟ ಮೊದಲಿಗ. ನಂತರದ ದಿನದಲ್ಲಿ ಮೀಸೆ ಹುದ್ದೆಯ ಸಂಕೇತವಾಗಿ, ವ್ಯಕ್ತಿ ಬೆಳೆದಂತೆ ಮೀಸೆಯೂ ಬೆಳೆಯುತ್ತಿತ್ತು. ಹುದ್ದೆಗೆ ತಕ್ಕಂತೆ. ಹೇಗಿತ್ತು ಕಾಲ ಅಂದ್ರೆ ಉನ್ನತ ಹುದ್ದೆಯವ ಮೀಸೆ ಜೊತೆ ದಾಡಿಯನ್ನೂ ಬೆಳೆಸುತ್ತಿದ್ದ.

ಅಲ್ಲಿಂದ ಹೊರಟ ಮೀಸೆ ಪುರಾಣ ಇವತ್ತಿಗೆ ಹಲವು ನಮೂನೆಗಳಿಗೆ ಕಾರಣವಾಗಿ, ವಿಶ್ವ ದಾಡಿ ಮತ್ತು ಮೀಸೆ ಸ್ಪರ್ಧೆಗೆ ಬಂದು ತಲುಪಿದ್ದೂ ಆಗಿ, ೨೦೦೭ರ ಸ್ಪರ್ಧೆಯಲ್ಲಿ ಆರು ನಮೂನೆಯ ಮೀಸೆಯ ವಿಧಗಳನ್ನೂ ಮಾಡಿದ್ದಾಗಿದೆ. ಜೊತೆಗೆ ಇನ್ನಷ್ಟು ನಮೂನೆಯ ಮೀಸೆಗಳೂ ಇವೆ. ಮೀಸೆ ಇರೋರು, ಇಲ್ದಿರೋರು ಎಲ ತಿಳ್ಕೊಳ್ಳಿ ಅಂತ ಒಂದಷ್ಟು ಚಿತ್ರ ಹಾಗು ಮೀಸೆ ವಿಧ ಇಲ್ಲಿದೆ. ನೋಡಿ:

 pi

 

 

 

 

 

 

 

 

 

 

 

 

 

 

 

 

 

 

 

 

 

 

 

bdw you may get the details of moustache @ http://en.wikipedia.org/wiki/Moustache.

Advertisements
  1. ವಿಜಯರಾಜ್ ಕನ್ನಂತ
    06/03/2009 ರಲ್ಲಿ 4:47 ಅಪರಾಹ್ನ

    meese puraaNadalli veerappan du ondu phoTo irbekittu… 🙂

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: