ಮುಖ ಪುಟ > ಕವನ > ಹೊರಡೋಣ ಗುರೂ…

ಹೊರಡೋಣ ಗುರೂ…

ಗುರೂ –
ಏನ್ ಸ್ಪೆಷಲ್ಲು ಇವತ್ತು?
ಎದುರು ಮನೆಯವಳು ಸುತ್ತಿದ ಈರುಳ್ಳಿ ಪದರ
ಮೆತ್ತಿ ಕಿಟಕಿಯ ಡಬಲ್ ನೋಟ
ಸೀದಾ ಸಾದಾ ನಡಿಗೆ ಸನ್ನೆ
ಎಲ್ಲಾ ಮಾಮೂಲು.
ಅಪರೂಪಕ್ಕೆಂಬಂತೆ ಹಾಸಿಗೆ ಸುರುಳಿ ಸುತ್ತಿಟ್ಟು
ಸ್ನಾನಕ್ಕೆ ಹೊರಟಿದೆ ಸಂಜೆ
ಸುತ್ತೆಲ್ಲಾ ಚೆಲ್ಲಿದ ಬಂಗಾರದ ಪರಿಮಳ

ಪಕ್ಕದ ರಸ್ತೆಯಾಗಲೇ ಬೆತ್ತಲಾಗಿದೆಯಂತೆ
ಹೊರಡೋಣ ಗುರೂ
ನಡೀ ಇಂಚಿಂಚೂ ಹುಡುಕೋಣ
ಸುತ್ತಿದಷ್ಟೂ ಮುಗಿಯದ ಚಾದರದಿಂದ
ಪ್ರಾಯದ ನಕ್ಷತ್ರ ಉದುರುತ್ತಿವೆಯಂತೆ
ಒಂದೊಂದಾಗಿ ನೋಡುವ,
ಧೈರ್ಯವಾಗಿ ಹಿಂಬಾಲಿಸಿ
ಅಳೆದು ತೂಗಿ ಆರಿಸಿ ಒಂದೆರಡು ಹೆಕ್ಕುವ.
ಬಿಟ್ಟರೆ ಬೆತ್ತಲು ಗರ್ಭದೊಳಗೆ ಸೇರಿಹೋಗುತ್ತವೆ.

ಸುಮ್ಮನಿರಬೇಕು
ಹೀಗೆ ಅಂದಿದ್ದು ಹಾಗೆ ಕೇಳಿಸಬಾರದು ನೋಡು
ಜೀವವಿಲ್ಲದಿದ್ದರೂ ಹೊಸತೆ ತೊಡುವ
ಗಾಜಿನಂಗಡಿಯ ತೊಡೆ ತೋರಿಸುವ 
ಪಿಗರ್ರಿ..ಗೂ ಕಿವಿ ಕೇಳಿಸುತ್ತದಂತೆ
ಅವುಗಳದೊಂದು ನೋಟಕ್ಕೇ ನಕ್ಷತ್ರ ಉದುರಿ
ನಲುಗುತ್ತ ಮುಲುಗುತ್ತ ಹರಟುತ್ತ
ಉರುಳುತ್ತ ಹೊರಳುತ್ತ ಹೋಳಾಗುತ್ತಾ
ಮೆತ್ತಗೆ ಕರಗುತ್ತವೆ

ಹುಂ.. ನಡೀ ಮುಂದೆ
ಎಲ್ಲಾ ಸಿಕ್ಕುವುದಿಲ್ಲ ಬಿಟ್ಟಾಕು
ಸುಮ್ಮನೇ ನೋಡು ಸಂತೋಷಪಡು
ತಮಾಷಿ ಗಿಮಾಷಿ ಎಲ್ಲಾ ಬಿಡು
ಸಾವಕಾಶವಾಗಿ ಎಲ್ಲೂ ಬೀಳದಂತೆ
ಸುಮ್ಮನೆ ಮನೆಗೆ ಬಾ

ಸಾಧ್ಯವಾದರೆ
ಮಲಗಿದಲ್ಲೇ ಒಂದೆರಡು ಕನಸು ಕಾಣೂ
ಎದ್ದು ಎರಡು ಜೊತೆ ಬಟ್ಟೆ ಹೊಲಿಸು.

Advertisements
Categories: ಕವನ ಟ್ಯಾಗ್ ಗಳು:, , ,
  1. raviyatike
    03/04/2009 ರಲ್ಲಿ 10:42 ಫೂರ್ವಾಹ್ನ

    bahala sakattagide guru!
    http://raviyatike.wordpress.com

  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: