Archive

Posts Tagged ‘ಎರಡು ಹನಿ’

ಉಳಿದುಹೋದ ಹನಿ…

ಮುಳುಗಿಕುಳಿತಿದೆ ಒಳಗಿನ ಮಾತು.
ಹಾಗೆಲ್ಲಾ ಉಕ್ಕೇರಲು
ಸಮುದ್ರದ ಅಲೆಯಲ್ಲ

ಇನ್ನು
ಕರಿಯ ಕಾಡಾಗಬಹುದು
ಕತ್ತಲಾಗಬಹುದು
ಭರತದಬ್ಬರದ ನಡುವೆ
ಹರಿಯುವ ಬೆಳದಿಂಗಳೂ ಆಗಬಹುದು.

ಬೇಕಿರುವುದಷ್ಟೆ
ನಿತ್ಯ ಹರಡುವ ತಂಪು.

ಖಾಯಂ ಉಳಿದಿರುವುದು
ಅದೇ ಹರಿವು, ಅದೇ ಬೆಳಕು
ಅದೇ ಭೋರ್ಗರೆತ
ಹಾಗೂ
ಉಳಿದುಹೋದ ಎರಡು ಹನಿ.