ಮುಖ ಪುಟ > ಹಾಗೆ ಸುಮ್ಮನೆ > ಕನ್ನಡಕದ ಹಿಂದೆ..

ಕನ್ನಡಕದ ಹಿಂದೆ..

ಕಪ್ಪು ಫ್ರೇಮಿನಂತಾ ರೆಪ್ಪೆಯ ಕೆಳಗೆ
ಆಸೆಯ ಕಡುಗಪ್ಪು ಕಣ್ಣು ಹೊರಳಿದಾಗ
ಹಾರುವ ಕೂದಲಿನ ಹರೆಯಕ್ಕೆ
ಐದು ಜೊತೆ ಕೈಬೆರಳ ಸ್ಪರ್ಷದ ಹಂಬಲ

                 ***

ಕೆನ್ನೆಗೆ ಕುರುಚಲು ಕಾಡಾಗುವ ತವಕ.
ಬ್ಲೇಡಿಗಾಗಲೇ ಕೆಲಸ ಮುಗಿಸಲು ಅಪ್ಪಣೆ ಸಿಕ್ಕು
ವಯ್ಯಾರಿಯ ಯೌವನ ಮರುಕಳಿಸಿ ನಕ್ಕಂತಾಗಿ
ಅಖಾಡಕ್ಕೆ ಇಳಿಯುವ ಎಲ್ಲಾ ಸೂಚನೆಯೂ ಇದೆ.

                 ***

ಪಕ್ಕದ ಮನೇಲಿ ಯಾವತ್ತೂ ಜಗಳ
ಬೆಂಕಿ ಹತ್ತುವಾಗಲೇ ಕರೆಂಟೂ ಹೊರಟು
ಗಂಡ ಪ್ರಾಣಿ ಮೂರು ದಿನ ನಾಪತ್ತೆ.
ಹೆಂಡತಿ ವಿರಹದುರಿಯಲ್ಲೇ ಅಡುಗೆ ಬೇಯಿಸುತ್ತಾಳೆ!
ಸಮಾಧಾನದ ಭೂತ ಬೆನ್ನು ಸವರಿ ಸಂತೈಸುತ್ತದೆ.

                 ***

ಸಂಜೆ ಹಾಲಿನ ಪಾತ್ರೆ ಉಕ್ಕಿ ಬಂದಿದೆ.
ಬಿಲದೊಳಗಿನ ಇಲಿ ಚಕ್ಕನೆ ಹೊರಬಿದ್ದು
ಬಾಗಿಲ ನಾಯಿ ಗುರುಗುಟ್ಟಿ ಸುಮ್ಮನಾಗುವಷ್ಟರಲ್ಲಿ
ಅಟ್ಟದ ಬೆಕ್ಕು ಮರಿಬಿಟ್ಟು ಕಾಲು ಸುತ್ತಿದೆ.
ಮೊನ್ನೆಯಷ್ಟೇ ಹುಟ್ಟಿದ ಕರು ಉರುಳು ಸಿಕ್ಕು ಸತ್ತಿದೆ.

                 ***

ಇತ್ತೀಚಿಗೆ ತಲೆನೋವು ಖಾಯಂ ಅತಿಥಿ
ಡಾಕ್ಟರು ಕನ್ನಡಕ ಬದಲಿಸಲು ಹೇಳುತ್ತಾರೆ.
ಈ ಡಾಕ್ಟರುಗಳೇ ಹಾಗಾ? ಅಂದುಕೊಂಡವನು
ಹೆಂಡತಿಯನ್ನೇ ಬದಲಿಸಲು ಯೋಚಿಸಿದ್ದಾನೆ
ಪಕ್ಕದ ಮನೆಯ ಸುಂದರಿ ಕಿಸಕ್ಕನೆ ನಕ್ಕಿದ್ದಾಳೆ

  1. 06/03/2009 ರಲ್ಲಿ 3:18 ಅಪರಾಹ್ನ

    ಏನ್ ಗುರೂ! ಬ್ಲಾಗಿಗೆ ರಜೆ ಅಂಥ್ಹೇಳಿ ಕವನ ಪ್ರವಾಹಾನೇ ಹರಿಸ್ಬಿಟ್ಟಿದ್ದೀ…
    ಇನ್ನೂ ಹರಿಸಪ್ಪೋ……

  2. Brunda
    12/03/2009 ರಲ್ಲಿ 12:07 ಅಪರಾಹ್ನ

    swlapa dinada raje nathra,kavana chennagide bandide, blog ina rajeya besara, nimma kavana oddida mele hoguthe.

  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ