ಮುಖ ಪುಟ > ಕವನ > ಆದರಾಗಲಿ ಬಿಡು ಕತ್ತಲು ಮತ್ತೆ….

ಆದರಾಗಲಿ ಬಿಡು ಕತ್ತಲು ಮತ್ತೆ….

ಬೆಳಗು ಬದುಕು ಕಟ್ಟುತ್ತದಂತೆ
ಎದುರಾಗುವ ರಾತ್ರಿಗೆ ಕನಸು ನೀಡುತ್ತದಂತೆ

ಮೊನ್ನಿನ ರಾತ್ರಿ ತುಂಬೆಲ್ಲಾ
ಮಂದ ಬೆಳಕಿನ ಹೊಯ್ದಾಟದಲ್ಲಿ
ಗಿಲಿಗುಡುವ ನೀಲಿ ಬಳೆಗಳ ಚಕ್ಕಂದ
ಸೂರ್ಯನೂ ಅರೆಘಳಿಗೆ ತಡಮಾಡಿ ಬಂದಿದ್ದ..

ನಿನ್ನೆಗಾಗಲೇ ಸದ್ದಿಲ್ಲದೆ ಬಿದ್ದ
ಕೆಂಪು ಹಾಸಿಗೆಯ ಮೇಲೆ ಚೂರು ಬಳೆ
ಗೆದ್ದ ಹುರುಪಿನಲ್ಲಿ ಕೋಳ ಹಿಡಿದ ನೀನು 
ಜಾವಕ್ಕೂ ಮೊದಲೇ ಬೆಳಗಾಗಿ ಬಿಟ್ಟಿತ್ತು..

ಪದೇ ಪದೇ ಬಂದು ಕೆಣಕುತ್ತವೆ
ಒಮ್ಮೆ ಜೀವ ಹಿಡಿದು ಸಂತೈಸಿದರೆ
ಮತ್ತೊಮ್ಮೆ ಜೀವ ಹಿಂಡಿ ಹಿಪ್ಪೆಮಾಡಿ
ಮರಳಿ ವಾಸ್ತವಕ್ಕೆಸೆದು ಹೋಗುತ್ತವೆ.

ಹಾಗೇ ಸಲಹುತ್ತಿರುವೆ ಕನಸುಗಳ
ವಾಸ್ತವದ ಬೆಳಕುಗಳ ನೆರಳಿನೊಳಗೆ
ಬೆಳಗು ಕೈಹಿಡಿದು ನಡೆಸಿದರೆ
ನೆನಪುಗಳು ಹಿಂಬಾಲಿಸಿ ಬರುತ್ತಿವೆ

ಆದರಾಗಲಿ ಬಿಡು ಕತ್ತಲು ಮತ್ತೆ
ಮುಚ್ಚುವ ರೆಪ್ಪೆಗಳ ಜೊತೆಗಾದೀತು
ಕನಸುಗಳು ಬಾಗಿಲಲ್ಲೇ ಸ್ವಾಗತಿಸಿ
ತನ್ನ ತೆಕ್ಕೆಗೆಳೆದುಕೊಂಡು ನಡೆದೀತು

ನೆನಪಿನಂಗಳದ ತುಂಬಾ ಹನಿ ಸುರಿದು
ಹಗಲಿನ ಹಂಬಲಕ್ಕೆ ಸಾಕ್ಷಿಯಾದೀತು. 

(ಈ ವಾರದ ’ತರಂಗ’ದಲ್ಲಿ ಪ್ರಕಟವಾದ ಕವನ. )

Advertisements
 1. 12/03/2009 ರಲ್ಲಿ 10:52 ಫೂರ್ವಾಹ್ನ

  ಇದನ್ನು ಹೋದ ಡಿಸೆಂಬರ್ನಲ್ಲಿಯೇ ಬ್ಲಾಗ್ನಲ್ಲಿ ಹಾಕಿದ್ಯಲ್ಲಾ….

 2. Brunda
  12/03/2009 ರಲ್ಲಿ 11:47 ಫೂರ್ವಾಹ್ನ

  5 ne salu chenaagide

 3. ವಿಜಯರಾಜ್ ಕನ್ನಂತ
  13/03/2009 ರಲ್ಲಿ 11:26 ಫೂರ್ವಾಹ್ನ

  chennagide…
  ಬೆಳಗು ಕೈಹಿಡಿದು ನಡೆಸಿದರೆ
  ನೆನಪುಗಳು ಹಿಂಬಾಲಿಸಿ ಬರುತ್ತಿವೆ… hmm sogasaagive nivu padagalannu hekki hekki bhaavanegaLa aksharadallE paDimooDisuva pari

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: