ಮುಖ ಪುಟ > ಹಾಗೆ ಸುಮ್ಮನೆ > ಜಾದೂಗಾರ ಕಿನ್ನರಿ…

ಜಾದೂಗಾರ ಕಿನ್ನರಿ…

ನೀನೆಂದರೆ ಹರಿದು ದುಮ್ಮಿಕ್ಕುವ ಜಲಪಾತ
ಬಿಡದೇ ಬರುವ ನೆನಪುಗಳ ಅಲೆ.
ತಿಳಿಯದಂತೇ ಸೆಳೆದು ಎದೆಗಪ್ಪಳಿಸುವ
ಅದ್ಭುತ ಚುಂಬಕ ಶಕ್ತಿ.

ನೀನೆಂದರೆ ಹಿಂಬಾಲಿಸುವ ಮೋಹಕ ನೆರಳು
ಜೋತು ಜೋಕಾಲಿಯಾಡುವ ಕಟ್ಟೆಯ ಸೆಳೆವು
ಹಾರಿ ಬಂದು ಹೆಗಲನ್ನೇರುವ
ನೆನಪ ರೆಕ್ಕೆಯ ಹಕ್ಕಿ.

ನೀನೆಂದರೆ ಸುಮ್ಮನೇ ಕೇಳುವ ಹಾಡು
ಆಲಿಸುವ ಮರದ ಹಲವು ಹಕ್ಕಿಗಳ ನಾದ
ಮಾತಿಗೂ ಮೊದಲೇ ಮರುಳಾಗಿಸುವ
ಅನನ್ಯ ನಗುವಿನ ನಾಟ್ಯ.
ಬಿಡು
ನೀನೆಂದರೆ ಬರೀ ನೀನಲ್ಲ;
ನನ್ನೊಳಗೆ ಟಿಸಿಲೊಡೆದ ಬಯಕೆಗಳ ಗೂಡು
ಗರಿಗೆದರಿದ ಕನಸುಗಳ ರೂಪ
ತಿಳಿಯದಂತೇ ಮೋಸದಿಂದ ಬಂಧಿಸಿ ಹೊರಟ
ಮಾಯಾ ಲೋಕದ ದಾಟು ಬಳ್ಳಿ

ಗೊತ್ತಲ್ಲ, ನೀನೇ ಅಂದಂತೆ
ನೀನು ಹನಿ ಮಳೆಯ ಕುಣಿವ ನವಿಲು
ನೀಲೀ ಆಕಾಶ ತುಂಬುವ ಬಣ್ಣದ ಬಿಲ್ಲು
ಆಡಿಸೆಂದು ಕೇಳುವ ಕಾಡ ಕರಡಿ.

ತಿಳಿದಿರಲಿ
ನಾನೇನು ಸುಮ್ಮನೆ ನಾನಲ್ಲ;
ನಿನಗಾಗಿ ಮಾಯಾಲೋಕವನ್ನೇ ಸೃಷ್ಟಿಸ ಹೊರಟ
ಪ್ರಚಂಡ ಜಾದೂಗಾರ…

Advertisements
 1. 06/03/2009 ರಲ್ಲಿ 2:41 ಅಪರಾಹ್ನ

  ಹ್ಹೆ.. ಹ್ಹೆ… ಹ್ಹೆ…
  “ಆಡಿಸೆಂದು ಕೇಳುವ ಕಾಡ ಕರಡಿ..”
  ಚೆನ್ನಾಗಿದೆ….. 🙂

 2. ವಿಜಯರಾಜ್ ಕನ್ನಂತ
  06/03/2009 ರಲ್ಲಿ 4:51 ಅಪರಾಹ್ನ

  vaah re vaah… super aagide adarallo… konege neenu ishtella irabahudu… naanenoo kadme naa anno dhaaTi idyalla… aa saalugaLu super

 3. 06/03/2009 ರಲ್ಲಿ 8:13 ಅಪರಾಹ್ನ

  ಹ..ಹ.. ನೀವು ಒಬ್ಬ ಪ್ರಚ೦ಡ ಜಾದುಗಾರ ನೇ ಸರಿ.

 4. 07/03/2009 ರಲ್ಲಿ 3:58 ಅಪರಾಹ್ನ

  ಸೂಪರ್‍ ಸರ್..:)

  ನಿಮ್ಮ ಬ್ಲಾಗಿನಲ್ಲಿ ನನಗೆ ಹಿಡಿಸಿದ ಕವನಗಳಲ್ಲಿ ಮೊದಲ ಸ್ಥಾನ..:)

 5. 09/03/2009 ರಲ್ಲಿ 3:40 ಅಪರಾಹ್ನ

  ಪ್ರದೀಪಾ,

  ಕರಡಿ ಸಿಕ್ಕಿತ್ತು ನಿನ್ನೆ…. 🙂

 6. 09/03/2009 ರಲ್ಲಿ 3:41 ಅಪರಾಹ್ನ

  ವಿಜಯ್,

  ಮತ್ತೆ ಹುಡ್ರು ಕಡಿಮೆ ಏನಿಲ್ಲ ಬಿಡಿ….

 7. 09/03/2009 ರಲ್ಲಿ 3:42 ಅಪರಾಹ್ನ

  ಸಿದ್ದು,

  ನಿಮ್ಮ ಹಾಗೆ ಜಾದು ಮಾಡೋಕೆಲ್ಲಾಗುತ್ತೆ ಸಾಮಿ???

  ರಂಜಿತ್,

  ’ಪಂಚ್’ ಅಲಾ??

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: