ಮುಖ ಪುಟ > ಹಾಗೆ ಸುಮ್ಮನೆ > ಅಲ್ಲೀಗ ಭರ್ತಿ ಮಳೆ…

ಅಲ್ಲೀಗ ಭರ್ತಿ ಮಳೆ…

ಇತ್ತೀಚಿಗೆ ಕಾಲಿಗೆ ಕಟ್ಟಿಕೊಂಡ ಚಕ್ರ ಜೋರಾಗಿ ತಿರುಗುತ್ತಿದೆ. ಬೆಂದಕಾಳೂರಿನಲ್ಲಿ ಮಳೆಗೆ ಸಿಕ್ಕಿಕೊಳ್ಳುವ ಅವಕಾಶ ಇನ್ನೂ ಬಂದಿಲ್ಲವಾದರೂ ಹೋದಲ್ಲೆಲ್ಲ ಮಳೆಗೆ ಸಿಕ್ಕಿದ್ದೇನೆ. ಭರ್ತಿ ಒದ್ದೆಯಾಗಿದ್ದೇನೆ. ನೆನೆದು ಬಂದಾಗ ಸ್ನಾನಕ್ಕೆ ಬಿಸ್ಸಿಬಿಸಿ ನೀರು ಸಿಗಬೇಕು. ಸ್ನಾನ ಆಗುತ್ತಿದ್ದಂತೆ ತಟ್ಟೆಯಲ್ಲಿಷ್ಟು ಮಳೆಗಾಲದ ತಿಂಡಿಗಳೂ, ಜೊತೆಗಿಷ್ಟು ಹಬೆಯಾಡುವ ಚಾ ಇಲ್ಲ ಕಾಫಿ ಸಿಗಬೇಕು. ಬೆಚ್ಚಗೆ ಕುಳಿತು ಓದಬೇಕು.. ಅದು ಅಪರೂಪದ ಸಮಯ ಆನಿಸಿಬಿಡುತ್ತದೆ.

ಹೋದಲ್ಲಿ ಅದೆಲ್ಲ ಎಲ್ಲಿ? ಸಾಧ್ಯಾವಾದಷ್ಟೂ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳೋಣವೆಂದರೆ ಅಲ್ಲಿ ಹತ್ತು ಹಲವು ವಿಘ್ನಗಳು! ಈ ಬಾರಿ ಕೈಲಿ ಯಾವ ಪುಸ್ತಕವೂ ಇರದಿದ್ದರೂ ಒಂದಿಷ್ಟು ಅನುವಾದಗಳಿದ್ದವು. ಸುಮ್ಮನೇ ನೋಡುತ್ತ ಹೋದರೆ, ಈ ಅನುವಾದಗಳನ್ನು ಅರ್ಥೈಸಿಕೊಳ್ಳುವುದು ಬಹಳ ಕಷ್ಟ ಅನಿಸಿಬಿಟ್ಟಿತು. ಅದೊಂಥರಾ ತ್ರಾಸು. ಆದರೆ ಅದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದದ್ದು ಅನುವಾದದ ಕುರಿತಾಗಿ ಬರೆಯಲ್ಪಟ್ಟ ಈ ಸಾಲುಗಳು:

’ಭಾಷಾಂತರಕಾರರು ತದ್ವತ್ ಭಾಷಾಂತರ ಮಾಡಲು ಹೊರಟರೆ ಅನೇಕ ಬಾರಿ ಮೂಲದ ಪದ್ಯ ಕಳೆದುಹೋಗಿಬಿಡುತ್ತದೆ. ಆದ್ದರಿಂದ ಪದ್ಯದ ನಿಜವಾದ ವಿಚಾರ ಏನು ಅನ್ನುವುದನ್ನು ಗ್ರಹಿಸಿ ನಿಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿ’

ಹೆಚ್ಚಿನ ಅನುವಾದಗಳು, ಕೆಲವೊಮ್ಮೆ ದೇಶೀಯ ಭಾಷೆಗಳನ್ನು ಹೊರತುಪಡಿಸಿ, ಇಪ್ಪತ್ತಾರು ಅಕ್ಷರಗಳ ಆಂಗ್ಲಭಾಷೆಯನ್ನು ಅವಲಂಬಿಸಿರುವಾಗ ಮೂಲ ಪದ್ಯದ ಅರ್ಥ ಹೇಳುವುದು ಅಷ್ಟು ಸುಲಭವಾ? ಇಲ್ಲಿ ಮತ್ತೊಂದು ಮಾತಿದೆ ನೋಡಿ. ’ಮೂಲ ಪದ್ಯದ ಲಯದಲ್ಲಿ ಕೂಡ ಅರ್ಥ ಸಾಕ್ಷಾತ್ಕಾರಗೊಳ್ಳುವ ಕೆಲವು ಗುಣಗಳಿವೆ ಎಂದು ಕಂಡರೆ, ಆ ಬಗೆಯ ಲಯವನ್ನು ನೀವು ನಿಮ್ಮ ಭಾಷೆಯಲ್ಲಿ ತರಲು ನೋಡಬೇಕು’

ಈ ಅನುವಾದಗಳ ಸಹವಾಸ ಸಾಕು ಅನ್ನಿಸಿ ಮುಚ್ಚಿಕೊಂಡು ಬಿದ್ದಿದ್ದ! ಕಂಪ್ಯೂಟರು ಹಿಡಿದು ಹುಡುಕುತ್ತ ಹುಡುಕುತ್ತ ಹೊರಟವನಿಗೆ ಬೇಡವೆಂದರೂ ಮತ್ತೆ ಮತ್ತೆ ಎದುರಾದದ್ದು ಅದೇ ಅನುವಾದ. ಆದರೆ ಈ ಬಾರಿ ಕನ್ನಡದಿಂದ ಇಂಗ್ಲೀಷಿಗೆ. ’India – Poetry International Web’ ಎಂಬಲ್ಲಿ.  ಒಬ್ಬಬ್ಬೊಬ್ಬರನ್ನೇ ನೋಡುತ್ತ ಹೊರಟರೆ ಸಿಕ್ಕಿದ್ದು ಜಯಂತರ ನಾಲ್ಕು ಕವಿತೆಗಳು. ಅದರ ಅನುವಾದ. ಆಸಕ್ತಿ ಹುಟ್ಟಿಸುವಂತಿದ್ದ ಬರಹಗಳನ್ನು ಒಂದೊಂದಾಗಿ ಓದುತ್ತ ಹೋದೆ. ’ಬಟನ್ ಮೊಲ’ ಓಡಿಹೋದ ಪರಿ ಹೇಗೆ ದಾಖಲಾಗಿದೆ ನೋಡಿ;

A needle missing in the dark
Somewhere in a crevice a ball of thread falls loose
Oh, how many buttons there are in the market
Slowly, the rabbit breaks out of the glass
Cranes its neck to look here and there
Sniffs at all the household items
And leaps out of the tempo into the street
In search of its creator

ಕೊನೆಯ ಸಾಲುಗಳನ್ನು ಗಮನಿಸಿ ಇಲ್ಲಿ. ಮೂಲ ಪದ್ಯದ ಸಾಲುಗಳು ಹೀಗಿವೆ-

ಚಂಗನೆ ಟೆಂಪೊದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆ
ಪೋಣಿಸಿದ ತಾಯನ್ನು ಅರಸಿಕೊಂಡು

..ಮತ್ತೀಗ ಅನುವಾದಗಳ ಹಿಂದೆ ಬಿದ್ದಿದ್ದೇನೆ. ಈ ಬಾರಿ ಕನ್ನಡದಿಂದ ಅನುವಾದಗೊಂಡ ಪದ್ಯಗಳೆಡೆಗೆ. ಒಂದಿಷ್ಟು ಸರಕು ಹಿಡಿದು ಊರಿಗೆ ಹೊರಟರೆ ಅಲ್ಲೀಗ ಭರ್ತಿ ಮಳೆ. ನೀವೂ ನೋಡಿ ಈ ಅನುವಾದಗಳನ್ನು.. 

Advertisements
 1. 10/07/2009 ರಲ್ಲಿ 1:58 ಅಪರಾಹ್ನ

  Haudu. Bharti maLe…
  nAvU nODuttEve anuvAdagaLannu
  – Che

 2. ವಿಜಯರಾಜ್ ಕನ್ನಂತ
  10/07/2009 ರಲ್ಲಿ 2:43 ಅಪರಾಹ್ನ

  maLe bandashtE Joraagi barali nimma anuvaadagaloo…

 3. ವೈಶಾಲಿ
  10/07/2009 ರಲ್ಲಿ 3:12 ಅಪರಾಹ್ನ

  Malenaada male saarthakavaaytu! 😀

 4. 11/07/2009 ರಲ್ಲಿ 12:59 ಅಪರಾಹ್ನ

  malegaalada sogasannu vivarisutta, adara chanda sobagannu saviyutta,nimma kelasa nirvahisuttiruva pariyannu vivarisida reetiye vodalu chanda…:):)
  nimma anuvaadagalu adashtu bega horabarali endu harasutta…

 5. 12/07/2009 ರಲ್ಲಿ 1:36 ಅಪರಾಹ್ನ

  ವ್ಹಾ!!! ಕಲ್ಲರೆ

 6. rajendra prasad
  12/07/2009 ರಲ್ಲಿ 3:44 ಅಪರಾಹ್ನ

  kayutta iddini maare… yavaga nimma anuvaada nanna kaigiduvudu?

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: