ಮುಖ ಪುಟ > ಕಲ್ಲರೆ ಮನೆ > ‘Kallareಮನೆ’ಯಲ್ಲಿ ಚಿಕ್ಕದೊಂದು ಸಂಭ್ರಮ….

‘Kallareಮನೆ’ಯಲ್ಲಿ ಚಿಕ್ಕದೊಂದು ಸಂಭ್ರಮ….

ಐವತ್ತು! ನಂಬರು ಇಷ್ಟು ಭಾರವಿದೆ ಅಂತ ನಿಜಕ್ಕೂ ಗೊತ್ತಿರ್ಲಿಲ್ಲ. ಆರು ತಿಂಗಳಿನ ಹಿಂದೆ ಇನ್ನು ಬ್ಲಾಗಿಗೆ ಚಾಲನೆ ಕೊಡಬೇಕು ಅಂದುಕೊಂಡು ಹೊರಟಾಗ, ಯಾವ ಯೋಚನೆಯೂ ಇರಲಿಲ್ಲ. ಹತ್ತಿಸಿಕೊಂಡ ಹೊಸ ಗೀಳು ಗೀಚಿಸಿದ! ಅಕ್ಷರಗಳನ್ನು ಪೋಸ್ಟ್ ಮಾಡುವುದರ ಹೊರತಾಗಿ. ಚಕ್ರ ಕಟ್ಟಿಕೊಂಡ ಗಾಡಿ ತಿಂಗಳಿನ ಹಿಂದೆ ಒಮ್ಮೆ ನಿಂತರೂ ಮೆಲ್ಲಗೆ  ಐವತ್ತರ ಮೈಲಿಗಲ್ಲು ದಾಟಿದೆ. ಮನೆಯಲ್ಲೊಂದು ಸಣ್ಣ ಸಂಭ್ರಮ. ಇದು ಅತಿಥಿಯಾಗಿ ಬಂದವರು, ಗೆಳೆಯರಾದವರು, (ಯಾಕೋ ಬ್ಲಾಗ್ಗೆಳೆಯರು ಅನ್ನುವ ಮನಸ್ಸಿಲ್ಲ) ಬೆನ್ನು ತಟ್ಟಿದವರು, ಹಾಗಲ್ಲ ಹೀಗೆ ಅಂದವರು, ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವ ಸಂಭ್ರಮ.

ಐವತ್ತರಲ್ಲಿ ನಲವತ್ತೈದು ಕವನಗಳು. ಎರಡು ಚಿತ್ರ ವಿಮರ್ಷೆ. ಮೂರು ಸುಮ್ಮನೆ ಬರೆದ ಅಕ್ಷರಗಳು.ಜೊತೆಗೆ ನಿಮ್ಮ ಪ್ರೀತಿ. ನಿಮಗೊಂದು ಮಾತು ತಿಳಿಸುವುದಕ್ಕೆ ಅಷ್ಟು ಸಾಕಲ್ಲವಾ? ಈಗಲೇ ಹೇಳಬೇಕೆಂದರೆ ಇನ್ನೂ ಹತ್ತು ಹನ್ನೆರಡು ಕವನಗಳು ಜೋಳಿಗೆಯಲ್ಲಿವೆ. ನಿಮ್ಮ ಮುಂದೆ ಬರಬೇಕು ಅಷ್ಟೆ. ಜೊತೆಗೆ ಬ್ಲಾಗು ಒಂದಷ್ಟು ಬೇಡಿಕೆಗಳನ್ನೂ ಇಟ್ಟಿದೆ. ಅನುಮತಿ ಸಿಗಬೇಕಷ್ಟೆ. ಬ್ಲಾಗಿಗೆ ಒಪ್ಪಿಗೆ ಸಿಕ್ಕಲ್ಲಿ ನಿಮಗೆ ತಿಳಿಸುತ್ತೇನೆ.

ಬರೀತಾ ಹೋದರೆ ಹೆಸರಿನದೇ ಒಂದು ಪಟ್ಟಿಯಾದೀತು.. ಇವತ್ತಿಗೆ ಅಷ್ಟು ಪರಿಚಯವಾಗಿದೆ. ಪರಿಚಯ ಗೆಳೆತನವಾಗಿದೆ. ಎಲ್ಲಾ ಬ್ಲಾಗಿನಿಂದ. ಹಾಗೆ ಸಿಕ್ಕಿದ (ದಕ್ಕಿದ?) ಗೆಳೆಯರ ’ಬರೀ’ ಎಂಬ ಮಾತು ಇಷ್ಟು ಬರೆಸಿದೆ. ಮನೆಯಲ್ಲಿ ಐವತ್ತರ ಸಂಭ್ರಮಕ್ಕೆ ಕಾರಣವಾಗಿದೆ. ಬ್ಲಾಗು ಗಟ್ಟಿಯಾಗುವ ಭರವಸೆ ಬಂದಿದೆ. ನಿಮಗೆ ಋಣಿ. ಆರು ತಿಂಗಳಿನ ಹಿಂದೆ ಒಂದಕ್ಷರವನ್ನೂ ಬರೆಯದಿದ್ದ, ಬರೆದರೂ ಕಾಗದವನ್ನು ಹರಿದು ಎಷ್ಟು ಚೂರು ಮಾಡಬಹುದೋ ಅಷ್ಟು ಮಾಡಿಯೇ ಸುಮ್ಮನಾಗುತ್ತಿದ್ದ, ಹತ್ತರಲ್ಲಿ ಒಂದಾಗುತ್ತದಾ ಅಂತ ಸಣ್ಣ ಅನುಮಾನದ ಎಳೆಯನ್ನು ಇಟ್ಟುಕೊಂಡೇ ಪೋಸ್ಟ್ ಮಾಡುತ್ತಿದ್ದವನಿಗೆ, ಹಾಗೇನಿಲ್ಲ ಅಂತ ಧೈರ್ಯ ಬರಲು ಕಾರಣ ’ಈವರೆಗಿನ ಕಲ್ಲರೆಮನೆ’!!

ಬ್ಲಾಗಿನಿಂದ ಆರಂಭವಾದ ಅಕ್ಷರ ಪ್ರೀತಿ ಅಲ್ಲಿಗೇ ನಿಲ್ಲದೆ ಉಳಿದ ಮಾಧ್ಯಮಕ್ಕೆ ವಿಸ್ತರಿಸಿದ್ದು ಐವತ್ತಾಯಿತು ಅಂತ ಹೇಳಿಕೊಳ್ಳಲು ಮತ್ತೊಂದು ಕಾರಣ. ಮನೆಹೊಕ್ಕಿದ ನಲವತ್ತೊಂಬತ್ತು ’ಪೋಸ್ಟ್’ಗಳಲ್ಲಿ ಹದಿನಾಲ್ಕು ಪ್ರಕಟಿಸಲ್ಪಟ್ಟವು. ದೈನಿಕಗಳ, ವಾರಪತ್ರಿಕೆಯ, ಈ-ಪತ್ರಿಕೆಗಳ ಸಂಪಾದಕರ ಪ್ರಕಟಿಸುವ ನಿರ್ಧಾರ ಬರೆಯುವುದಕ್ಕೆ ಸಿಕ್ಕ ಅನುಮತಿಯಂತಿತ್ತು. ಪ್ರತಿಯೊಬ್ಬರಿಗೂ ನನ್ನ ’ವಂದನೆ’ಗಳು ಸಲ್ಲುತ್ತವೆ. ಹಾಗೇ, ಇನ್ನಷ್ಟು ಸಂಪಾದಕರು ನಿರ್ಧರಿಸುವುದು ಬಾಕಿಯಿದೆ. ಇನ್ನಾರು ತಿಂಗಳಲ್ಲಿ ಆ ಕೆಲಸವೂ ಆದೀತು. (ಹಾಗೆ ಹೇಳುವಷ್ಟು ಧೈರ್ಯ ಬಂದಿದ್ದು ಈ ಬ್ಲಾಗಿನಿಂದ. ನಿಮ್ಮಿಂದ)

ಒಂದು ಮಾತು ಹೇಳಲೇ ಬೇಕು. ಚಿಕ್ಕದೊಂದು ಕೊರಗು ಉಳಿದುಕೊಂಡಿದೆ. ಎಲ್ಲಾ ಬ್ಲಾಗುಗಳನ್ನು ಓದಲಾಗಿಲ್ಲ ಅಂತ. ಓದಿದರೂ ಸಲ್ಲಬೇಕಾದಲ್ಲಿ ನನ್ನಿಂದ ಓಂದು ಪ್ರತಿಕ್ರಿಯೆ ಬರೆದವರಿಗೆ ತಲುಪಿಲ್ಲ ಅಂತ. ಇನ್ನಾರು ತಿಂಗಳಲ್ಲಿ ಬ್ಲಾಗು ಓದುವುದಕ್ಕೆ ಇನ್ನಷ್ಟು ಸಮಯ ಮೀಸಲಿಡಬೇಕು, ಪ್ರತಿಕ್ರಿಯಿಸುವುದಕ್ಕೆ ಮತ್ತಷ್ಟು. ಹಾಗಂದುಕೊಂಡಿದ್ದೇನೆ. ಬ್ಲಾಗುಗಳಿಂದ ಚಂದದ ಬರಹಗಳು ಬರುತ್ತಿರಲಿ. ಬರೆಯುವುದಕ್ಕಿಂತ ಓದುವದೇ ಹೆಚ್ಚು ಖುಶಿ ನೀಡುತ್ತೆ.

ನೀವು ಬರುತ್ತಿರಿ. ಬ್ಲಾಗಿಗೂ, ಮನೆಗೂ. ಒಂದು ಮಾತು ತಿಳಿಸಿ. ಮನೆಗೆ ಬಂದರೆ ಕುಡಿಯುವಂತಾ ಒಂದು ಚಾ, ಮಲ್ಲೇಶ್ವರದ ಯಾವುದಾದರೂ ಒಂದು ಹೋಟೆಲಿನಲ್ಲಿ ಊಟ ಪಕ್ಕಾ. ಬ್ಲಾಗಿಗಷ್ಟೆ ಬರ್ತೀರಂದ್ರೆ ಈವರೆಗೆ ಏನು ಕೊಟ್ಟಿದ್ನೋ ಅದಕ್ಕಿಂತ ಹೆಚ್ಚಿನದು ಸಿಗುತ್ತೆ ಅನ್ನುವ ಭರವಸೆ ಇದೆ. 

ವಂದನೆಗಳೊಂದಿಗೆ…

Advertisements
 1. Sunil
  13/03/2009 ರಲ್ಲಿ 9:20 ಅಪರಾಹ್ನ

  Congragulations on achieving 50. Look forward for you to announce a century. Keep writing Mahesh. All the very best in your endevours. Haage Summane !

 2. 14/03/2009 ರಲ್ಲಿ 12:42 ಫೂರ್ವಾಹ್ನ

  ಮಹೇಶ್…
  ನಿಮ್ಮ ಬರಹಗಳನ್ನು ಈ ಮೊದಲು ಓದಿದ್ದೇನೆ. ಆದರೆ ಇವತ್ತು ಪ್ರತಿಕ್ರಿಯಿಸ್ತಿದ್ದೇನೆ. ಬ್ಲಾಗಿನ ಐವತ್ತನೇ ಬರಹಕ್ಕೆ ಅಭಿನಂದನೆ.
  ಮತ್ತು ಚೆಂದ ಚೆಂದದ ಬರಹಗಳಿಗೆ ಧನ್ಯವಾದ.

 3. 14/03/2009 ರಲ್ಲಿ 10:22 ಫೂರ್ವಾಹ್ನ

  ಕಲ್ಲರೆ ಮಹೇಶ…

  ಅಭಿನಂದನೆಗಳು..

  ನಿಮ್ಮ ಬರವಣಿಗೆ ಹೀಗೆಯೇ ಸಾಗಲಿ..

 4. 14/03/2009 ರಲ್ಲಿ 1:48 ಅಪರಾಹ್ನ

  ೫೦ ಭಾರವೇನಲ್ಲ ಸರ್…೫೦ ಯಾವ ಮೂಲೆಗೂ ಸಾಲಲ್ಲ…ಓದುವುದರಲ್ಲಿ ನಮ್ಮದು ಬಕಾಸುರ ವಂಶ. ಅದರ ವಿಷಯದಲ್ಲಿ ಮನಸ್ಸು ಅಕ್ಷಯ(ರ) ಪಾತ್ರೆ!

  ಆದರೂ ಖುಷಿಯಾಯ್ತು ೫೦ ತುಂಬಿದ್ದಕ್ಕೆ.

  ನಿಮ್ಮ ಕವಿತೆಗಳು ಓದಲು ಮುದ. ಮುಂದಿನ ಶತಕಾರ್ಧದಲ್ಲಿ ಬೇರೆ ಬೇರೆ ವಿಧದ ಬರವಣಿಗೆಗಳೂ ಹರಿದು ಬರಲಿ.

  ನಿಮಗೆ ಮನತುಂಬಿ ಮಾಡುವ ಕಂಗ್ರಾಟ್ಸ್..:)

 5. 14/03/2009 ರಲ್ಲಿ 3:52 ಅಪರಾಹ್ನ

  ಮಹೇಶ್,
  ನಿಮ್ಮ ಬ್ಲಾಗಿನ ಐವತ್ತನೇಯ ಪೋಸ್ಟಿಗಾಗಿ
  ಹಾಗು ಪತ್ರಿಕೆಗಳಲ್ಲಿ ಪ್ರಕಟಗೊಂಡ ೧೪ ಬ್ಲಾಗ್ ಬರಹಗಳಿಗಾಗಿ ಶುಭಾಷಯಗಳು.
  ನಿಮ್ಮ ಮನೆಯ ಸಂಭ್ರಮ ನಿರಂತರವಾಗಿರಲಿ

 6. 14/03/2009 ರಲ್ಲಿ 4:10 ಅಪರಾಹ್ನ

  ಮಹೇಶ್ ಸರ್,
  ಶತಕಾರ್ಧದ ಸಂಭ್ರಮದಲ್ಲಿರೋ ನಿಮಗೆ ಅನಂತಾನಂತ ಅಭಿನಂದನೆಗಳು…
  ಬೇಗ ಶತಕ… ಸಹಸ್ರಗಳತ್ತ ದಾಪುಗಾಲಿಡಿ ಎಂಬುದೇ ನಮ್ಮ ಆಶಯ.

 7. Tina
  14/03/2009 ರಲ್ಲಿ 11:38 ಅಪರಾಹ್ನ

  ಮಹೇಶ,
  ಕಂಗ್ರಾಟ್ಸಪಾ!!
  ಹಿಂಗೆನೇ ತುಂತುಂಬಾ ಬರೀತಾ ಹೋಗಿ.

 8. Brunda
  16/03/2009 ರಲ್ಲಿ 11:20 ಫೂರ್ವಾಹ್ನ

  Congrats, nanagu nimma blog karanadida kannada kavana oduva havyasa hutikodide. tnx.

  once again congrats,

 9. 16/03/2009 ರಲ್ಲಿ 1:53 ಅಪರಾಹ್ನ

  ಮಹೇಶರಿಗೆ
  ಅಭಿನಂದನೆಗಳು…ಹೀಗೇ ಮುಂದುವರಿಯುತ್ತಿರಲಿ ನಮ್ಮೊಳಗಿನ ಹಣತೆಗೆ ಎರಡೆರಡು ಹನಿ ಸುರಿಯುವ ಕೆಲಸ.
  ಪ್ರೀತಿಯೊಂದಿಗೆ
  ನಾವಡ

 10. 16/03/2009 ರಲ್ಲಿ 4:46 ಅಪರಾಹ್ನ

  Sunil saar..

  Thank you. ide speedalli hodre innu aaru tinglallli century!! Neevu bartaa iri..

 11. 16/03/2009 ರಲ್ಲಿ 5:40 ಅಪರಾಹ್ನ

  ಶಾಂತಲಾ,

  ನಿಮ್ಗೆ ಮೆಚ್ಚುಗೆಯಾದದ್ದು ಸಂತೋಷ. ಆಗಾಗ ಬರ್ತಾ ಇರಿ. ಒಂದು ಮಾತು ತಿಳ್ಸಿ.

 12. 16/03/2009 ರಲ್ಲಿ 5:41 ಅಪರಾಹ್ನ

  ಜ್ನಾನಮೂರ್ತಿ,

  ಪ್ರಯತ್ನ ಮುಂದುವರೆಯುತ್ತೆ… ನೀವು ಬರ್ತಾ ಇರಿ.

 13. 16/03/2009 ರಲ್ಲಿ 5:42 ಅಪರಾಹ್ನ

  ರಂಜಿತ್,

  ನಿಜ.. ಓದುವ ವಿಷಯದಲ್ಲಿ ನಮ್ಮದು ಬಕಾಸುರ ವಂಶವೇ. ಬರೆಯುವುದರಲ್ಲೂ ಆಗುತ್ತಾ ನೋಡ್ವ. ನೀವೆಲ್ಲ ಚೆಂದದ ಬರಹ ಕೊಡ್ತಾ ಇರಿ. ಬರೆಯುವುದಕ್ಕೆ ಇನ್ನೂ ಆಸಕ್ತಿ ಬರುತ್ತೆ. ಖಂಡಿತವಾಗಿಯೂ ಹೊಸ ಪ್ರಯತ್ನ ಮಾಡ್ಬೇಕು ಸಾರ್…

 14. 16/03/2009 ರಲ್ಲಿ 5:43 ಅಪರಾಹ್ನ

  ನೀಲಾಂಜಲದ ಸೌಪರ್ಣಿಕಾ,

  ನೀವೆಲ್ಲಾ ಬರ್ತಾ ಇದ್ರೆ ಮಾತ್ರ ಸಂಭ್ರಮ…

 15. 16/03/2009 ರಲ್ಲಿ 5:45 ಅಪರಾಹ್ನ

  ರಾಜೇಶ್,

  ಶತಕ ಪಕ್ಕ ಮಾಡ್ವ… ಇಲ್ಲಿ ಆಗ್ದಿದ್ರೆ ಗ್ರೌಂಡಲ್ಲಿ. ಅದಂತೂ ಆಗುತ್ತೆ 🙂

 16. 16/03/2009 ರಲ್ಲಿ 5:46 ಅಪರಾಹ್ನ

  ಟೀನಾ ಮೇಡಂ,

  ನೀವು ಐವತ್ತು ಪೋಸ್ಟ್ ಮಾಡಿದ್ರೆ ಊಟಕ್ಕೆ ಕರೀತೀನಿ ಅಂದಿದ್ರಿ? ಕೊನೇಪಕ್ಷ ೬೦ ಆಗೋದ್ರೊಳಗಾದ್ರೂ ಊಟ ಹಾಕಿ…

 17. 16/03/2009 ರಲ್ಲಿ 5:47 ಅಪರಾಹ್ನ

  ಬ್ರಂದಾ,

  ಹಾಗಂತೀರಾ? ನೀವು ಒಂದು ಬರೆದು ನೋಡಿ….

 18. 16/03/2009 ರಲ್ಲಿ 5:57 ಅಪರಾಹ್ನ

  ನಾವಡರೇ,

  ಅಕ್ಷರ ಬರೆಸಿದವರಲ್ಲಿ ನೀವೂ ಒಬ್ಬರು. ಪ್ರಯತ್ನ ಮುಂದುವರೆಯುತ್ತೆ. ನಿಮ್ಮ ಆಶೀರ್ವಾದ ಇರಲಿ ಸರ್.

 19. minchulli
  21/03/2009 ರಲ್ಲಿ 4:42 ಅಪರಾಹ್ನ

  congrats mahesh .. gud luck too

 20. 14/04/2009 ರಲ್ಲಿ 2:50 ಅಪರಾಹ್ನ

  Kallaremane – idanna kelidre namma ooru nenpagatte.:) Namma ooralli ondu kallare gadde. All the best nimma blog ge. Heege centuries hodili nimma blog.

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: