ಮುಖ ಪುಟ > ಕವನ > ಒಂದು ನೆನಪು

ಒಂದು ನೆನಪು

 ಒಳಗಿನ ಹಸೀ ನೆನಪು ಮರುಕಳಿಸುತ್ತದೆ
ಮೂರ್ಖರ ಪೆಟ್ಟಿಗೆಯ ಜಾಹೀರಾತಿನಂತೆ
ಕೆದಕಿದರೂ ಹೊರಬರದ ಸಿದ್ಧಿ ಅದಕಿದೆ.

ಹಲವರೆಂದಂತೆ ಅದು ಅಲ್ಲೇ ದಫನ್ನಾಗಿದೆ
ಸುಮ್ಮನೆ ಸಮಾಧಿಯೂ ಏಳಬಹುದು
ಅಥವಾ ತಲ್ಲಣಿಸಿ
ಜ್ವಾಲಾಮುಖಿಯಂತೆ ಹರಿದು ಸುಡಬಹುದು.
ಕಾಡಿಗೆ ಹತ್ತಿದ ಚಟದ ಬೆಂಕಿಯಂತೆ
ಮೊಟ್ಟೆ-ಮರಿಯೆನ್ನದೆ ಎಲ್ಲವನ್ನೂ ಹೊಸಕಬಹುದು.
ಸುಮ್ಮನಿರಲು ಅದೇನು ತಂದೂರಿ ಒಲೆಯಲ್ಲವಲ್ಲ?

ಕಡತಂದ ಮಾತಿನವರು
ಖರ್ಚು ಮಾಡದೆ ಹಿಂತಿರುಗಿಸಿದರೆ ಸರಿ.
ಇಲ್ಲಾ ಭಾರೀ ಸುಂಕ ತೆರಬೇಕು.
ಮುಖದ ಮೇಲಿನ ಬೆಳ್ಳಗಿನ ನಗೆ
ನಗೆಯಷ್ಟೆ ತೋರಲಿ. ಹುಳುಕು, ಹಳಸನ್ನಲ್ಲ.
ಎಮಿಷನ್ ಟೆಸ್ಟ್ ಮಾಡಿಸದೆ
ಎಂಜಲು ಕಫ ಕೆಕ್ಕರಿಸಿ ಕಕ್ಕಿದಾಗ
ನೆನಪು ಪಾತ್ರೆಯ ಕರಕಲು ತಳ.

ಹಾದಿಬದಿಯಲ್ಲಿ ಸಿಕ್ಕ ಕಾಗದದ ಚೂರಿನಂತೆ
ಕತ್ತಲ ಕೋಣೆಯೊಳಗೋ ಇಲ್ಲಾ
ಬೆಳಕು ಬಯಲುಮಾಡಿದ ಮೂತಿಯೊಳಗೋ-ಎಲ್ಲೊ
ನೆನಪಿನ ಚೀಲ ಸಿಗುತ್ತದೆ.

ಧ್ಯಾನಮಂದಿರದ ಅನಾಥ ಮೌನದಂತೆ
ಗಾಳಿಮರದ ನಿರ್ಗತಿಕ ಶಬ್ಧದಂತೆ
ಮತ್ತೆ ಮತ್ತೆ ಬುರುಡೆ ತಟ್ಟಿ ಎಬ್ಬಿಸುತ್ತದೆ.
ಕೆಲವಂತೂ ಕಣ್ಣಿ ಕಳಚಿದ ಕೊಡದಂತೆ.
ಮುಳುಗೆಂದರೆ ಮುಳುಗದೆ, ತೇಲೆಂದರೆ ತೇಲದೆ
ಬೋರಲಾಗಿ ಮಲಗಿದ ಹೆಣದಂತೆ ಹೆದರಿಸುತ್ತವೆ.

ಒಂದಷ್ಟು ತಳಕಚ್ಚಿ ಮುಳುಗಿ ಕೂತರೆ
ಅನಾಥ ನೆನಪು ತೇಲಿ ಮೇಲೇಳುತ್ತದೆ.
ರಸ್ತೆಬದಿ ಹಗ್ಗಕ್ಕೆ ಜೋತುಬೀಳುವ
ಡೊಂಬರಾಟದ ಹುಡುಗಿಯ ಬೆರಳು
ಊಟದ ತಟ್ಟೆ ಸಿಕ್ಕರೂ ಬಾರಿಸಿದಂತೆ.

ಸುಮ್ಮನೆ ಬಂದು ಕೂರುವ ಹುಣ್ಣಿನಂತೆ
ಬಕಾಸುರನ ರಕ್ತ ಸಂಬಂಧಿ
ಚಿಕ್ಕ ಚಿಕ್ಕ ಸಂತೋಷದ ದ್ವೀಪಗಳನ್ನು ಕಬಳಿಸಿ
ನಿರ್ಭೀತಿಯಿಂದ ಝಾಂಡಿಹೊಡೆಯುತ್ತದೆ.
ನೀವಾಳಿಸಿ ಎಸೆಯುವುದೊಂದೇ ದಾರಿ
ರಸ್ತೆಬದಿ ತೊಟ್ಟಿಯಲ್ಲಿ ಸತ್ತು ಬಿದ್ದಿರಲಿ
ಹೆಸರಿಲ್ಲದೆ ಬಿದ್ದ ಅನಾಥ ಪಿಂಡದಂತೆ.

ಯಾವುದಕ್ಕೋ ಅಂಜಿದಂತಿರುವ
ಒಂದು ನೆನಪು ಅನುಮಾನಿಸುತ್ತದೆ.
ಎಡತೋಳಿನ ಕೆಳಗೆ ಕಿಸೆಯ ಜಾಗ ಸಿಗದೆ
ಸೆರಗಿನ ಚುಂಗು ನೀಲಿಗಟ್ಟಿ ಮಾಯವಾಗಿ
ಆರೋಗ್ಯವಂತ ಮಗು ಆಡುತ್ತಾ
ಅಚಾನಕ್ಕಾಗಿ ಬೋರವೆಲ್ಲಿಗೆ ಬಿದ್ದಂತೆ
ಅತಂತ್ರ ಸ್ಥಿತಿಯಲ್ಲಿದೆ.

( ಹಾಯ್ ಬೆಂಗಳೂರು ಪ್ರಕಟಿಸಿದೆ.. )

Advertisements
 1. ವೈಶಾಲಿ
  28/04/2009 ರಲ್ಲಿ 11:46 ಫೂರ್ವಾಹ್ನ

  hmm…………………………

 2. nagtalwar
  28/04/2009 ರಲ್ಲಿ 9:26 ಅಪರಾಹ್ನ

  ಪದ್ಯ ಚಂದ ಅದ ರೀ..ಮಹೆಶ್ ಜೀ..

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: