ಮುಖ ಪುಟ > ಕವನ > ಹೆದ್ದಾರಿ ನಂ. ಹದಿನೇಳು…

ಹೆದ್ದಾರಿ ನಂ. ಹದಿನೇಳು…

ಹೆದ್ದಾರಿ ಹದಿನೇಳರ ನುಣುಪು
ಹಳೇ ಸುದ್ದಿಯಷ್ಟೆ ಬಿಡಿ.
ಹೊಸ ಸುದ್ದಿ ಬರೀ ಪೇಪರಿನಲಿ:
ಕರಾವಳಿಯಲ್ಲಿ ದಿನಕ್ಕೆ ಮೂರು ಅಪಘಾತ
ಕೊಳಪೆಯಾದ ರಸ್ತೆ. ಕಳಪೆ ಸರ್ಕಾರ.

ಬಳ್ಳಾರಿಯ ತುದಿಯ ಮಣ್ಣಿಂದ ಹೊರಟು
ಧಣಿಯ ಹೊಟ್ಟೆ ತುಂಬಿಸುವ
ಯಮಗಾತ್ರದ ಲಾರಿ ಯಾವುದಕ್ಕೂ ಕ್ಯಾರೇ ಅನ್ನದೆ
ನಡು-ನಡುವೆ ಕಿಸೆ ತುಂಬಿಸಿ ನಕ್ಕು
ಕುಂಡೆ ನೆಗೆದು ಧೂಳು ಹಾರಿಸಿ ಪಾಸಾಗಿದೆ.
ಹೆಂಡಕುಡಿದಂತಾ ಕಾಲಿಬಸ್ಸು ವಾಲುತ್ತಾ
ಪಾಸುದಾರರನ್ನು ಹತ್ತಿಸಿಕೊಂಡೂ
ಟೆಂಪೋದವರು ಪಾಕೀಟಿನಲ್ಲಿ ಚಿಲ್ಲರೆ ತುರುಕಿದಂತೆ
ಜನರನ್ನು ತುಂಬಿ ಸೊಂಟ ಮುರಿದು ರೈಟ್ ಅನ್ನುವಾಗ
ಸಮುದ್ರತೀರದ ಸುಂದರಿಗೆ ನರಕಯಾತನೆ.
ಆದರೂ ಸಾವರಿಸಿಕೊಂಡು ಬಿದ್ದಲ್ಲೇ
ಬಿದ್ದ ಮಳೆಗೆ ಶುಚಿಯಾಗಿ
ಅಲ್ಲಲ್ಲಿ ತುಂಬಿದ ಕೊಳವಾಗಿ
ಬಿಸಿಲಿಗೆ ಬೆವರಾಗಿ, ಉಪ್ಪುಪ್ಪಾಗಿ
ಸಮುದ್ರಕ್ಕೆ ಮುಖಮಾಡಿ ಊಳಿಟ್ಟಿದೆ.

ಬೆಳಗು ಬೆವರಾಗಿ ಮೈಯಪ್ಪುವಾಗ
ಪುಗ್ಗೆ ಹಾರನ್ನಿನ ಸೈಕಲ್ಲಿನ ಹಿಂದೆ
ಡಬ್ಬಿಯ ಐಸ್ ತುಂಡು ಕರಗಿ ತಂಪಾಗಿ
ಮುಚ್ಚಳದ ಬಾಯಿಂದ ಹೊರಟಿದೆ;
ಐಸ್ಕ್ರೆರೀ.. ಐಸ್ಕ್ರೇಟ್.. ಕೂಗು. ಆರೆಂಜು, ಬಾದಾಮಿ
ಹಾಲೈಸ್ಕ್ರೀಮು ಬೇಕಾದ್ದು ಸಿಗುತ್ತೆ
ಪಕ್ಕದ ಸರ್ಕಲ್ ಅಂಗಡಿಯ
ಗೋಟಿ ಸೋಡಾ ಒಡೆವ ಸದ್ದು ಪುಕ್ಕಟೆ.
ದಣಿವಾರಿಸಿಕೊಳ್ಳಲು ಹೊಳೆ ನೀರಿನ ಬಾಟಲು.

ಸ್ಟೀಲ್ ಪಾತ್ರೆ, ಕಬ್ಬಿಣದಂಗಡಿ, ಮೆಡಿಕಲ್ ಶಾಪು
ಬಾಯ್ತೆರೆದು ಬಂದವನ ನುಂಗುವ ಆಸ್ಪತ್ರೆಗಳು
ನಿತ್ಯ ಸುಂದರಿಯ ಒನಪು-ವಯ್ಯಾರ
ದಾರಿ ಬದಿ ಗೇರು ಮರದ ಫೆನ್ನಿ
ಲಾಡ್ಜಿನಂತಾ ಬಸ್ಸು: ಬಸ್ಸಿನಂತಾ ಲಾಡ್ಜು
ರಸ್ತೆಯಪಕ್ಕ ಅಲ್ಪವಿರಾಮದ ಕಾವ್ಯ.

ಮಾರಿಗೊಂದು ಊರು, ಊರಿಗೊಂದು ಹೊಳೆ
ಬ್ರಿಜ್ಜು ಬಾರ್ಜು ಬಂಗಡೆ ಮಾರ್ಕೆಟ್ಟು
ಎಳೆನೀರು, ಕೆಮ್ಮುಡೆ, ಇಬ್ಬುಳ್ಳೆ
ಎಳೇ ಸೌತೆ ಬೆಂಡೆ ಮಾರುತ್ತವೆ.
ರಾತ್ರಿ ಯಕ್ಷಲೋಕ ತೆರೆದುಕೊಳ್ಳುತ್ತದೆ.
ತಲೆಯಿಂದ ಬಾಲದವರೆಗೂ ಒಂದೇ ನಮೂನೆ.

ಎಡಕ್ಕೂ ಬಲಕ್ಕೂ ಪ್ರತಿಯೊಂದಕ್ಕೂ
ಕೈ ಮುಗಿದಷ್ಟೂ ಪುಣ್ಯ ಸಿಗುವ ಸ್ಥಳವಿದೆ.
ಕಿಂಡಿಯಿದೆ ಗಿಂಡಿಯಿದೆ..
ಕಥೆಯಿದೆ, ವ್ಯಥೆಯಿದೆ. ಜೀವನ ಪ್ರೀತಿಯಿದೆ.
ಪಕ್ಕದಲ್ಲೇ ಕಾಡಿದೆ, ಕೋಡಿಯಿದೆ
ಮುಗಿಯದ ತೆರೆಯ ಅಬ್ಬರವಿದೆ.

ಆದರೂ ಆಗಾಗ ರಸ್ತೆಯೆಬ್ಬಿಸುವ ನನಗೆ
ಈ ಹೆದ್ದಾರಿ ನಂ. ಹದಿನೇಳು
ಉತ್ತರವಾಗುವುದಿಲ್ಲ ಪ್ರಶ್ನೆಯೂ ಆಗುವುದಿಲ್ಲ
ಬದಲಿಗೆ ಎಡಬಲದ ಚೋದ್ಯ, ನಡುವಿನ ಮುಗಿಯದ ರಸ್ತೆ
ತೀರಲಾರದ ದಾಹ..

Advertisements
 1. 20/03/2009 ರಲ್ಲಿ 10:41 ಫೂರ್ವಾಹ್ನ

  ಚೆನ್ನಾಗಿದೆ ಸಾರ್… ಆದ್ರೂ, ಹೆದ್ದಾರಿ ನಂ. ೧೭ ಪರವಾಗಿಲ್ಲ. ಹೆದ್ದಾರಿ ನಂ. ೪೮ ಯಾವಾಗ ಕೋಮಾದಿಂದ ಹೊರಬರುತ್ತೋ….

 2. Sushrutha
  20/03/2009 ರಲ್ಲಿ 11:28 ಫೂರ್ವಾಹ್ನ

  Gud one.

 3. Nagu.Talwar
  21/03/2009 ರಲ್ಲಿ 8:22 ಫೂರ್ವಾಹ್ನ

  ಮಹೇಶ್, ಹೆದ್ದಾರಿಯ ಮಧ್ಯ ನಿಂತ ನಿಲುವಲ್ಲೇ ಹೊಳೆದಿದ್ದಾ….? ಈ..ಪದ್ಯ.! ಅದ್ಭುತವಾಗಿದೆರೀ.
  -ನಾಗು,ತಳವಾರ್

 4. 21/03/2009 ರಲ್ಲಿ 10:13 ಫೂರ್ವಾಹ್ನ

  ನಮ್ಮೂರ ನೆನಪಾಗಿಸಿ ನಾಸ್ಟಾಲ್ಜಿಕ್ ಆಗಿಸಿತು ಕವಿತೆ..

 5. Tina
  21/03/2009 ರಲ್ಲಿ 1:55 ಅಪರಾಹ್ನ

  ಮಹೇಶ,
  ಅಪರೂಪಕ್ಕೆ ಒಂದು ಒಳ್ಳೇ ಮೆಚ್ಯೂರ್ ಕವಿತೆ. ಓದಿ ಓದಿ ಸಂತೋಷಪಟ್ಟೆ.

 6. Kallare
  30/03/2009 ರಲ್ಲಿ 7:22 ಅಪರಾಹ್ನ

  Pradeep, Sushrutha, Naagu, Ranjith, Teena ma’am…

  THANK YOU…

  Sushrutha,

  Neevu ide modlu bandaddu. aagaaga bartaa iri. ondu maatu tilsi saar..

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: