ಮುಖ ಪುಟ > ಹಾಗೆ ಸುಮ್ಮನೆ > ಹನ್ನೊಂದನೇ ಕ್ಲಾಸು..ದೇವರ ಹೆಣ.. ಹುಲುಲಿ ಹಳ್ಳ.

ಹನ್ನೊಂದನೇ ಕ್ಲಾಸು..ದೇವರ ಹೆಣ.. ಹುಲುಲಿ ಹಳ್ಳ.

ಕಾಲೇಜಿಗೆ ಹೊಸದಾಗಿ ಹೊರಟಾಗಿನ ಮಾತು. ಕ್ಲಾಸಿಗೆ ಮೊದಮೊದಲು ಹೊಕ್ಕುತ್ತಿದಾಗಿನ ಮಾತು.

ಹೆಚ್ಚೂಕಡಿಮೆ ಎಪ್ಪತ್ತರಷ್ಟು ಹುಡುಗರೂ, ಐವತ್ತರಷ್ಟು ಹುಡುಗಿಯರೂ ಮರಿಕುನ್ನಿಗಳಹಾಗೆ ಕಚ್ಚಿಕೊಳ್ಳುತ್ತ, ಅಕರಾಳ ವಿಕರಾಳ ಹೆಜ್ಜೆ ಹಾಕುತ್ತ, ಉದ್ದೂದ್ದ ಹಾಕಿಟ್ಟ ಬೆಂಚಿನಮೇಲೆ ಆಸೀನರಾಗುತ್ತಿದ್ದಂತೆ ಬರುತ್ತಿದ್ದರು ಪ್ರೊ. ’..ಮನಿ’. ಕನ್ನಡ ಉಪನ್ಯಾಸಕರು ಅವರು. ಕಾಲೇಜಿಗೆ ನಾವು – ಅಂದರೆ ಆಗಷ್ಟೇ ಹತ್ತನೇ ಕ್ಲಾಸು ಮುಗಿಸಿದ ಹುಡುಗರು, ಹುಡುಗಿಯರು- ಎಷ್ಟೇ ಹೊಸಬರೆಂದುಕೊಂಡರೂ ಈ ಕನ್ನಡ ಮಾಸ್ತರ ಬಗ್ಗೆ ಮಾತ್ರ ಹೆಚ್ಚಿನ ಎಲ್ಲಾ ಹುಡುಗರಿಗೂ ಗೊತ್ತಿತ್ತು. ಅಷ್ಟು ಪ್ರಸಿದ್ದ ವ್ಯಕ್ತಿ. ಪ್ರಸಿದ್ಧ ಅವರ ಪಾಠ. ಬೇಕಾದ ಉಳಿದೆಲ್ಲಾ ಕ್ಲಾಸಿಗೆ ತಪ್ಪಿಸಿದರೂ ಈ ಕನ್ನಡ ಪಾಠವನ್ನು ಮಾತ್ರ ತಪ್ಪಿಸುವಂತಿರಲಿಲ್ಲ ನಾವು.

ವಿಷಯ ಅದಲ್ಲ. ನಮ್ಮ ಜೊತೆಗೆ ಹನ್ನೆರಡು, ಹದಿಮೂರು ಹದಿನಾಲ್ಕನೇ ಕ್ಲಾಸಿನ ನಾಲ್ಕಾರು ಆಸಾಮಿಗಳೂ ಬರುತ್ತಿದ್ದರು. (ತಪ್ಪು ತಿಳ್ಕೋಬೇಡಿ. ನಾವು ಕರೆಸುತ್ತಿರಲಿಲ್ಲ ಅವ್ರನ್ನ. ಆಗಿನ್ನೂ ನಮ್ಮ ಕ್ಲಾಸಿನದೇ ಹುಡುಗಿಯರಷ್ಟೂ ದೊಡ್ಡವರಾಗಿರಲಿಲ್ಲ ನಾವು.) ಅವರಿಗೆ ಶ್ರೀಯುತ ಕನ್ನಡ ಉಪನ್ಯಾಸಕರ ಪಾಠ ಕೇಳುವ ಉಮೇದಿ ಒಂದುಕಡೆಯಾದರೆ, ಕಿವಿಗೆ ಗಾಳಿ ಹೊಕ್ಕಿದವರಂತೆ ಬರುತ್ತಿದ್ದ ಒಂದಷ್ಟು ಹುಡುಗಿಯರನ್ನು ಅರ್ಜೆಂಟಾಗಿ ಮಾತನಾಡಿಸುವ ಹಂಬಲ ಮತ್ತೂ ಹೆಚ್ಚಿನದು. ಒಟ್ಟಿನಲ್ಲಿ ಕನ್ನಡ ಕ್ಲಾಸು ಕಲಿಕಾ ಕೇಂದ್ರ. 

ವಿಷಯಕ್ಕೆ ಬರೋಣ; ನಮ್ಮ ಕನ್ನಡ ಮಾಸ್ತರು ಸಿಕ್ಕಾಪಟ್ಟೆ ಫೇಮಸ್ಸು ಅಂತ ಗೊತ್ತಲ್ಲ. ಅವರು ಬರುವ ಬಯಲು ಸೀಮೆ ರೀತಿ, ಅವರ ಖಡಕ್ ಇಸ್ತ್ರಿ ಮಾಡಿದ ಗೆರೆಗೆರೆ ಕೆಂಪು ಪ್ಯಾಂಟು, ಕಲರ್ ಕಲರ್ ಅಂಗಿ, ಚಾಪ್ಲಿನ್ ಮೀಸೆ ( ತಪ್ಪು ತಿಳ್ಕೋಬೇಡಿ ಚಾಪ್ಲಿನ್ ಹೆಸರು ಅಂದಿದ್ದಕ್ಕೆ. ಅಷ್ಟು ಕಷ್ಟ ಆದ್ರೆ ’ನೊಣ ಮೀಸೆ’ ಅಂತ ಬದಲಾಸಿಕೊಳ್ಳಿ ದಯವಿಟ್ಟು), ಉರುಟು ಉರುಟು ಕನ್ನಡಕ, ಒಂದು ಕರಿ ಕೈ, ಮತ್ತೊಂದು ಬಿಳಿ ಕೈ – ಚಾಕ್ ಪೀಸ್ ಪ್ರಭಾವ ಅಷ್ಟೆ-  ಕನ್ನಡ ಪುಸ್ತಕದೊಳಗೊಂದು ಚೀಟಿ ಇಟ್ಟುಕೊಂಡು ಬಂದರೆಂದರೆ… ಆಹಾ ನೋಡಿಯೇ ಆನಂದಿಸಬೇಕು ಅದನ್ನ. ನಾಲ್ಕೇ ನಾಲ್ಕು ಹೆಜ್ಜೆಗೆ ಕ್ಲಾಸಿನ ಮಧ್ಯಭಾಗವನ್ನೂ ದಾಟಿ ಹುಡುಗರ ಕಡೆಗೆ ಬಂದು ನಿಲ್ಲುತ್ತಿದ್ದರು ನಮ್ಮ ಗುರುಗಳು. ನಿಂತವರೇ ಕಷ್ಟಪಟ್ಟು ಒಮ್ಮೆ ಇಡೀ ಕ್ಲಾಸನ್ನು ಕಣ್ಣಲ್ಲೇ ಅಂದಾಜು ಮಾಡುತ್ತಿದ್ದರು. ಈ ಕಣ್ಣಂದಾಜಿನ ಕೆಲಸ ಕೇವಲ ಹುಡುಗರ ಸಾಲಿಗಷ್ಟೇ ಸೀಮಿತ. ಹುಡುಗಿಯರಿದ್ದಲ್ಲಿ ಅಪ್ಪಿತಪ್ಪಿಯೂ ನಿಲ್ಲುವುದಿಲ್ಲ, ಅವರ ದಿಕ್ಕಿನಲ್ಲಿ ನೋಡುವುದೂ ಇಲ್ಲ ಅನ್ನುವುದು ಸ್ವಲ್ಪ ಸಮಯದ ನಂತರವೇ ತಿಳಿದದ್ದು ನಮಗೆ.

ಅಷ್ಟಾದಮೇಲೆ ಪಾಠ ಪ್ರಾರಂಭ.

ನಿಮಗೆ ನೆನಪು ಇದ್ದೇ ಇರುತ್ತೆ. ಕನ್ನಡದ ಮೊದಲ ಪಾಠವಾಗಿದ್ದ ಕಥೆ ’ದೇವರ ಹೆಣ’. ಅದನ್ನು ಓದಿದ್ದರೆ ಕುಂ.ವೀ ನೆನಪಿದ್ದೇ ಇರುತ್ತಾರೆ. ನಮ್ಮ ಮಾಸ್ತರು ತಮ್ಮ ಹೆಣಭಾರದ ದೇಹ ಹೊತ್ತು ಅದೇ ಪಾಠವನ್ನು ಮಾಡಬೇಕಿತ್ತು ಅಂದು. ಆದರೆ ಅವರಿಗ್ಯಾಕೋ ಅನುಮಾನ. ’ಬೇರೆ ಕ್ಲಾಸಿನವರು ಯಾರಾದ್ರೂ ಕೂತಿದ್ದಿದ್ರೆ ಈಗ್ಲೆ ಹೊರಬೀಳ್ರಪಾ, ಇಲ್ಲಾಂದ್ರೆ ನೆಟ್ಟಗಿರಾಂಗಿಲ್ಲ ನೋಡಿ’ ಅಂತ ಅನುಮಾನಿಸುತ್ತಲೇ ಹೇಳಿ ಹಿಂದಿನ ಗೋಡೆ ನೋಡುತ್ತಿದ್ದರು. ಆದರೂ ನಮ್ಮ ಕಾಲೇಜಿನ ಪೂರ್ವಜರು! ಕುಳಿತಲ್ಲೇ ಗಪ್. ಹೊಸ ಹುಡುಗಿಯರಂತೂ ಮಾತು ಮಾತಿಗೂ ಕಿಸಕ್ ನಗೆಯಾಡುತ್ತಿದ್ದರು..

’ಠೊಣ್ಣಿಯು ಹುಲುಲಿ ಹಳ್ಳದಲ್ಲಿ’… ನಮ್ಮ ಮಾಸ್ತರು ಸರಿಯಾಗಿ ಮುಖದ ಮುಂದೆ ಪುಸ್ತಕ ಹಿಡಿದು ಮೂರಕ್ಷರ ಹೇಳುತ್ತಿದ್ದಂತೆ, ’ಬಿದ್ದು ಸತ್ತ. ಠೊಣ್ಣಿ ಸತ್ತ’ ಅಂತ ನಮ್ಮ ಸೀನಿಯರ್ ಫ್ರೆಂಡುಗಳಲ್ಲೊಬ್ಬ ಕೂಗಿಬಿಟ್ಟ. ಕ್ಲಾಸಿನ ತುಂಬ ಎಪ್ಪತ್ತು ನಮೂನೆಯ ಗಂಡು ನಗೆ, ಐವತ್ತು ಹೆಣ್ಣು ನಗೆ ತುಂಬಿ ಹರಡಿ ನಮ್ಮ ಗುರುಗಳ ಮುಖದಮೇಲೆ ನೆತ್ತಿಯ ಮುಂಭಾಗದ ರಸ್ತೆಯಿಂದ ಎಣ್ಣೆ ( ಕೊಬ್ಬರಿ ಎಣ್ಣೆ ಅಷ್ಟೆ) ಇಳಿದುಬಂದು ಮಾಸ್ತರು ಒಮ್ಮೆಗೇ ಕಂಪಿಸತೊಡಗಿದರು. ಹಾಗೂ ಹೀಗೂ ಸಾವರಿಸಿಕೊಂಡು, ಮೊದಲೇ ಹೇಳಿದೀನಿ ಹೊರಬೀಳಿ ಅಂತ. ಇನ್ನೂ ಇಲ್ಲೇ ಕೂತ್ಕೊಂಡಿರೋ ’ಗಂಡು ಯಾವೋನಲೇ ಅವನು’  ಅಂತ ಆವಾಜ್ ಹಾಕಿ ಕಂಗಾಲಾದವರಂತೆ ನಿಂತುಬಿಟ್ಟರು.

ಮತ್ತೊಂದು ಮೂಲೆಯಿಂದ ಉತ್ತರ ಸರಕ್ಕನೆ ಬಂತು – ’ನಿಮ್ಮಪ್ಪ ಕಣಲೇ’

ಅಷ್ಟರಲ್ಲಿ ಎಲ್ಲಾ ಮೂವತ್ತೆರಡು ಹಲ್ಲುಗಳನ್ನೂ ತೋರಿಸಿ ನಗುತ್ತಿದ್ದ ಹುಡುಗರೂ, ಸಪೂರ ಸಪೂರ ನಗೆಯ ಹುಡುಗಿಯರೂ ತಾವು ಎಲ್ಲಿದ್ದೇವೆ ಅನ್ನುವುದನ್ನೇ ಮರೆತಂತೆ ಗದ್ದಲವಾಯಿತು.. ಪ್ರೊ. ಕಂಗಾಲಾಗಿ ಪ್ರಾ. ಕರೆಯುವುದಕ್ಕೆ ಹೊರಟರು. ಅವರ ಹಿಂದಿನಿಂದ ಠೊಣ್ಣಿಯನ್ನು ಸಾಯಿಸಿದವರೂ, ಅವರಪ್ಪನೂ ಹೊರಟಿದ್ದಾಯ್ತು…

ಅಲ್ಲಿಗೆ ಕನ್ನಡದ ಮೊದಲ ಪಾಠ ಮುಗಿಯಿತು.

ಅಲ್ಲಲ್ಲ…ಪಾಠ ಮುಗಿದು ಹತ್ತಕ್ಕೂ ಹೆಚ್ಚು ವರ್ಷವಾಯಿತು. ಈಗ ’ಕುಂ.ವೀ’ಯನ್ನೂ, ಹುಲುಲಿ ಹಳ್ಳವನ್ನೂ ತೋರಿಸುವ, ಅಲ್ಲೇ ಒಂದೆರಡು ದಿನ ಉಳಿಸಿಕೊಂಡು ಕುಂವೀ ಪರಿಚಯ ಮಾಡಿಸಿಕೊಟ್ಟು, ಊರನ್ನೆಲ್ಲಾ ತೋರಿಸುವ ಜೊತೆಗಿಷ್ಟು ಬೇರೆ ಬೇರೆ ಯೋಚನೆಗಳಿಟ್ಟುಕೊಂಡ ಗೆಳೆಯರು ಒಂದಿಬ್ಬರು ಸಿಕ್ಕಿದ್ದಾರೆ. ಅವರು ಕರೆದ ದಿನ ಹೊರಡುವುದೊಂದ್ ಬಾಕಿ.

ಕೊಟ್ಟೂರು ಇಲ್ಲೇ ಹತ್ತಿರದಲ್ಲಿದೆ ಅಲ್ವಾ?

Advertisements
 1. Tushar
  22/05/2009 ರಲ್ಲಿ 10:11 ಫೂರ್ವಾಹ್ನ

  Hehhe.. Tonni satta..Biddu satta 🙂

 2. sumana
  22/05/2009 ರಲ್ಲಿ 10:47 ಫೂರ್ವಾಹ್ನ

  reminded me of my 1st puc class where v had a notorious boy, extremely intelligent but very naughty..who used to trouble the ‘new lecturer’!!

 3. 22/05/2009 ರಲ್ಲಿ 11:06 ಫೂರ್ವಾಹ್ನ

  ನಂದು ಫಸ್ಟ್ ಪಿ.ಯು. ಕ್ಲಾಸ್ ನೆನಪಿಸಿಬಿಟ್ರಿ,

  ಕುಂ.ವೀ.ಯವರ ದೇವರಹೆಣ, ಚದುರಂಗರ ಶವದಮನೆ ನಾನಿನ್ನು ಮರೆತಿಲ್ಲ.

  ಅದರಲ್ಲು ನಮ್ಮ ಗುರುಗಳಾದ ಡಾ. ವಿಜಯಕುಮಾರ ಕಟಗಿಹಳ್ಳಮಠರ ಆ ನಾಟಕೀಯ ಗಂಡು ದ್ವನಿ ಇನ್ನು ಕಿವಿಗಪ್ಪಳಿಸುತ್ತಿದೆ.

  ನೆನಪಿನ ಜಾತ್ರೆಗೆ ಕರೆದೊಯ್ದಕ್ಕೆ ಧನ್ಯವಾದಗಳು,

  ಪ್ರೀತಿಯಿರಲಿ

  ಶೆಟ್ಟರು

 4. nAnU barteeni!
  23/05/2009 ರಲ್ಲಿ 9:33 ಫೂರ್ವಾಹ್ನ

  hO… koTTuru dUra EnU illa 🙂
  nangU sErsi Ticket book mADsu…
  (nimmUrgantU karkonDu hOglilla… koTTUrigAdrU hOguvA anta!)

 5. 26/05/2009 ರಲ್ಲಿ 1:39 ಅಪರಾಹ್ನ

  vishya andre, nange ee pata classal maDiddu nan appane! idr bagge yavagaru baryaku..

 6. nagtalwar
  26/05/2009 ರಲ್ಲಿ 5:40 ಅಪರಾಹ್ನ

  ನೀವ್..ಯಾವಾಗ ಬರ್‍ತಿರಂತ ಹೇಳ್ಬಿಡಿ..ಕೊಟ್ಟೂರ್‍ಇಗೆ..ಕಾಯ್ತಿರ್‍ತಿವಿ..
  -ನಾಗು,ತಳವಾರ್.

 7. Kallare
  27/05/2009 ರಲ್ಲಿ 10:39 ಫೂರ್ವಾಹ್ನ

  ತುಷಾರ್,

  ಸಾಯ್ಲಿ ಬಿಡು… ನಿಂಗೆಂತ?

  ಸುಮನಾ ಮೇಡಂ,

  ನಿಮ್ಮ ನಟೋರಿಯಸ್ ಹುಡ್ಗ ಸಿಕ್ಕಿದ್ರು… ಹೊಸ ಮಾಸ್ತರನ್ನೊಂದೆ ಅಲ್ಲ ಅವ್ಳಿಗೂ ಕಾಡಿಸ್ತಿದ್ದೆ ಅಂತ ಮರ್ತಿದಾಳಾ ಅಂದ್ರು..

  ಶೆಟ್ಟರೆ,

  ಅವೆಲ್ಲಾ ಮರೆಯುವ ಪಾಠಗಳಲ್ಲ ಅಲ್ವಾ?

  ಶ್ರೀನಿಧಿ,

  ಯಾವಾಗ್ಲಾದ್ರು ಯಾಕಪ್ಪಾ? ಮೊದ್ಲು ಆ ಬಗ್ಗೆ ಬರೆಯುವ ಕೆಲಸ ಆಗ್ಲಿ..ಬಾಕಿ ನೋಡ್ವಾ.

  ನಾಗು ಜೀ,

  ನೀವು ಬಾಅ ಅಂದ್ರೆ ಬಂದೆ ನಾ…

  ನಾನೂ ಬರ್ತೀನಿ..

  ನೀವೂ ಬನ್ನಿ ಆಯ್ತಾ!

 8. srujan
  27/05/2009 ರಲ್ಲಿ 4:04 ಅಪರಾಹ್ನ

  namma puc nalli ‘devarahena’ iralilla.
  yentha adbhutha kathe allava?
  hosadaagi yenu barediddeya?

  aadina jaasthi maathadale illa.

 9. 09/06/2009 ರಲ್ಲಿ 2:11 ಅಪರಾಹ್ನ

  i didnt get opportunity to get PUC education. but it made me feel about my degree days. Kallare i love to read your writing thanks
  prasad.g

 10. 09/06/2009 ರಲ್ಲಿ 2:15 ಅಪರಾಹ್ನ

  hi kallare,
  i didnt get opportunity to get PUC as a formal education. but it made me to remember about my degree days it nice .. thank you very much.. i love to read your writings

 11. 10/06/2009 ರಲ್ಲಿ 6:40 ಫೂರ್ವಾಹ್ನ

  please bega banni.. kumvee manege hogibaruva..

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: