ಮುಖ ಪುಟ > ಕವನ > ಹೀಗೊಂದು ಆತ್ಮಹತ್ಯೆ…

ಹೀಗೊಂದು ಆತ್ಮಹತ್ಯೆ…

ಸಾಗರದಾಚಿನ ಊರಿನಲ್ಲೊಮ್ಮೆ
ಬೆಳಕಿಗೆ ಕರಿಬಣ್ಣ ಬಳಿದು
ಸುಸ್ತಾದ ಅವರೆಲ್ಲಾ ದಿಗಿಲು ಹಿಡಿದು ಹೊರಟರು

ಸ್ತಬ್ಧವಾಗಿದ್ದ ಫೋನುಗಳು ಬಡಿದುಕೊಂಡವು
ಓಡಾಡುವ ಫೋನುಗಳು ಕಿಸೆಯೊಳಗೆ
ವಿಕಾರವಾಗಿ ಕಿರುಚಿದವು
ತಂಪು ಹೊತ್ತಲ್ಲಿ ತಲೆತಿರುಗಿ
ಬಿಸಿಯಾಗಿ ಬೆವರು ಕಂಕುಳ ಮೀಸಿತು
ನಖಶಿಖಾಂತ ಉರಿದ ಹೆಂಗರುಳು
ನೂರೆರಡರ ಜ್ವರದಲ್ಲಿ ಬಳಲಿತು

ಮರ್ಯಾದೆ – ಬೆಳಕಿಗಂಜಿತು
ನೀತಿ – ಮಾತಿಗಂಜಿತು
ನಂಬಿಕೆ – ದ್ರೋಹಕ್ಕಂಜಿತು

ನಿಗದಿತ ವೇಗಕ್ಕಿಂತಲೂ ನಿಧಾನ
ಹೊರಟ ಸಮಯ
ಸಹಜ ಲಹರಿಗೆ ತಿರುಗುವ
ಮುರ್ಕಿಯ ಪಕ್ಕ ಮುಗ್ಗರಿಸಿ ಬಿದ್ದು
ಅಲ್ಲೇ ಹಲ್ಲುಜುತ್ತಿದ್ದ ಬ್ರಶ್ಶು
ನೊರೆ ನೊರೆ ನಕ್ಕುಬಿಟ್ಟಿತು

ದಿನಾ ಬರುವ ಡಾಕ್ಟರು ಬೆಳಕು ಹಿಡಿದು
ತನ್ನ ಹಡಪದೊಳಗಿಂದ ಶಸ್ತ್ರಾಸ್ತ್ರಗಳನ್ನು
ಬೇಗ ಬೇಗ ಹೊರತೆಗೆದು
ನೋವು ನಿವಾರಿಸುವ ಭರವಸೆ ನೀಡಿದರು

ಬೆಳಕು ಬಂತು
ದೂರದಲ್ಲೆಲ್ಲೋ ಸೂರ್ಯನ ಆತ್ಮಹತ್ಯೆಯಾಯಿತು.

Advertisements
Categories: ಕವನ ಟ್ಯಾಗ್ ಗಳು:
 1. srujanart
  05/06/2009 ರಲ್ಲಿ 5:02 ಅಪರಾಹ್ನ

  mahesh
  padya sogasaagide.
  ಬೆಳಕು ಬಂತು
  ದೂರದಲ್ಲೆಲ್ಲೋ ಸೂರ್ಯನ ಆತ್ಮಹತ್ಯೆಯಾಯಿತು.saalugalannu odutta odutta
  kasivisiyaythu.

 2. ವೈಶಾಲಿ
  12/06/2009 ರಲ್ಲಿ 11:18 ಅಪರಾಹ್ನ

  chandadda kavana. ishta aaytu. 🙂

  – vaishali

  http://kenecoffee.wordpress.com/

 3. chilipili
  22/06/2009 ರಲ್ಲಿ 11:24 ಫೂರ್ವಾಹ್ನ

  Wonderful imagination. I love this.

 4. 25/06/2009 ರಲ್ಲಿ 1:42 ಅಪರಾಹ್ನ

  Srujan, Vaishali, Chilipili..

  Thanx 🙂

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: