ಮುಖ ಪುಟ > ಕವನ > ತೇರಿನಾಟ

ತೇರಿನಾಟ

ನಿನ್ನೆಯಷ್ಟೆ ಮುಗಿದ ತೇರಿನ
ಮೇಲಿನ ಬೀದಿಯ ಧೂಳೆದ್ದ ಯಕ್ಷ
-ಗಾನ ಮೇಳದ ಅಬ್ಬರದ ಆಟ
ಚಂಡೆಮದ್ದಳೆಯ ನಾದ ನಡೆ
-ದು ಲಯಬದ್ಧ ಹಾಡು ನರ್ತನ
ಚೂಪು ಚೂಪು ಮಾತುಗಳೆಲ್ಲ ಮುಗಿದು
ದೇವರಮುಂದೆ ಬೆಳಗಿನ ಮಂಗಳವಾದ್ಯ ಮೊಳಗುವಾಗ
ಇಲ್ಲಿ ಟೆಂಟಿನೊಳಗೆ
ಜಯಮಂಗಳಂ ಶುಭಮಂಗಳಂ ನಡುವೆ
ಹೊರಟ ಕೆಂಪು ಕಣ್ಣುಗಳು ಹೊಂಡಬಿದ್ದ ಹೆಜ್ಜೆಗಳು
ಗೇಟುಗಳ ಹೊರಗೆ ಪಿಚಕ್ ಕವಳ
ಮಾತು ಕತೆ ವಿಮರ್ಷೆ. ನಮುನಮೂನೆ
ಪರದೆಯ ಹಿಂದೆ ಕೀರೀಟ ವಾದ್ಯಗಳಿಗೆ ವಿಶ್ರಾಂತಿ
ಪಾತ್ರಧಾರಿಯ ಗೊರಕೆ. ಬೆಳಗು ನಿದ್ದೆ

ದಿನಗಳುದ್ದಕ್ಕೂ ಕಣ್ಣುಹಾಯಿಸಿ ಹಿಡಿದು
ಕೇಳಿ ಕೇಳಿ ಪೋಣಿಸಿದ ತೂತುಗಳ ಪರ್ರನೆ ಹರಿದು
ಕಿಸೆ ನೇವರಿಸಿ ಬಿಶ್ನೀರು ಗುಟುಕರಿಸಿ ಕುಡಿದು
ಕವಳದ ರಂಗೇರಿಸಿ ರಂಗ
-ದ್ದೊಂದಿಷ್ಟು ಭಾಷಣ ಬಿಗಿದು
ಫ್ಯಾಮಿಲಿಗೆ ಫ್ಯಾಮಿಲಿಯನ್ನೇ ಮುಂಗಡವಾಗಿ
ಪಡೆದು ಹೊರಡಬೇಕು ಸ್ವಾಮಿ
ಇಲ್ಲವಾದರೆ ಆಟಕ್ಕೆ ಮಜವಿಲ್ಲ
ಆಡಿಸುವವನಿಗೆ
ಆಟಮುಗಿದರೂ ನಿದ್ದೆ ಹತ್ತುವುದಿಲ್ಲ

ಅಬ್ಬರದ ತೇರಿನಾಟಕ್ಕೆ
ರಾತ್ರಿ ಪೇಟೆಯ ಗಿಜಿಗಿಜಿ ಸಾಥ್
ಜನರೇಟರಿನ ಗುಡುಗುಡು ಶಬ್ಧ
ಎಣ್ಣೆಗದ್ದಲದ ಅಡಸಾ ಬಡಸಾ ಹೆಜ್ಜೆ
-ಗಳ ಪಕ್ಕ ಮುಗಿದ ಕೋಳಿಪಡೆ
ಮಗ್ಗುಲಿನಲ್ಲೇ ಕುಟುಕುಟಿ. ಸೂರ್ಯ ಚಂದ್ರ
ಚೌಕಟಿ ಆಟೀನು ಕಳಾವರ ಇಸ್ಪೀಟು

ಆರಾಮು ಕುರ್ಚಿಯ ತುದಿಗೆ ಕೂತು
ತಟ್ಟನೆ ಮೈರೋಮ ನೆಟ್ಟಗಾಗುವಾಗ
ಪಕ್ಕದ ಜೊಲ್ಲು ಸುರಿಸುತ್ತ ಮಲಗಿದವನನ್ನೆಬ್ಬಿಸಿ
ಕೈಬೆರಳ ಸಿಳ್ಳೆ ಹೊಡೆದು
ಪಾತ್ರದೊಡನೆ ಆಟದಲ್ಲಿ ಕಳೆದುಹೋದಾಗ
 ತಾಳ ಹಿಡಿದು ಮೊಳಗುವ ಕಂಚಿನ ಕಂಠ
 ಹುಚ್ಚೆಬಿಸುವ ಚಂಡೆಮದ್ದಳೆ ನಾದ
 ಪಾತ್ರದಲ್ಲಿ ತನ್ಮಯನಾಗಿ ಸೆರೆಹಿಡಿವ ವೇಷಧಾರಿ..
ನೋಡುತ್ತ ನೋಡುತ್ತ ಬೆಳಗಾಗುವಾಗ
ಯಕ್ಷಗಾನ ಧನ್ಯ.

Advertisements
 1. 20/06/2009 ರಲ್ಲಿ 10:24 ಫೂರ್ವಾಹ್ನ

  ತುಂಬಾ ಚೆನಾಗಿದೆ. ನನ್ನ ಬಾಲ್ಯದ ದಿನಗಳು ನೆನಪಾಯಿತು.

 2. chilipili
  22/06/2009 ರಲ್ಲಿ 11:22 ಫೂರ್ವಾಹ್ನ

  Meaning and writing is nice. I feel it would be much better if all the stanza’s were were having equal no of lines.

 3. prasad
  24/06/2009 ರಲ್ಲಿ 5:57 ಅಪರಾಹ್ನ

  nimma kavanadalli naanu gamanisida haagu ishtapatta vaishistyavendare kavandalli mai tumbi baruva baahya prapanchada vvaragalu

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: